ಹೆರಿಗೆ ರಜೆಯಲ್ಲಿಯೇ ಪರೀಕ್ಷೆ ತಯಾರಿ ನಡೆಸಿ ಐಪಿಎಸ್ ಅಧಿಕಾರಿಯಾದ ಐಟಿ ಉದ್ಯೋಗಿ......!

 ಹೆರಿಗೆ ರಜೆಯಲ್ಲಿಯೇ ಪರೀಕ್ಷೆ ತಯಾರಿ ನಡೆಸಿ ಐಪಿಎಸ್ ಅಧಿಕಾರಿಯಾದ ಐಟಿ ಉದ್ಯೋಗಿ......!





ಕೇಂದ್ರ ಲೋಕ ಸೇವಾ ಆಯೋಗದ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಪಾಸಾಗಲು ದೇಶದ ಯುವ ಜನತೆ ಎಲ್ಲಿಲ್ಲದ ಕಸರತ್ತು ನಡೆಸುತ್ತಾರೆ. ಆದರೆ ಇಲ್ಲೊಬ್ಬರ ಐಟಿ ಉದ್ಯೋಗಿ ತಮಗೆ ನೀಡಿರುವ ಹೆರಿಗೆ ರಜೆಯಲ್ಲಿಯೇ ಪರೀಕ್ಷೆ ತಯಾರಿ ನಡೆಸಿ ಯಶಸ್ಸು ಕಾಣುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನೀವು SBI ಕ್ರೆಡಿಟ್ ಕಾರ್ಡ್ ಹೊಂದಿರುವಿರಾ ? ಹಾಗಿದ್ರೆ ತಪ್ಪದೆ ಈ ಮಾಹಿತಿ ತಿಳಿಯಿರಿ

ಐಪಿಎಸ್ ಅಧಿಕಾರಿ ಶಹನಾಜ್ ಇಲಿಯಾಸ್ ಸಹ ಐಟಿ ಕ್ಷೇತ್ರದಲ್ಲಿ ಐದು ವರ್ಷಗಳ ಕಾಲ ದುಡಿದವರು.  ಕೆಲಸವನ್ನು ಅಷ್ಟಾಗಿ ಇಷ್ಟ ಪಡದ ಶಹನಾಜ್, ಸಮಾಜದಲ್ಲಿ ಇನ್ನಷ್ಟು ಪ್ರತಿಷ್ಠಿತ ಸ್ಥಾನಮಾನ ಅರಸಿ ಯು ಪಿ ಎಸ್ ಸಿ ಪರೀಕ್ಷೆ ತೆಗೆದುಕೊಂಡು ಅದರಲ್ಲಿ ಸಫಲರಾಗಿದ್ದಾರೆ.

ಹೆರಿಗೆ ರಜೆ ಮೇಲಿದ್ದ ಶಹನಾಜ್, ತಮ್ಮ ಈ ರಜಾ ಅವಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದ್ದೇಶದಿಂದ ಸರ್ಕಾರಿ ಕೆಲಸ ಸೇರುವತ್ತ ಪ್ರಯತ್ನ ಆರಂಭಿಸಿದರು. ಇದೆ ಹುಮ್ಮಸ್ಸಿನಲ್ಲಿ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದರು. ತಯಾರಿ ನಡೆಸಲು ಕೇವಲ ಎರಡು ತಿಂಗಳು ವ್ಯಯಿಸಿದ ಶಹನಾಜ್, ಒಂಬತ್ತು ತಿಂಗಳ ತುಂಬು ಗರ್ಭಿಣಿಯಾದ ವೇಳೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದಾರೆ.

2020 ರ ಯು ಪಿ ಎಸ್ ಸಿ ನಾಗರೀಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಶಹನಾಜ್, ತಮ್ಮ ಕುಟುಂಬಸ್ಥರ ನೆರವಿನಿಂದ ಪುಟ್ಟ ಮಗುವಿನ ಆರೈಕೆಯ ಹೊರೆ ಬೀಳಲಿಲ್ಲ. ಓದಿನತ್ತ ಇನ್ನಷ್ಟು ಗಮನ ಹರಿಸಿ ಅಖಿಲ ಭಾರತ ಮಟ್ಟದಲ್ಲಿ 217 ನೇ ರ್ಯಾನ್ಕ್ ಪಡೆಯಲು ಸಫಲರಾದರು.ಉನ್ನತವಾದ ಹುದ್ದೆಯನ್ನು ಪಡೆಯುವ ಮೂಲಕವಾಗಿ ಸ್ವಯಂ ನಿಯಂತ್ರಣ ಹಾಗೂ ಬದ್ಧತೆಗಳ ಯಾವುದೇ ಪರೀಕ್ಷೆಯಲ್ಲೂ ಸಫಲತೆ ಸಾಧಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. 

ಮುಖಪುಟ Social ' ಏಕ್ ತೇರಾ, ಏಕ್ ಮೇರಾ ' ಅಕ್ಷಯ್ ಕುಮಾರ್ ಚಿತ್ರದ ಹಾಸ್ಯ ದೃಶ್ಯ ಮರುಸೃಷ್ಟಿಸಿದ ಅಶ್ವಿನ್-ಜಡೇಜಾ !


 ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@














ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು