ಗೃಹಲಕ್ಷ್ಮಿ ಯೋಜನೆಗೆ ಪ್ರಜಾಪ್ರತಿನಿಧಿ ನೇಮಕ .....

ಗೃಹಲಕ್ಷ್ಮಿ ಯೋಜನೆಗೆ ಪ್ರಜಾಪ್ರತಿನಿಧಿ ನೇಮಕ .....


               ಇಂದಿನ ಲೇಖನದಲ್ಲಿ ತಿಳಿಸುವುದೇನೆಂದರೆ ಕರ್ನಾಟಕ ಸರ್ಕಾರವು ಈಗಾಗಲೇ ಐದು ಗ್ಯಾರಂಟಿಗಳಲ್ಲಿ ಮೂರು ಗ್ಯಾರಂಟಿ ಜಾರಿಗೆ ತಂದಿದ್ದು, ಹಾಗೂ ನಾಲ್ಕನೇ ಗ್ಯಾರಂಟಿಯನ್ನು ದಿನಾಂಕ 19/07/2023 ರಂದು ಸಾಯಂಕಾಲ 05:00 ಗಂಟೆಗೆ ಚಾಲನೆ ಮಾಡಲಿದ್ದು ಇದರ ಪ್ರಯುಕ್ತ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಪ್ರತಿ ಕುಟುಂಬದ ಮಹಿಳೆಗೆ ೨೦೦೦ ಪಡೆಯಲು ಪ್ರತಿ ಮನೆ ಮನೆಗೆ ಪ್ರಜಾಪ್ರತಿನಿಧಿಯನ್ನು ನೇಮಕ ಮಾಡಲಿದ್ದಾರೆ. ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ. 

1)ಪ್ರತಿ ಮನೆ ಮನೆಗೂ ಪ್ರಜಾ ಪ್ರತಿನಿಧಿ ಬರುತ್ತಾರೆ

2)1000 ಜನರಿಗೆ ಒಬ್ಬ ಪುರುಷ ಪ್ರಜಾ ಪ್ರತಿನಿಧಿ

3)1000 ಜನರಿಗೆ ಒಬ್ಬ ಮಹಿಳೆ ಪ್ರಜಾ ಪ್ರತಿನಿಧಿ

4) ಈಗಾಗ್ಲೇ ಸರ್ಕಾರ್ 1 ಕೋಟಿ 18 ಲಕ್ಷ ರೇಷನ್ ಕಾರ್ಡ್ ಗೆ ಗೃಹ ಲಕ್ಷ್ಮಿ ರೂ 2000/- ಹಾಕುತ್ತೇವೆ ಅಂತಾ ಸೂಚಿಸಿದ್ದಾರೆ.

5) ರಾಜ್ಯದಲ್ಲಿ ಪ್ರಜಾ ಪ್ರತಿ ನಿಧಿ ನೇಮಕಕ್ಕೆ ಏನಿಲ್ಲಾ ಅಂದ್ರು 1200 ಪುರುಷ ಹಾಗೂ 1200 ಮಹಿಳೆ ಯಾರನ್ನು ನೇಮಕ್ ಮಾಡಲಿದ್ದಾರೆ. ಇದು ಅಂದಾಜು ಮಾಡಲಾಗಿದೆ. ಇನ್ನು ಜಾಸ್ತಿ ಆಗಬಹುದು. ನೀವು ಕೂಡಾ ಅರ್ಜಿ ಸಲ್ಲಿಸಬಹುದು ಹೇಗೆ ಅಂತಾ ಹೇಳುದಾದ್ರೆ

ನಿಮ್ಮ ಹತ್ತಿರದ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ , ಪುರ ಸಭೆ , ನಗರಸಭೆ ಗಳಲ್ಲಿ ನೇಮಕ ಹಾಗೂ ಹತ್ತಿರದ ಶಿಶು ಕಲ್ಯಾಣ ಹಾಗೂ ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ಅರ್ಜಿ ಸಲ್ಲಿಸಬಹುದು.

6) ಇವರ ಕರ್ತವ್ಯ ಪ್ರತಿ ಒಂದು ಸಾವಿರ ಮನೆ ಮನೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು ಹಾಗೂ ಆನ್ ಲೈನ್ ನಲ್ಲಿ ಕುಟುಂಭವು ಅರ್ಜಿ ಸಲ್ಲಿಸಿದ್ದರೆ ಅದರ ದೃಡೀಕರನ ಮಾಡಿಕೊಂಡು ರಸೀದಿ ಕೊಡಲಿದ್ದಾರೆ.

ಈ ಎಲ್ಲಾ ಪ್ರಜಾಪ್ರತಿನಿಧಿಗಳನ್ನು ಒಂದು ತಿಂಗಳ ಅವಧಿಗೆ ನೇಮಕ ಮಾಡಲಿದ್ದಾರೆ. (ಬಹುಶಃ ಒಂದು ತಿಂಗಳಿನ ಹೆಚ್ಚಿನ ಅವಧಿಯೂ ಆಗಬಹುದು). ಈ ಅವಧಿಯ ವೇತನವನ್ನು ಸರ್ಕಾರವೇ ಭರಿಸುತ್ತದೆ. 


1 ಕಾಮೆಂಟ್‌ಗಳು

ನವೀನ ಹಳೆಯದು