ಅಂಚೆ ಇಲಾಖೆಯಲ್ಲಿ ರಾಜ್ಯಾದ್ಯಂತ ಉದ್ಯೋಗಾವಕಾಶ। ಉಚಿತವಾಗಿ ಅರ್ಜಿ ಸಲ್ಲಿಸಿ.
ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ರೆ ನೀವು ಕೇಂದ್ರ ಸರ್ಕಾರದ ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದು ಉಚಿತ ಸಹ ಕರ್ನಾಟಕದಾದ್ಯಂತ ಗ್ರಾಮೀಣ್ ಡಾಕ್ ಸೇವಕ್ 3036 ಹುದ್ದೆಗಳು ಖಾಲಿ ಇದ್ದು SSLC ಪಾಸಾದ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು.
ಹೇಗೆ ಅರ್ಜಿ ಸಲ್ಲಿಸಬೇಕು ?
ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ?
ನಿಮಗೆ ಯಾವ ಜಿಲ್ಲೆಗೆ ಅವಕಾಶ ಬೇಕು ? ಇದರ ಮಾಹಿತಿ ಈ ಕೆಳಗಿನಂತಿದೆ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ https://indiapostgdsonline.cept.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ರಾಜ್ಯದಲ್ಲಿ ಖಾಲಿಯಿರುವ ಜಿಲ್ಲಾವಾರು ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ.
ಬೆಂಗಳೂರು ಪೂರ್ವ - 90 ಹುದ್ದೆಗಳು
ಬೆಂಗಳೂರು ದಕ್ಷಿಣ - 120 ಹುದ್ದೆಗಳು
ಬೆಂಗಳೂರು ಪಶ್ಚಿಮ - 53 ಹುದ್ದೆಗಳು
ಬೆಂಗಳೂರು GPO - 6 ಹುದ್ದೆಗಳು
ಕೊಡಗು - 73 ಹುದ್ದೆಗಳು
ಬಾಗಲಕೋಟೆ - 55 ಹುದ್ದೆಗಳು
ಬಳ್ಳಾರಿ - 103 ಹುದ್ದೆಗಳು
ಬೆಳಗಾವಿ - 98 ಹುದ್ದೆಗಳು
ಬೀದರ್ - 40 ಹುದ್ದೆಗಳು
ಚನ್ನಪಟ್ಟಣ - 119 ಹುದ್ದೆಗಳು
ಚಿಕ್ಕಮಗಳೂರು - 116 ಹುದ್ದೆಗಳು
ಚಿಕ್ಕೋಡಿ - 59 ಹುದ್ದೆಗಳು
ಚಿತ್ರದುರ್ಗ - 84 ಹುದ್ದೆಗಳು
ದಾವಣಗೆರೆ (DO) - 67 ಹುದ್ದೆಗಳು
ಧಾರವಾಡ - 67 ಹುದ್ದೆಗಳು
ಗದಗ - 115 ಹುದ್ದೆಗಳು
ಗೋಕಾಕ್ - 34 ಹುದ್ದೆಗಳು
ಹಾಸನ್ - 100 ಹುದ್ದೆಗಳು
ಹಾವೇರಿ - 89 ಹುದ್ದೆಗಳು
ಕಲಬುರಗಿ - 74 ಹುದ್ದೆಗಳು
ಕಾರವಾರ - 63 ಹುದ್ದೆಗಳು
ಕೋಲಾರ - 165 ಹುದ್ದೆಗಳು
ಮಂಡ್ಯ - 40 ಹುದ್ದೆಗಳು
ಮಂಗಳೂರು - 95 ಹುದ್ದೆಗಳು
ಮೈಸೂರು - 73 ಹುದ್ದೆಗಳು
ನಂಜನಗೂಡು - 76 ಹುದ್ದೆಗಳು
ಪುತ್ತೂರು - 113 ಹುದ್ದೆಗಳು
ರಾಯಚೂರು - 74 ಹುದ್ದೆಗಳು
RMS Q - 10 ಹುದ್ದೆಗಳು
ಶಿವಮೊಗ್ಗ - 147 ಹುದ್ದೆಗಳು
ಶಿರಸಿ - 78 ಹುದ್ದೆಗಳು
ತುಮಕೂರು - 171 ಹುದ್ದೆಗಳು
RMS HB - 1 ಹುದ್ದೆಗಳು
ಯಾದಗಿರಿ - 38 ಹುದ್ದೆಗಳು
ಉಡುಪಿ - 68 ಹುದ್ದೆಗಳು
ವಿಜಯಪುರ - 89 ಹುದ್ದೆಗಳು
ಒಟ್ಟು ಹುದ್ದೆಗಳು 3036
ಅರ್ಹತಾ ಮಾನದಂಡಗಳು ಇಂತಿವೆ :
ಈ ಹುದ್ದೆಗಳಿಗೆ 10ನೇ ತರಗತಿಯಲ್ಲಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ ಎಷ್ಟು ?
ಈ ಹುದ್ದೆಗಳಿಗೆ 18 ರಿಂದ 40 ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ವಯೋಮಿತಿಯನ್ನು ಫೆಬ್ರುವರಿ 16, 2023ಕ್ಕೆ ಅನುಗುಣವಾಗಿ ಲೆಕ್ಕ ಹಾಕಲಾಗುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು SC/ST ಅಭ್ಯರ್ಥಿಗಳಿಗೆ 5 ವರ್ಷಗಳು, PWD ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಿಲ್ಲ.
ಆಯ್ಕೆ ಪ್ರಕ್ರಿಯೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಇದಾದ ಬಳಿಕ ಸಂದರ್ಶನಕ್ಕೆ ಕರೆದು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಮಾಸಿಕ ವೇತನ ಎಷ್ಟು ?
ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ - 12 ಸಾವಿರದಿಂದ 29,380ರೂ ವರೆಗೆ ವೇತನ ನೀಡಲಾಗುತ್ತದೆ.
ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ /ಡಾಕ್ ಸೇವಕ್ ಹುದ್ದೆಗಳಿಗೆ - 10 ಸಾವಿರದಿಂದ 24,470 ರೂ ವರೆಗೆ ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರುವರಿ - 16, 2023