ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಾರ್ಮಿಕ ಇಲಾಖೆಯ ಅಧಿಕಾರಿ !!!

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಾರ್ಮಿಕ ಇಲಾಖೆಯ ಅಧಿಕಾರಿ !!!



         ಲೋಕಾಯುಕ್ತ ಸಿಪಿಐ ಆಂಜನೇಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.
ಲಂಚ ಪಡೆಯುವಾಗ ಕಾರ್ಮಿಕ ಇಲಾಖೆಯ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ರಾಣೆಬೆನ್ನೂರು ತಾಲೂಕು ಕಾರ್ಮಿಕ ಇಲಾಖೆಯ ನಿರೀಕ್ಷಕರಾದ ಮಮ್ತಾಜ್ ಬೇಗಂ ರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಮಿಕ ಇಲಾಖೆ ಕಾರ್ಡ್ ಮಾಡಿಕೊಡಲು ನಾರಾಯಣಪ್ಪ ಎಂಬ ಕಾರ್ಮಿಕನಿಂದ ಮಮ್ತಾಜ್ ಐದು ಸಾವಿರ ರೂಪಾಯಿ ಹಣವನ್ನು ಲಂಚದ ರೂಪದಲ್ಲಿ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಹಣದ ಸಮೇತ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ಸಿಪಿಐ ಆಂಜನೇಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕಾಸ್ ದಾಖಲು ಮಾಡಿಕೊಳ್ಳಲಾಗಿದೆ.

ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹೆಡ್ ಕಾನ್ಸ್ಟೇಬಲ್ ಬಂಧನ :
ಇತ್ತ ತಡೆಯಾಜ್ಞೆ ಕಾರ್ಯರೂಪಕ್ಕೆ ತರಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ನನ್ನ ಲೋಕಾಯುಕ್ತ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ. ಪೀಣ್ಯ ಪೊಲೀಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ಮಾರೇಗೌಡ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ದಿನೇಶ್ ಎಂಬವರಿಂದ ೧.೫ ಲಕ್ಷ ರುಪಾಯಿಗೆ ಬೇಡಿಕೆ ಇಟ್ಟಿದ್ದರಂತೆ.


ಏನಿದು ಪ್ರಕರಣ ?
ಪೀಣ್ಯ ಬಳಿಯ ಕರಿವೊಬನಹಳ್ಳಿಯಲ್ಲಿ ದಿನೇಶ್ ಎಂಬುವರು ಮನೆ ನಿರ್ಮಾಣ ಮಾಡುತ್ತಿದ್ದಾರೆ. ಈ ವೇಳೆ ಆ ನಿವೇಶನ ತಮ್ಮದು ಎಂದು ಕೋಕಿಲಾ ಮತ್ತು ಲಕ್ಮಣ ರೆಡ್ಡಿ ಎಂಬುವರು ತಕರಾರು ಎತ್ತಿ, ಕಟ್ಟಡ ಕಾಮಗಾರಿ ನಿಲ್ಲಿಸುವಂತೆ ಅಡ್ಡಿ ಪಡಿಸಿದ್ದಾರೆ. ಆದರೆ ಈ ಬಗ್ಗೆ ನ್ಯಾಯಾಲಯದಲ್ಲಿ ತಮ್ಮ ಪರವಾಗಿ ದಿನೇಶ್, ತಾತ್ಕಾಲಿಕ ಇಂಜೆಕ್ಷನ್ ತಂದಿದ್ದರಂತೆ. ಇಂಜೆಕ್ಷನ್ ಇದ್ದರು ಕೋಕಿಲಾ ಮತ್ತು ಲಕ್ಷ್ಮಣ ರೆಡ್ಡಿಯಿಂದ ನೀಡುತ್ತಿದ್ದ ಆರೋಪವನ್ನು ದಿನೇಶ್ ಮಾಡಿದ್ದೂ, ಈ ಬಗ್ಗೆ ಸೂಕ್ತ ರಕ್ಷಣೆ ನೀಡುವಂತೆ ಪೀಣ್ಯ ಠಾಣೆಗೆ ಗವಿರಾಜ್ ಗೌಡ ಎಂಬುವರು ಮನವಿ ಮಾಡಿದ್ದರಂತೆ.

ಗವಿರಾಜ್ ಗೌಡ ಬಳಿ ದಿನೇಶ್ ನಿವೇಶನ ಖರೀದಿ ಮಾಡಿದ್ದು, ಈ ಪ್ರಕರಣದ ಸಂಬಂಧ ಪೊಲೀಸ್ ರಕ್ಷಣೆ ನೀಡಲು ಮೂರು ಲಕ್ಷ ಲಂಚಕ್ಕೆ ಪೀಣ್ಯ  ಠಾಣೆಯ ಸ್ಪೆಷಲ್ ಬ್ರಾಂಚ್ ಹೆಡ್ ಕಾನ್ಸ್ ಟೇಬಲ್ ಮಾರೇಗೌಡ ಬೇಡಿಕೆ ಇಟ್ಟಿದ್ದರಂತೆ ಬಳಿಕ 1.5 ಲಕ್ಷ ರುಪಾಯಿಗೆ ಒಪ್ಪಿದ್ದರಂತೆ.


ಹೆಡ್ ಕಾನ್ಸ್ ಟೇಬಲ್ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಗವಿರಾಜ್ ಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಪಡೆದು ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತರು.....



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು