ಬಿಯರ್ ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು ; ಲೈಸನ್ಸ್ ಹೊಂದಿದ್ದ ಮಾಲಿಕನಿಗೆ 75,000 ರೂ ದಂಡ !

ಬಿಯರ್ ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು ;  ಲೈಸನ್ಸ್ ಹೊಂದಿದ್ದ ಮಾಲಿಕನಿಗೆ 75,000 ರೂ ದಂಡ !

ಬಾರ್ ಲೈಸನ್ಸ್ ಹೊಂದಿದ್ದವನಿಗೆ 75,000 ರೂ ದಂಡ:


 



       ಮಾತನಾಡಿರುವ ಅಬಕಾರಿ ಅಧಿಕಾರಿಯೊಬ್ಬರು, ಮೊದಲ ಬಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಈ ದಂಡ ವಿಧಿಸಲಾಗಿದೆ. ಮತ್ತೊಮ್ಮೆ ಉಲ್ಲಂಘಿಸಿದರೆ ಒಂದೂವರೆ ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಇದು ಮರುಕಳಿಸಿದರೆ ಶಾಶ್ವತವಾಗಿ ಲೈಸನ್ಸ್ ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಮದ್ಯದ ಅಂಗಡಿಯಲ್ಲಿ ಇತರೆ ಬ್ರಾಂಡ್ ಗಳ ಮೇಲೆ ಹತ್ತು ರೂ. ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಜೈಲಿಗೆ ಕಳುಹಿಸಲಾಗಿದೆ.

ನೋಯಿಡಾದ ಜಲಾಲ್ಪುರ್ ಏರಿಯಾದಲ್ಲಿದ್ದ ಮದ್ಯದಂಗಡಿ ಒಂದರಲ್ಲಿ 500 ಎಂ ಎಲ್ ನ ಕಿಂಗ್ ಫಿಶರ್ ಸ್ಟ್ರಾಂಗ್ ಬಿಯರ್ ಗೆ ರವಿ ಸಿಂಗ್ ಎಂಬಾತ 120 ರೂ.ಬದಲಿಗೆ 120 ರೂಪಾಯಿ ವಸೂಲಿ ಮಾಡಿದ್ದ. ಅಲ್ಲದೆ ಈ ಮದ್ಯದ ಅಂಗಡಿಯಲ್ಲಿ ಇತರೆ ಬ್ರಾಂಡ್ ಗಳ ಮೇಲೂ ಹತ್ತು ರೂಪಾಯಿಗಳಿಂದ ಇಪ್ಪತ್ತು ರೂಪಾಯಿಗಳ ವರೆಗೆ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿರುವ ದೂರು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಹಕನ ಸೋಗಿನಲ್ಲಿ ವ್ಯಕ್ತಿಯೊಬ್ಬನನ್ನು ಕಳುಹಿಸಿದ್ದು, ಬಿಯರ್ ಗೆ ಹೆಚ್ಚುವರಿ 10 ರೂಪಾಯಿ  ಪಡೆದಿದ್ದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಆರೋಪಿ ರವಿ ಸಿಂಗ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲ ಬಾರ್ ಲೈಸನ್ಸ್ ಹೊಂದಿದ್ದ ಮಾಲಿಕನಿಗೆ ಬರೋಬ್ಬರಿ 75,000 ರೂಪಾಯಿ ದಂಡ ವಿಧಿಸಲಾಗಿದೆ.




ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು