ಆನ್ಲೈನ್ ನಲ್ಲೆ APL / BPL ಹಾಗೂ ಅಂತ್ಯೋದಯ(AYY ) ಕಾರ್ಡ್ ಡೌನ್ಲೋಡ್ ಮಾಡಬಹುದು. ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿ 👇👇👇

ಆನ್ಲೈನ್ ನಲ್ಲೆ APL / BPL ಹಾಗೂ ಅಂತ್ಯೋದಯ(AYY ) ಕಾರ್ಡ್ ಡೌನ್ಲೋಡ್ ಮಾಡಬಹುದು. ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿ 👇👇👇

 

           ಇಂದಿನ ಲೇಖನದಲ್ಲಿ ತಿಳಿಸುವುದೇನೆಂದರೆ,,, ಹಳೆಯ ರರೇಷನ್ ಕಾರ್ಡ್ ಹಾಗೂ ಹೊಸ ರೇಷನ್ ಕಾರ್ಡ್ ಗಳನ್ನು ನೀವು ಪಡೆದಿದ್ದಲ್ಲಿ ಮೊಬೈಲ್, ಅಥವಾ ಕಂಪ್ಯೂಟರ್ ನಲ್ಲಿ/ ಲ್ಯಾಪ್ಟಾಪ್ ನಲ್ಲಿ ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳನ್ನು ಸುಲಭವಾಗಿ ಡೌನ್ಲೋಡ್ ಮಾಡಬಹುದು. ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ಸಂಪೂರ್ಣವಾಗಿ ಓದಿ ಡೌನ್ಲೋಡ್ ಮಾಡಿಕೊಳ್ಳಿ.

ಹಂತ ಒಂದು: ಗೂಗಲ್ ಕ್ರೋಮ್ ಓಪನ್ ಮಾಡಿ DigiLocker ನ್ನು ಕ್ಲಿಕ್ ಮಾಡಿ ಅಲ್ಲಿ ನಿಮ್ಮ ನೋಂದಣಿ ಮಾಡಿಕೊಳ್ಳಿ. 



ಹಂತ ಎರಡು : ನಿಮ್ಮ ನೋಂದಣಿ ವೇಳೆಯಲ್ಲಿ ಹೆಸರು,  ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ ಹಾಗೂ ೬ ಡಿಜಿಟ್ ಪಿನ್ ಅನ್ನು ನಮೂದಿಸಿ ಸಬ್ಮಿಟ್ ಮಾಡಿ.



ಹಂತ ಮೂರು : ಈ ಹಂತದಲ್ಲಿ ನಿಮ್ಮ  ಆಧಾರ್ ನ್ನು ವೆರಿಫೈ ಮಾಡಲು ಆಧಾರ್  ಸಂಖ್ಯೆಯನ್ನು ನಮೂದಿಸಬೇಕು. ನಂತರ  ಒಟಿಪಿ ಹಾಕಿ ನೆಕ್ಸ್ಟ್ ಅಂತ ಕ್ಲಿಕ್ ಮಾಡಿ.




ಹಂತ ನಾಲ್ಕು : ಈಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಥವಾ ಆಧಾರ್ ಸಂಖ್ಯೆ   ಹಾಗೂ ಸೆಕ್ಯೂರಿಟಿ ಪಿನ್ ಹಾಕಿದಾಗ ಒಟಿಪಿ ಬರುತ್ತದೆ. ಒಟಿಪಿ ನಮೂದಿಸಿ ಸೈನ್ ಇನ್ ಆಗಬೇಕು.



ಹಂತ ಐದು : ಲಾಗ್ ಇನ್ ಆದ ನಂತರ ನಿಮ್ಮ ಮುಂದೆ ಮುಖಪುಟ ತೆರೆಯುತ್ತದೆ. ಅಲ್ಲಿ ನೀವು Issued Documents ಮೇಲೆ ಕ್ಲಿಕ್ ಮಾಡಿ, ನಂತರ ಕೆಳಗೆ ಇರುವ Get more Issued Documents ಮೇಲೆ ಕ್ಲಿಕ್ ಮಾಡಿ.



ಹಂತ ಆರು : ಹಂತ ಆರರಲ್ಲಿ serach bar ನಲ್ಲಿ Food ಅಂತ ಸೆರ್ಚ್ ಮಾಡಬೇಕು. ಹೀಗೆ ಸರ್ಚ್ ಮಾಡಿದಾಗ  Ration Card - Food, Civil Supplies and Consumer Affairs Department, Karnataka ಎಂಬ ಆಯ್ಕೆ 
ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.





ಹಂತ ಏಳು : ಇಲ್ಲಿ ನಿಮ್ಮ ರೇಷನ್ ಕಾರ್ಡ್ ನ ಸಂಖ್ಯೆಯನ್ನು ನಮೂದಿಸಿ, Get Document ಅಂತ ಕ್ಲಿಕ್ ಮಾಡಿ.



ಹಂತ ಎಂಟು : Get Document ಮೇಲೆ ಕ್ಲಿಕ್ ಮಾಡಿದ ನಂತರ, ಮರಳಿ  Issued Documents ಮೇಲೆ ಕ್ಲಿಕ್  ಮಾಡಿದರೆ, ಕೆಳಗಡೆ ನೀವು ಡೌನ್ಲೋಡ್ ಮಾಡಿರುವ ರೇಷನ್ ಕಾರ್ಡ್ ಬಂದಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.




ಹಂತ ಒಂಬತ್ತು : ಕೊನೆಯದಾಗಿ ಈ ಹಂತದಲ್ಲಿ ರೇಷನ್ ಕಾರ್ಡ ನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಮಾಡಿಕೊಳ್ಳಬಹುದು.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು