ಬಾಗಲಕೋಟೆಯಲ್ಲಿ ದಾಖಲೆಯಿಲ್ಲದ 5 ಕೋಟಿ ಹಣ ಜಪ್ತಿ !!!
ದಾಖಲೆಯಿಲ್ಲದೆ ಹುಬ್ಬಳ್ಳಿಯಿಂದ ಮುಧೋಳ ಮಾರ್ಗವಾಗಿ ಸಾಗಿಸುತ್ತಿದ್ದ 5 ಕೋಟಿ ರೂ. ಹಣವನ್ನು ಚುನಾವಣಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಲೋಕಾಪುರ ಪೊಲೀಸರು ಜಪ್ತಿ ಮಾಡಿದ್ದಾರೆ.
ಹಣ ಸಾಗಿಸುವ ಬೊಲೆರೋ ವಾಹನದಲ್ಲಿ ಶುಕ್ರವಾರ ರಾತ್ರಿ ಹುಬ್ಬಳ್ಳಿ ಯೂನಿಯನ್ ಬ್ಯಾಂಕಿನಿಂದ ಮುಧೋಳ ಯೂನಿಯನ್ ಬ್ಯಾಂಕ್ ಗೆ 5 ಕೋಟಿ ರೂ. ಹಣವನ್ನು ಸಾಗಿಸಲಾಗುತ್ತಿತ್ತು. ಲೋಕಾಪುರ ಬಳಿಯಿರುಳ ಲಕ್ಷಾನಟ್ಟಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ಹಣ ಸಾಗಾಟ ಕಂಡುಬಂದಿದೆ.
ಈ ಹಣ ಯೂನಿಯನ್ ಬ್ಯಾಂಕ್ ಗೆ ಸೇರಿದ್ದು ಎಂಬ ಮಾಹಿತಿ ನೀಡಿದರು ಸಹ ಸಮರ್ಪಕ ದಾಖಲೆಯಿಲ್ಲದ ಹಿನ್ನಲೆ ಹಣವನ್ನು ಜಪ್ತಿಪಡಿಸಿಕೊಂಡು ಕಾರಿನಲ್ಲಿದ್ದ ಐವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಅಧಿಕಾರಿಗಳು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
News