ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಗಡುವನ್ನು ವಿಸ್ತರಿಸಲು ಕೇಂದ್ರ ನಿರ್ಧಾರ

 ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಗಡುವನ್ನು ವಿಸ್ತರಿಸಲು ಕೇಂದ್ರ ನಿರ್ಧಾರ 


2016 ರ ನೋಟು ಅಮಾನ್ಯಕರಣವನ್ನು ಸುಪ್ರೀಂ ಕೋರ್ಟ್ ಧೃಡಿಪಡಿಸಿದೆ.

ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿ, ಕೇಂದ್ರದ  ಪ್ರಮುಖ ಘೋಷಣೆ. ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಲು ಕೇಂದ್ರ್ ನಿರ್ಧರಿಸಿದೆ.

ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿ, ಕೇಂದ್ರದ ಪ್ರಮುಖ ಘೋಷಣೆ. ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪಡಿತರ ಚೀಟಿದಾರರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.

ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಗಡುವನ್ನು ಮೋದಿ ಸರ್ಕಾರ ಇತ್ತಿಚ್ಚೆಗೆ ವಿಸ್ತರಿಸಿದೆ. ಮತ್ತೆ ಮೂರು ತಿಂಗಳ  ಕಾಲಾವಕಾಶ ನೀಡಲಾಗಿದೆ. ಆದ್ದರಿಂದ, ಪಡಿತರ ಚೀಟಿ ಹೊಂದಿರುವವರು ಇನ್ನೂ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡದಿದ್ದರೆ, ತಕ್ಷಣ ಅದನ್ನು ಮಾಡುವುದು ಉತ್ತಮ. ಇಲ್ಲದಿದ್ದರೆ ಪಡಿತರ ಚೀಟಿ ಮಾನ್ಯವಾಗದೆ ಇರಬಹುದು.

ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲು ಸಾಮಾನ್ಯವಾಗಿ ಮಾರ್ಚ್ ೩೧ ಗಡುವು ಇರುತ್ತದೆ. ಆದರೆ, ಈ ಗಡುವನ್ನು ಈಗ ಕೇಂದ್ರ ಸರ್ಕಾರ ಜೂನ್ ೩೦ ರವರೆಗೆ ವಿಸ್ತರಿಸಿದೆ. ಅಂದರೆ ಗಡುವನ್ನು ಮೂರು ತಿಂಗಳು ವಿಸ್ತರಿಸಲಾಗಿದೆ.


ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಮಾಡಿ 

ಈ ಕುರಿತು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಇತ್ತೀಚಿಗೆ ಅಧಿಸೂಚನೆ ಹೊರಡಿಸಿದೆ. ಆದ್ದರಿಂದ ಯಾರಾದರೂ ರೇಷನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಇನ್ನೂ ಲಿಂಕ್ ಮಾಡದಿದ್ದರೆ, ತಕ್ಷಣ ಈ ಕಾರ್ಯವನ್ನು ಪೂರ್ಣಗೊಳಿಸಿ.

ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿಯು ಒಂದು  ಎನ್ನಲಾಗಿದೆ.ರೇಷನ್ ಕಾರ್ಡ್ ಕೂಡ ಪಾಶ್ ಪೋರ್ಟ್ ಮತ್ತು ಪ್ಯಾನ್ ಕಾರ್ಡ್ ನಂತಹ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಈ ಮೂಲಕ ಸಬ್ಸಿಡಿ ದರದಲ್ಲಿ ಅಕ್ಕಿ ಮತ್ತು ಗೋಧಿ ದೊರೆಯುತ್ತದೆ.

ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಮೂಲಕ ಪಡಿತರ ಚೀಟಿ ವಂಚನೆಯನ್ನು ಪರಿಶೀಲಿಸಬಹುದು. ಒಂದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಾರ್ಡ್ ಗಳ ಮೂಲಕ ಪಡಿತರ ಪಡೆಯುವುದನ್ನು ತಡೆಯಲು ಆಧಾರ ಲಿಂಕ್ ಉಪಯುಕ್ತವಾಗಿದೆ.


ನಕಲಿ ಪಡಿತರ ಚೀಟಿಗಳನ್ನು ಗುರುತಿಸಲು ಆಧಾರ್ ಲಿಂಕ್ ತುಂಬಾ ಉಪಯುಕ್ತವಾಗಿದೆ ಎಂದು ಹೇಳಬಹುದು. ನಿಜವಾದ ಅರ್ಹತೆ ಇರುವವರು ಮಾತ್ರ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಾರೆ. ಅದಕ್ಕಾಗಿಯೇ ಆಧಾರ್ ಪಡಿತರ ಚೀಟಿ ಲಿಂಕ್ ಕಡ್ಡಾಯವಾಗಿದೆ.

ಇದಲ್ಲದೆ, ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿಯೂ ಬಳಸಬಹುದು. ಪಡಿತರ ಚೀಟಿದಾರರು ತಮ್ಮ ಸಮೀಪದ ಪಡಿತರ ಅಂಗಡಿಗೆ ತೆರಳಿ ಸಬ್ಸಿಡಿ ದರದಲ್ಲಿ ಸರಕುಗಳನ್ನು ಪಡೆಯಬಹುದು. ಕೆಲವೊಮ್ಮೆ ಎಣ್ಣೆ, ಸಕ್ಕರೆ ಮುಂತಾದ ದಿನಬಳಕೆ ಪದಾರ್ಥಗಳನ್ನೂ ಸಹ ನೀಡಲಾಗುತ್ತದೆ.


ಪಡಿತರ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಲು ಬಯಸುವವರು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪೋರ್ಟಲ್ ಗೆ ಹೋಗಬೇಕು. ಪಡಿತರ ಚೀಟಿಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವ  ಆಯ್ಕೆ ಆರಿಸಿ ಲಿಂಕ್ ಮಾಡಬಹುದು.

ಇಲ್ಲವಾದಲ್ಲಿ ಪಡಿತರ ಕಚೇರಿಗೆ ಹೋದರೆ ಸಾಕು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಥವಾ ಪಡಿತರ ಅಂಗಡಿ ಇತ್ಯಾದಿಗಳಿಗೆ ಹೋಗಿ ಲಿಂಕ್ ಮಾಡಿಕೊಳ್ಳಬೇಕು.



ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು