ಹೊಸ ಅರ್ಜಿದಾರರಿಗೆ ಸಿಹಿ ಸುದ್ದಿ । ಚಿಕಿತ್ಸಾ ಸೌಲಭ್ಯಕ್ಕೆ ಬಳಕೆ ಬಿಪಿಎಲ್ ಹೆಲ್ತ್ ಕಾರ್ಡ್ !!

ಹೊಸ ಅರ್ಜಿದಾರರಿಗೆ ಸಿಹಿ ಸುದ್ದಿ । ಚಿಕಿತ್ಸಾ ಸೌಲಭ್ಯಕ್ಕೆ ಬಳಕೆ 
ಬಿಪಿಎಲ್ ಹೆಲ್ತ್ ಕಾರ್ಡ್ !!





           ಹೊಸದಾಗಿ ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಬಯಸಿ ಅರ್ಜಿ ಸಲ್ಲಿಸಿ, ಚಾತಕ ಪಕ್ಷಿಯಂತೆ ಕಾಯುತ್ತಿರುವ ಅರ್ಹರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೇವಲ ಅರೋಗ್ಯ ಸೇವೆ ಸೌಲಭ್ಯದ ಸಲುವಾಗಿ ಬಿಪಿಎಲ್ ಕಾರ್ಡ್ ಬಯಸಿರುವ ಅರ್ಹ ಅರ್ಜಿದಾರರಿಗೆ ಬಿಪಿಎಲ್ "ಹೆಲ್ತ್" ಕಾರ್ಡ್ ಶೀಘ್ರವೇ ವಿತರಣೆಯಾಗಲಿದೆ. ಈ ಕಾರ್ಡ್ ಅರೋಗ್ಯ ಸೌಲಭ್ಯಕ್ಕೆ ಮಾತ್ರ ಸೀಮಿತವಾಗಿರಲಿದ್ದು, ಪಡಿತರ ಪಡೆಯಲು ಅವಕಾಶ ಇರುವುದಿಲ್ಲ.

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ನಾಲ್ಕು ಜಾರಿಗೆ ಬಂದಿವೆ. ಈ ಯೋಜನೆಗಳ ಲಾಭ ಪಡೆಯಲು ಬಿಪಿಎಲ್ ಪಡಿತರ ಚೀಟಿ ಹೊಂದಿರುವುದು ಕಡ್ಡಾಯ. ಹೀಗಾಗಿ ಬಿಪಿಎಲ್ ಕಾರ್ಡ್ ಕೋರಿ ಅರ್ಜಿ  ನೂಕುನುಗ್ಗಲು ಉಂಟಾಗಿದೆ. ಇಷ್ಟರ ನಡುವೆ ಈಗಾಗಲೇ ಕೇಂದ್ರ ಸರ್ಕಾರ ವಿಧಿಸಿದ ಮಿತಿ ದಾಟಿ ಹೆಚ್ಚುವರಿ ಬಿಪಿಎಲ್ ಕಾರ್ಡ್ ವಿತರಿಸಿದ್ದೇವೆ ಎಂದು ಸರ್ಕಾರ ತಿಳಿಸಿತ್ತು. ಹೀಗಾಗಿ ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರು, ಅದರಲ್ಲೂ ಅರೋಗ್ಯ ಸೇವೆ ಸಲುವಾಗಿ ಕಾರ್ಡ್ ಬಯಸಿದ್ದವರು ತಳಮಳಗೊಂಡಿದ್ದರು. ಇದೀಗ ಸರ್ಕಾರದ ಬದಲಾದ ನಿಲುವು ನಿರಾಳತೆ ತಂದಿದೆ. 

ಸಿಎಂ ಸಮ್ಮಿತಿ :

ಸಿಎಂ ಸಿದ್ದರಾಮಯ್ಯ ಜೊತೆಗೆ ವಸ್ತುಸ್ಥಿತಿ ಚರ್ಚಿಸಿ, ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ. 

     ಆರೋಗ್ಯ ಸೇವೆಗೆ ಅಡಚಣೆಯಾಗಬಾರದು ಎಂಬ ನೆಲೆಯಲ್ಲಿ ಅರ್ಹ ಮೂರು ಲಕ್ಷ ಅರ್ಜಿಗಳನ್ನು ಪರಿಶೀಲಿಸಿ, ಈ ಪೈಕಿ ಅರೋಗ್ಯ ಸೇವೆ ಬಯಸಿದವರಿಗೆ ಬಿಪಿಎಲ್ ಹೆಲ್ತ್ ಕಾರ್ಡ್ ವಿತರಿಸಲಿದ್ದೇವೆ ಎಂದರು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 64 ರಷ್ಟು ಜನರು ಪಡಿತರ ವ್ಯವಸ್ಥೆ ವ್ಯಾಪ್ತಿಗೆ ಒಳಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿ, ೮೪ ಲಕ್ಷ ಬಿಪಿಎಲ್ ಕಾರ್ಡ್ ಗಳಿಗೆ ಪಡಿತರ ಸೀಮಿತಗೊಳಿಸಿದೆ. ಉಳಿದ 14 ಲಕ್ಷ ಬಿಪಿಎಲ್ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯ ಮೊತ್ತವನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದು, ಹೊಸ ಅರ್ಜಿದಾರರ ಬಿಪಿಎಲ್ ಪಡಿತರ ಚೀಟಿ ವಿತರಣೆ ಸವಾಲಾಗಿದೆ. 

ಅನರ್ಹತೆಗೆ ಪರಿಗಣಿತ ಅಂಶಗಳು :





1 ಕಾಮೆಂಟ್‌ಗಳು

ನವೀನ ಹಳೆಯದು