ಫ್ರೀ ಬಸ್ ಪ್ರಯಾಣದ ಬೆನ್ನಲ್ಲೇ ಇದೀಗ ಎಲ್ಲಾ KSRTC ಬಸ್ ಡ್ರೈವರ್ ಕಂಡಕ್ಟರ್ ಗಳಿಗೆ ಇನ್ನೊಂದು ಸಿಹಿಸುದ್ಧಿ ........

ಫ್ರೀ ಬಸ್ ಪ್ರಯಾಣದ ಬೆನ್ನಲ್ಲೇ ಇದೀಗ ಎಲ್ಲಾ KSRTC ಬಸ್ ಡ್ರೈವರ್ ಕಂಡಕ್ಟರ್ ಗಳಿಗೆ ಇನ್ನೊಂದು ಸಿಹಿಸುದ್ಧಿ ........





ಸಾರಿಗೆ ನೌಕರರು ತಮ್ಮ ವೇತನವನ್ನು 25% ರಷ್ಟು ಹೆಚ್ಚಿಸಬೇಕು ಎಂದು ಬಿಜೆಪಿ ಸರ್ಕಾರ ಇರುವಾಗಲೇ ಬೇಡಿಕೆ ಮುಂದಿಟ್ಟಿದ್ದರು. ಆಗ ಬಿಜೆಪಿ ಸರ್ಕಾರ ವೇತನ ಹೆಚ್ಚಳಕ್ಕೆ ಮುಂದಾಗಿತ್ತು. ಆದರೆ 25% ಬದಲಿಗೆ 14% ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಆದರೆ ಸಾರಿಗೆ ನೌಕರರು ಇದನ್ನು ತಿರಸ್ಕರಿಸಿದ್ದರು. ನಮಗೆ ಒಟ್ಟು 25% ನಷ್ಟು ವೇತನ ಹೆಚ್ಚಳ ಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಆಗ ವೇತನ ಹೆಚ್ಚಳ ಆಗಿರಲಿಲ್ಲ.
ಇದೀಗ ರಾಜ್ಯ ಸರ್ಕಾರ ಸಾರಿಗೆ ನೌಕರರ ವೇತನವನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಆಡಳಿತಾತ್ಮಕ ಅನುಮೋದನೆ ಕೂಡ ದೊರಕಿದೆ. ಮುಂಬರುವ ದಿನಗಳಲ್ಲಿ ಮಾತ್ರವಲ್ಲದೆ ಈ ವೇತನ ಹೆಚ್ಚಳವನ್ನು ಏಪ್ರಿಲ್ ತಿಂಗಳಿಗೆ ಪೂರ್ವಾನ್ವಯ ಮಾಡಲಾಗುವುದು ಎಂದು ಹೇಳಲಾಗಿದೆ.




ಸಾರಿಗೆ ನೌಕರರ ಒಪ್ಪಿಗೆ ಇದೆಯೇ ?

ಈ ಹಿಂದೆ ಅಧಿಕಾರದಲ್ಲಿ ಇದ್ದ ಬಿಜೆಪಿ ಸರ್ಕಾರ 14 ಹಾಗೂ 17 ಶೇಕಡಾದಷ್ಟು ವೇತನ ಹೆಚ್ಚಿಸುವುದಾಗಿ ಹೇಳಿದರು ಅದನ್ನು ಸಾರಿಗೆ ನೌಕರರ ಸಂಘ ನಿರಾಕರಿಸಿದ್ದು, ತಮಗೆ ಕೊಡುವುದಾದರೆ 25 ಶೇಕಡಾದಷ್ಟು ವೇತನ ಹೆಚ್ಚಿಸಿ ಕೊಡಿ ಎಂದು ಪಟ್ಟು ಹಿಡಿದು ಕುಳಿತಿದ್ದರು. ಹಾಗಾಗಿ ಈಗ ಸರ್ಕಾರ ನೀಡಲಿರುವ ಈ 15% ವೇತನ ಹೆಚ್ಚಳಕ್ಕೆ ಸಾರಿಗೆ ನೌಕರರು ಒಪ್ಪುತ್ತಾರೆ ಎನ್ನುವ ಪ್ರಶ್ನೆ ಉದ್ಭವಿಸಿದೆ.




ಸಾರಿಗೆ ನೌಕರರ ಬೇಡಿಕೆ ಏನು?

ಶೇಕಡಾ 25ರಷ್ಟು ವೇತನ ಹೆಚ್ಚಳ ಮಾಡುವುದು 

ವಜಾ ಮಾಡಲಾಗಿರುವ ಸಿಬ್ಬಂದಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವುದು 

ಇನ್ಸೆಂಟಿವ್ ಹೆಚ್ಚು ಮಾಡುವುದು 

ಬಾಟಾ ಹೆಚ್ಚಿಸುವುದು 
ಇವು ಸರ್ಕಾರ ಮುಂದೆ ಸಾರಿಗೆ ನೌಕರರು ಇಟ್ಟಿರುವ ಪ್ರಮುಖ ಬೇಡಿಕೆಗಳು. ಇವುಗಳಲ್ಲಿ ಸದ್ಯ 15% ನಷ್ಟು ವೇತನ ಹೆಚ್ಚಿಸುವುದಾಗಿ ಮಾತ್ರ ಕಾಂಗ್ರೆಸ್ ಸಚಿವ ಸಂಪುಟ ನಿರ್ಧರಿಸಿದೆ.




ವಿರೋಧ ವ್ಯಕ್ತಪಡಿಸಿದ ಸಾರಿಗೆ ನೌಕರರು ಸಂಘ :

ಕೆಪಿಟಿಸಿಎಲ್ ನೌಕರರಿಗೆ 20% ಸರ್ಕಾರಿ ನೌಕರರಿಗೆ 17% ವೇತನ ಹೆಚ್ಚಿಸಿದ ಸರ್ಕಾರ. ಆದರೆ ನಮಗೆ ಮಾತ್ರ ಕೇವಲ 14% ಸಂಬಳ ಹೆಚ್ಚು ಮಾಡುವುದು ಎಷ್ಟು ಸರಿ? ಎಂಬುದಾಗಿ ಸಾರಿಗೆ ನೌಕರ ಸಂಘದ ಅಧ್ಯಕ್ಷ ಹೆಚ್ ವಿ ಅನಂತ ಸುಬ್ಬರಾವ್ ಈ ಹಿಂದೆಯೇ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರದ ಎದುರು ಬೇಡಿಕೆ ಇಟ್ಟಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಈ ಹಿಂದೆ ಮುಷ್ಕರ ಪ್ರತಿಭಟನೆಗಳನ್ನು ಕೂಡ ಮಾಡಿದ್ದರು. ಬಿಜೆಪಿ ಸರ್ಕಾರ ನೌಕರರ  ಮನವೊಲಿಸುವ ಪ್ರಯತ್ನ ಮಾಡಿತ್ತು. ಆದರೆ ಒಮ್ಮತದ ನಿರ್ಧಾರ ಮಾತ್ರ ಮೂಡಿರಲಿಲ್ಲ. 14 ಹಾಗೂ 17 % ವೇತನ ಹೆಚ್ಚಿಸಿ ಆದೇಶವನ್ನು ಹೊರಡಿಸಲಾಗಿತ್ತು. ಆದರೆ ಇದನ್ನು ಸಂಘಗಳು ಒಪ್ಪಿರಲಿಲ್ಲ. ಇದೀಗ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹೆಚ್ಚಿಸಲಿರುವ 15% ವೇತನವನ್ನು ಸಾರಿಗೆ ನೌಕರರು ಸ್ವೀಕರಿಸುತ್ತಾರಾ ಅಥವಾ ವಿರೋಧಿಸುತ್ತಾರಾ ಕಾದು ನೋಡಬೇಕು.








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು