ಇದರ ಮೊಟ್ಟೆಗೆ ಚಿನ್ನದ ಬೆಲೆ : ಈ ಕಾಡು ಕೋಳಿ ಸಾಕಾಣಿಕೆ ಮಾಡಿದ್ರೆ ಗಳಿಸಬಹುದು ಲಕ್ಷ ಲಕ್ಷ ಆದಾಯ 👇👇

 

ಇದರ ಮೊಟ್ಟೆಗೆ ಚಿನ್ನದ ಬೆಲೆ : ಈ ಕಾಡು ಕೋಳಿ ಸಾಕಾಣಿಕೆ ಮಾಡಿದ್ರೆ ಗಳಿಸಬಹುದು ಲಕ್ಷ ಲಕ್ಷ ಆದಾಯ 👇👇




 

ಅತಿ ಹೆಚ್ಚು ಲಾಭ ಹಾಗೂ ಕಡಿಮೆ ವೆಚ್ಚದಲ್ಲಿ ನೀವು ಆರಂಭಿಸಬಹುದಾದ ಮತ್ತೊಂದು ಉದ್ಯಮ ಅಂದ್ರೆ ಈ ಒಂದು ಪುಟ್ಟ ಹಕ್ಕಿಯ ಸಾಕಾಣಿಕೆ ಅದುವೇ, ಫೆಸೆಂಟ್ ಹಕ್ಕಿ ( Pheasant Bird Business)

ಇತ್ತೀಚಿನ ದಿನಗಳಲ್ಲಿ ಕೋಳಿ ಫಾರ್ಮಿನ್ಗ್ ಎನ್ನುವುದು ಬಹಳ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇದಕ್ಕೆ ಮುಖ್ಯ ಕಾರಣ ನಾಟಿ ಕೋಳಿ ಮಾಂಸ ಹಾಗೂ ಮೊಟ್ಟೆಗೆ ಹೆಚ್ಚುತ್ತಿರುವ ಬೆಲೆ.

ನಾಟಿ ಕೋಳಿಯ ಮಾಂಸ ಹಾಗೂ ಮೊಟ್ಟೆ ಹೆಚ್ಚು ಪೌಷ್ಠಿಕಾಂಶದಿಂದ ಕೂಡಿರುತ್ತದೆ ಎನ್ನುವ ಕಾರಣಕ್ಕೆ ಜನರು ಹೆಚ್ಚಾಗಿ ಇದನ್ನು ಸೇವಿಸಲು ಇಷ್ಟಪಡುತ್ತಾರೆ. ಈ ಕಾರಣಕ್ಕೆ ಕೋಳಿ ಫಾರ್ಮ್ ಬಹಳ ಫೇಮಸ್ ಆಗಿದೆ.

ಆದರೆ, ಇದಕ್ಕಿಂತಲೂ ಅತಿ ಹೆಚ್ಚು ಲಾಭ ಹಾಗೂ ಕಡಿಮೆ ವೆಚ್ಚದಲ್ಲಿ ನೀವು ಆರಂಭಿಸಬಹುದಾದ ಮತ್ತೊಂದು ಉದ್ಯಮ ಅಂದ್ರೆ ಈ ಒಂದು ಪುಟ್ಟ ಹಕ್ಕಿಯ ಸಾಕಾಣಿಕೆ, ಅದುವೇ ಫೆಸೆಂಟ್ ಹಕ್ಕಿ ಅಥವಾ ಗೌಜಿಗನ ಹಕ್ಕಿ.

ಫೆಸೆಂಟ್ ಹಕ್ಕಿ ಸಾಕಾಣಿಕೆ ಹೇಗೆ ?

ಈ ಹಕ್ಕಿಯ ಸಾಕಾಣಿಕೆ ಬಹಳ  ಸುಲಭ. ನಿರ್ವಹಣಾ ವೆಚ್ಚವು ಕಡಿಮೆ ಹಾಗಾಗಿ ನೀವು ಹೆಚ್ಚು ಬಂಡವಾಳ ಹೂಡಿಕೆ ಮಾಡುವ ಅಗತ್ಯವಿಲ್ಲ. ಒಂದು ಸಾವಿರ ಹಕ್ಕಿಗಳನ್ನು ಸಾಕಿದರೆ ಕೇವಲ ಒಂದು ವರ್ಷಗಳಲ್ಲಿ ನೀವು ಲಕ್ಷಾಧಿಪತಿಗಳಾಗಬಹುದು.

ಫೆಸೆಂಟ್ ಹಕ್ಕಿ ಕೇವಲ ಎರಡು ಚದರ್ ಅಡಿಗಳಲ್ಲಿ ಸಾಕಾಣಿಕೆಗೆ ಮಾಡಬಹುದು. ಸಣ್ಣ ಪ್ರಮಾಣದಲ್ಲಿ ಈ ಹಕ್ಕಿ ಸಾಕಾಣಿಕೆ ಮಾಡಿದರೆ ನಂತರದ ದಿನಗಳಲ್ಲಿ ನಿಮ್ಮ ಉದ್ಯಮವನ್ನು ವಿಸ್ತರಿಸಿಕೊಳ್ಳಬಹುದು.

ನಮ್ಮ ದೇಶದ ಇತರ ನಮ್ಮ ದೇಶದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಈ ಹಕ್ಕಿಯ ಕೃಷಿ ಸ್ವಲ್ಪ ಕಡಿಮೆ ಇರಬಹುದು. ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯಗಳಲ್ಲಿಯೂ ಕೂಡ ಫೆಸೆಂಟ್ ನ ಉತ್ತಮ ತಳಿಗಳ ಸಾಕಾಣಿಕೆ ಆರಂಭವಾಗಿದೆ. ಇದು ಒಂದು ಕಾಡು ಪಕ್ಷಿ ಆಗಿದ್ದು, ಇದರ ಮಾಂಸಕ್ಕೆ ಇರುವ ಬೆಲೆ ಹಾಗು ಬೇಡಿಕೆ ಹೆಚ್ಚು.

ಫೆಸೆಂಟ್ ಹಕ್ಕಿ ಬಹಳ ಪುಟ್ಟದಾಗಿರುವ ಹಕ್ಕಿ ಇದನ್ನು ನವಿಲು ಜಾತಿಗೆ ಸೇರಿದ ಹಕ್ಕಿ ಎಂದು ಹೇಳಲಾಗುತ್ತದೆ. ಈ ಹಕ್ಕಿ ಕಾಡು ಹಕ್ಕಿ ಆಗಿದ್ದು, ಕೋಳಿ ಸಾಕಾಣಿಕೆಯಂತೆ ಪರವಾನಗಿ ಇಲ್ಲದೆ ಸಾಕಾಣಿಕೆ ಮಾಡಲು ಸಾಧ್ಯವಿಲ್ಲ. ಫೆಸೆಂಟ್ ಹಕ್ಕಿ ಸಾಕಾಣಿಕೆಗೆ  ಸಂಬಂಧ ಪಟ್ಟ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕು.

ವರ್ಷಕ್ಕೆ ೩೦೦  ಮೊಟ್ಟೆ ಇಡುವ ಚಿನ್ನದ ಹಕ್ಕಿ:

ಯಾಕೆ ನಾವು ಚಿನ್ನದ ಮೊಟ್ಟೆ ಇಡುವ ಹಕ್ಕಿ ಎಂದು ಹೇಳಬಹುದು ? ಯಾಂಕೇಂದ್ರೆ ವರ್ಷಕ್ಕೆ 250 ರಿಂದ 300 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಈ ಪುಟ್ಟ ಹಕ್ಕಿಗೆ ಇದೆ. ನೆಲದ ಮೇಲೆ ಮೊಟ್ಟೆಗಳನ್ನು ಇಡಬಲ್ಲ ಹಕ್ಕಿ ಇದು. ಹಾಗಾಗಿ ನೀವು ಮನೆಯಲ್ಲಿಯೇ ಒಂದು ಸಣ್ಣ ಶೆಡ್ ಮಾಡಿ ಅದರಲ್ಲಿ ಹಾಕಿ ಸಾಕಾಣಿಕೆ ಮಾಡಬಹುದು.


whatss

ನೀವು ಸುಮಾರು ಸಾವಿರ ಹಕ್ಕಿಗಳನ್ನು ಸಾಕೋದಾದ್ರೆ 25 ರಿಂದ 30 ಸಾವಿರ ರೂಪಾಯಿಗಳ ವೆಚ್ಚ ಇರುತ್ತದೆ. ಇದಕ್ಕೆ ಕೊಡಬೇಕಾಗಿರುವ ಆಹಾರವು ಕಡಿಮೆ, ದಿನದಲ್ಲಿ ಎರಡು ಬಾರಿ 100 ರಿಂದ 200 ಗ್ರಾಂ ಗಿಂತಲೂ ಕಡಿಮೆ ಆಹಾರ ಕೊಟ್ಟರೆ ಸಾಕು. ಪ್ರತಿಯೊಂದು ಹಕ್ಕಿಯು 2 ಕೆಜಿ. ಗಳಿಗಿಂತಲೂ ಕಡಿಮೆ ತೂಕ ಹೊಂದಿರುತ್ತದೆ.

ಮಾಂಸ ಹಾಗೂ ಮೊಟ್ಟೆಯ ಬೆಲೆ !

ಫೆಸೆಂಟ್ ಹಕ್ಕಿಯ ಮಾಂಸ ಹಾಗೂ ಮೊಟ್ಟೆಗೆ ಹೆಚ್ಚಿನ ಬೇಡಿಕೆ ಇದೆ. ಇದಕ್ಕೆ ಮುಖ್ಯವಾದ ಕಾರಣ ಈ ಹಕ್ಕಿಯ ಮಾಂಸದಲ್ಲಿ ಇರುವ ಪೌಷ್ಠಿಕಾಂಶ ಗುಣ. ಮಧುಮೇಹ, ಅಸ್ತಮಾ, ಹೃದ್ರೋಗಗಳಿಗೆ ಈ ಹಕ್ಕಿಯ ಮಾಂಸ ರಾಮಬಾಣ ಎಂದು ಸಂಶೋಧನಗಳ ಮೂಲಕ ತಿಳಿದು ಬಂದಿದೆ. 

ಕೊಬ್ಬು, ಪ್ರೊಟೀನ್ ಕಾರ್ಬೋಹೈಡ್ರೇಟ್ಸ್, ಮೊದಲಾದ ಪೌಷ್ಠಿಕಾಂಶಗಳನ್ನು ಈ ಪುಟ್ಟ ಹಕ್ಕಿಯ ಮಾಂಸದಲ್ಲಿ ಇದೆ. ಇನ್ನು ಬೆಲೆ ನೋಡುವುದಾದರೆ, ಒಂದು ಕೆಜಿ ಮಾಂಸಕ್ಕೆ 80 ರಿಂದ 100 ರೂಪಾಯಿಗಳು. ಹಾಗೂ ನೀವು ಮೊಟ್ಟೆಗಳನ್ನು ಹೋಲ್ ಸೆಲ್ ನಲ್ಲಿ ಮಾರಾಟ ಮಾಡುವುದಾದರೆ ಒಂದು ಮೊಟ್ಟೆಗೆ 40 ರಿಂದ 50 ರೂಪಾಯಿಗಳ ವರೆಗೂ ಮಾರಾಟ ಮಾಡಬಹುದು.

ಫೆಸೆಂಟ್ ಹಕ್ಕಿಯ ಮಾಂಸ ಹಾಗೂ ಮೊಟ್ಟೆಯ ಬೇಡಿಕೆ ಕೆಲವು ಸಮಯದಲ್ಲಿ ಅತಿ ಹೆಚ್ಚು ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಕೋಳಿ ಅಂಗಡಿಗಳಲ್ಲಿ ಈ ಹಕ್ಕಿಯ ಮಾಂಸವನ್ನು ಕೂಡ ಮಾರಾಟ ಮಾಡಲಾಗುತ್ತದೆ. ಹಾಗಾಗಿ ನೀವು ಕೇವಲ ಸಾವಿರ ಹಕ್ಕಿಗಳನ್ನು ಇಟ್ಟುಕೊಂಡು ಉದ್ಯಮ ಆರಂಭಿಸುವುದಾದರೆ ಒಂದರಿಂದ ಒಂದೂವರೆ ಲಕ್ಷ ಆದಾಯವನ್ನು ಪ್ರತಿ ತಿಂಗಳು ಗಳಿಸಬಹುದು. ಇದು ಕೂಡ ಕಾಡು ಹಕ್ಕಿ ಆಗಿರುವುದರಿಂದ ಸಾಕಾಣಿಕೆಗೆ ಪರವಾನಗಿ ಅಗತ್ಯ ಎಂಬುದು ನೆನಪಿರಲಿ.



 










2 ಕಾಮೆಂಟ್‌ಗಳು

ನವೀನ ಹಳೆಯದು