ಏನೆಲ್ಲಾ ಕೆಲಸಗಳಿವೆ? ಅರ್ಜಿ ಹಾಕುವುದು ಹೇಗೆ? ಇಲ್ಲಿದೆ ವಿವರ:
ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇನ್ನು ಕೆಲವೇ ದಿನ ಮಾತ್ರ ಬಾಕಿ ಇದೆ. ಇಲ್ಲಿ ನೊಕರಿ ಪಡೆಯುವದಕ್ಕಿಂತ ದೊಡ್ಡ ಭಾಗ್ಯ ಬೇರೊಂದಿಲ್ಲ ಎಂದು ಹಲವು ಭಕ್ತರು ನಂಬುತ್ತಾರೆ. ಟಿಟಿಡಿಯಲ್ಲಿ ಕೆಲಸ ಸಿಕ್ಕರೆ ಜೀವನವು ಸ್ಥಿರವಾಗಿದೆ ಎಂದು ಭಕ್ತರು ಭಾವಿಸುತ್ತಾರೆ.
ಸದ್ಯ ಟಿಟಿಡಿಯಲ್ಲಿ 50ಕ್ಕೂ ಹೆಚ್ಚು ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ತಕ್ಷಣ ಹೀಗೆ ಮಾಡಬಹುದಾಗಿದೆ.
ಟಿಟಿಡಿಯ ಕೆಲವು ವಿಭಾಗದಲ್ಲಿ ಸಿಬ್ಬಂಧಿ ಕೊರತೆ ಇದ್ದಾಗ ಟಿಟಿಡಿ ಉದ್ಯೋಗ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತದೆ. ಪ್ರಸ್ತುತ ಟಿಟಿಡಿ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸುಮಾರು 56 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸುತ್ತಿದೆ.
AEE ಸಿವಿಲ್ ನಲ್ಲಿ 27 ಹುದ್ದೆಗಳು ಖಾಲಿ ಇವೆ. 12, BCA ಗೆ 2, BCB ಗೆ 2, BCD ಗೆ 2, SC ಗೆ 5, ST ಗೆ 2 ಮತ್ತು EWS ಗೆ 2 ಹುದ್ದೆಗಳಿವೆ. ಅಭ್ಯರ್ಥಿಗಳು BE ಸಿವಿಲ್, ಮೆಕ್ಯಾನಿಕಲ್ ಓದಿರಬೇಕು. ವೇತನ ಶ್ರೇಣಿ 57,100 ರಿಂದ 1,47,760 ಆಗಿರುತ್ತದೆ.
AE ಸಿವಿಲ್ ನಲ್ಲಿ 10 ಹುದ್ದೆಗಳನ್ನು ಭರ್ತಿ ಮಾಡಲು ಟಿಟಿಡಿ ಸಿದ್ಧತೆ ನಡೆಸಿದೆ. OC ಗೆ 3, BCB ಗೆ 1, BCA ಗೆ 1, BCD ಗೆ 1, SC ಗೆ 2 ಮತ್ತು EWS ಗೆ 1 ಹುದ್ದೆಗಳಿವೆ.
ಅಭ್ಯರ್ಥಿಗಳು SSLC ತೇರ್ಗಡೆಯಾಗಿರಬೇಕು. ಇದೆ ರೀತಿಯ ಕೋರ್ಸ್ ಹೊಂದಿರಬೇಕು. ವೇತನ ಪ್ರಮಾಣವು 48,440 ರಿಂದ 1,37,220 ರವರೆಗೆ ಇರುತ್ತದೆ.
ಅಭ್ಯರ್ಥಿಗಳು ಜುಲೈ 1ಕ್ಕೆ 42 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 23/11/2023 TTD https://ttd-recruitment.aptonline.in ಮೂಲಕ ಅರ್ಜಿ ಸಲ್ಲಿಸಲು ಸೂಚಿಸಿದೆ.
ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಹಿಂದುಗಳಾಗಿರಬೇಕು. ಎಂದು ಷರತ್ತು ವಿಧಿಸಲಾಗಿದೆ. ವಯಸ್ಸು ವೇತನಶ್ರೇಣಿ, ವಿದ್ಯಾರ್ಹತೆಗಳು, ಇತರ ನಿಯಮಗಳನ್ನು ತಿಳಿಯಲು ವೆಬ್ಸೈಟ್ ಭೇಟಿ ನೀಡಿ. www.tirumala.org