ಖಾಸಗಿ ಹಾಗೂ ಸರಕಾರಿ ಬ್ಯಾಂಕ್ ಗಳಲ್ಲಿ ಲೋನ್ ಕಟ್ಟಲಾಗದಿದ್ದವರಿಗೆ ಸಿಹಿಸುದ್ದಿ ! ಕೋರ್ಟ್ ಹೊಸ ಆದೇಶ
ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಬೇರೆ ಎಲ್ಲಾ ವಸ್ತುಗಳಿಗಿಂತ ಹೆಚ್ಚಾಗಿ ಅವಲಂಬಿಸುವಂತಹ ಒಂದೇ ಒಂದು ವಸ್ತು ಎಂದರೆ ಅದು ಪ್ರಮುಖವಾಗಿ ಹಣ ಎನ್ನಬಹುದಾಗಿದೆ. ನಮ್ಮ ಜೀವನದ ಯಾವುದೇ ಬಯಕೆಗಳು ಹಾಗೂ ಗುರಿಗಳಿದ್ದರೂ ಕೂಡ ಹಣ ಒಂದಿದ್ದರೆ ಸಾಕು ನಾವು ಎಲ್ಲವುದನ್ನು ಕೂಡ ತೀರಿಸಿಕೊಳ್ಳಬಹುದಾಗಿದೆ. ಆದರೆ ಕೆಲವೊಮ್ಮೆ ಕೆಲವೊಂದು ವಸ್ತುಗಳನ್ನು ಖರೀದಿಸಲು ಅಥವಾ ಮನೆಯಂತಹ ಜೀವನದ ಒಂದು ಪ್ರಮುಖ ಜವಾಬ್ದಾರಿಯನ್ನು ನಿರ್ಮಿಸಲು ನೀವು ಹಣ ಇಲ್ಲದೆ ಇದ್ದಾಗ ಲೋನ್ ಅನ್ನು ಪಡೆಯುವುದು ಸಾಮಾನ್ಯವಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಯಾವ ರೀತಿ ಲೋನ್ ಮೇಲೆ ಬಡ್ಡಿ ನೀಡುತ್ತದೆ ಎಂಬುದನ್ನು ನಿಮೆಲ್ಲರಿಗೂ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಕಾರ್ ಲೋನ್, ಹೋಮ್ ಲೋನ್, ಬಿಸಿನೆಸ್ ಲೋನ್ ಸೇರಿದಂತೆ ಹಲವಾರು ವಿವಿಧ ರೀತಿಯ ಲೋನ್ ಗಳನ್ನೂ ಹೆಚ್ಚಿನ ಬಡ್ಡಿ ದರದ ಮೇಲೆ ಬ್ಯಾಂಕ್ ನಿಮಗೆ ನೀಡುತ್ತದೆ. ಲೋನ್ ತೆಗೆದುಕೊಳ್ಳುವುದು ಮಾತ್ರವಲ್ಲದೆ ಅದನ್ನು ಸರಿಯಾದ ಸಮಯಕ್ಕೆ ಕಟ್ಟುವುದು ಕೂಡ ನಿಮ್ಮ ಪ್ರಮುಖ ಜವಾಬ್ದಾರಿ ಆಗಿರುತ್ತದೆ.
ಆದರೆ ಕೆಲವೊಮ್ಮೆ ಕೆಲವೊಂದು ಕಾರಣಗಳಿಂದ ಸರಿಯಾದ ಸಮಯಕ್ಕೆ ಕಂತನ್ನು ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ನೀವು ಬ್ಯಾಂಕಿನವರು ನಮ್ಮ ಮರ್ಯಾದೆ ಹರಾಜು ಮಾಡುತ್ತಾರೆ ಎಂಬುವುದಾಗಿ ಭಾವಿಸಬಹುದು. ಆದರೆ RBI ತಂದಿರುವಂತಹ ಹೊಸ ನಿಯಮದ ಪ್ರಕಾರ ನೀವು ಯಾವುದೇ ಚಿಂತೆಗೆ ಒಳಪಡಬೇಕಾದ ಅವಶ್ಯಕತೆ ಇಲ್ಲ.
ಹೌದು ರಿಕವರಿ ಏಜೇಂಟ್ ಗಳನ್ನು ಕಳುಹಿಸಿ ನಿಮ್ಮ ಮೇಲೆ ಮೌಖಿಕ ಹಾಗೂ ದೈಹಿಕ ಹಲ್ಲೆಯನ್ನು ಮಾಡುವ ಹಾಗೆ ಇಲ್ಲ. ಇದರ ಕುರಿತಂತೆ ನಿಮ್ಮ ಮನೆಯವರ ಅಥವಾ ಕುಟುಂಬದವರ ಬಳಿ ಕೂಡ ಬ್ಯಾಂಕಿನವರು ಹೇಳುವ ಹಾಗೆ ಇಲ್ಲ ಈ ಕುರಿತಂತೆ ನೀವು ದೂರನ್ನು ಕೂಡ ದಾಖಲಿಸಬಹುದಾಗಿದೆ.
ಎಲ್ಲಕ್ಕಿಂತ ಪ್ರಮುಖವಾಗಿ ಸಾಮಾನ್ಯವಾಗಿ ಈ ರೀತಿ ನೀವು ಹಣ ಕಟ್ಟದೆ ಹೋದಲ್ಲಿ ಬ್ಯಾಂಕಿನವರು ನಿಮಗೆ ಪದೇ ಪದೇ ಕರೆ ಮಾಡಿ ತಲೆ ತಿನ್ನುತ್ತಾರೆ. ಆ ಸಂದರ್ಭದಲ್ಲಿ ಕೂಡ ಅವರಿಗೆ ಕರೆ ಮಾಡುವ ನಿಯಮ ಕೂಡ ಇದೆ. ಬ್ಯಾಂಕಿನವರು ಕೇವಲ ಬೆಳಗ್ಗೆ ೭ ರಿಂದ ಸಂಜೆ ೭ ಗಂಟೆಯ ಒಳಗೆ ಮಾತ್ರ ಈ ರೀತಿಯ ಕರೆಗಳನ್ನು ಮಾಡಬಹುದಾಗಿದೆ. ಈ ನಿಯಮವನ್ನು ಹೊರತುಪಡಿಸಿ ಬೇರೆ ಸಮಯಗಳಲ್ಲಿ ಅವರು ಕರೆ ಮಾಡಿದರೆ ಕೂಡ ನೀವು ಪೊಲೀಸ್ ಕಂಪ್ಲೇಂಟ್ ಮಾಡಬಹುದಾಗಿದೆ. ಈ ಮಾಹಿತಿಯ್ನನು ನಿಮ್ಮ ಸ್ನೇಹಿತರ ಜೊತೆಗೂ ಕೂಡ ಶೇರ್ ಮಾಡಿ.
Tags
BANK NEWS