ಅಕ್ರಮವಾಗಿ ಸಾಗಿಸುತ್ತಿದ್ದ 24 ಲಕ್ಷ ರೂಪಾಯಿ ಸೀಜ್ !
ಅಕ್ರಮವಾಗಿ ಹಣ ಸಾಗಿಸುತ್ತಿದ್ದ 24 ಲಕ್ಷ ರುಪೆಯಿ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಗದಗ ತಾಲೂಕಿನ ಮುಳುಗುಂದ ಪಟ್ಟಣದ ಬಳಿಯ ಬಸಾಪುರ ಚೆಕ್ ಪೋಸ್ಟ್ ನಲ್ಲಿ ಸೀಜ್ ಮಾಡಲಾಗಿದೆ. ಎರಡು ಪ್ರತ್ಯೇಕ ವಾಹನದಲ್ಲಿ ಹಣ ಸಾಗಿಸುವಾಗ, ಚುನಾವಣಾ ಹಿನ್ನಲೆಯಲ್ಲಿ ಸ್ಥಾಪನೆ ಮಾಡಿರುವ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡುವಾಗ ಸೂಕ್ತವಾದ ದಾಖಲೆಯಿಲ್ಲದ ಸಾಗಿಸಲಾಗುತ್ತಿತ್ತು.
ಎರಡು ಪ್ರತ್ಯೇಕ ವಾಹನದಲ್ಲಿ, ದಾವಣಗೆರೆಯಿಂದ ಗದಗ ಕಡೆಗೆ ಹಣ ತೆಗೆದುಕೊಂಡು ಹೊರಟಿದ್ದ ಪ್ರಯಾಣಿಕರ ಕರಲ್ಲಿ 20 ಲಕ್ಷ 50 ಸಾವಿರ ಹಾಗೂ ಬಾದಾಮಿ ತಾಲೂಕಿನ ಜಾಲಿಹಾಳದಿಂದ ಲಕ್ಮೇಶ್ವರ ಕಡೆಗೆ ಹೊರಟಿದ್ದ ಕರಲ್ಲಿ 4 ಲಕ್ಷ ನಗದು ಸೀಜ್ ಮಾಡಲಾಗಿದೆ. ಸ್ಥಳಕ್ಕೆ ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದರು. ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Gadag