SSLC ಹಾಗೂ PUC ವಿದ್ಯಾರ್ಥಿಗಳಿಗೆ 'ವಿದ್ಯಾರ್ಥಿವೇತನ' :
ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಶನ್ ವತಿಯಿಂದ 2022-23 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿಭಾಗದ ಪರೀಕ್ಷೆಗಳಲ್ಲಿ 85% ಕ್ಕಿಂತ (ನಗರಪಾಲಿಕೆ ಪ್ರದೇಶ) 75% ಕ್ಕಿಂತ (ಗ್ರಾಮೀಣ ಪ್ರದೇಶ) ಅಧಿಕ ಅಂಕಗಳಿಸಿದ, ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ, ಗೌರವ ಸಮರ್ಪಣೆಗಳೊಂದಿಗೆ ಪ್ರಶಸ್ತಿ ಪಾತ್ರ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಇದಕ್ಕಿಂತ ಮುಖ್ಯವಾಗಿ, ಪ್ರತಿಷ್ಠಿತ ಕೋರ್ಸ್ ಗಳಾದ ಐಐಟಿ, ಎನ್ ಐ ಟಿ, ನೇಷನಲ್ ಲಾ ಸ್ಕೂಲ್, ಸಿಎ, ಸಿಎಸ್, ಸ್ಪರ್ಧಾತ್ಮಕ ವಿಭಾಗ ಮುಂತಾದವುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸುವವರಿಗೆ ಸಂಸ್ಥೆ ಆದ್ಯತೆ ನೀಡುವ ಉದ್ದೇಶ ಹೊಂದಿರುತ್ತದೆ.
ಸಮಿತಿಯಿಂದ ಆಯ್ಕೆಯಾದ, ಬಡ, ಅರ್ಹ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಖರ್ಚನ್ನು ಸಂದರ್ಭನುಸಾರವಾಗಿ ಪ್ರಾಯೋಜಿಸುವ ಯೋಜನೆಯನ್ನು ಹೊಂದಿರುತ್ತದೆ.
ಈ ಸಂದರ್ಭವಾಗಿ ಅರ್ಹ ವಿದ್ಯಾರ್ಥಿಗಳು ಅಂಕಗಳ ಪಟ್ಟಿ, ಭಾವಚಿತ್ರ ಹಾಗೂ ಆಧಾರ್ ಕಾರ್ಡ್ ನ ಪ್ರತಿಯೊಂದಿಗೆ ವಿವರಗಳನ್ನು ಈ ಕೆಳಗಿನ ವಾಟ್ಸ್ ಆಪ್ ಸಂಖ್ಯೆಗೆ ಕಳುಹಿಸಲು ವಿನಂತಿ : 9845820589
ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ವಿ.ವಿ.ಜಿ.ಎಸ್ ನ ಆರ್ಥಿಕ ಮುಖ್ಯಸ್ಥರಾದ, ಸಿಎ.ನಾಗರಾಜ್ ಆಚಾರ್ ರವರನ್ನು ಸಂಪರ್ಕಿಸಬೇಕಾಗಿ ವಿನಂತಿ......(9845820589)
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Education