ಪಟ್ಟಣ ಪಂಚಾಯತ್ ನಲ್ಲಿ ಎಷ್ಟು ಸೇವೆ ಲಭ್ಯವಿದೆ ಗೊತ್ತಾ...?

 ಪಟ್ಟಣ ಪಂಚಾಯತ್ ನಲ್ಲಿ ಎಷ್ಟು ಸೇವೆ ಲಭ್ಯವಿದೆ ಗೊತ್ತಾ...?



ಪೌರಾಡಳಿತ ಇಲಾಖೆಯಡಿ ಕಾರ್ಯನಿರ್ವಹಿಸುವ ಪಟ್ಟಣ ಪಂಚಾಯತ್ ಗಳಲ್ಲಿ ಎಷ್ಟೆಲ್ಲಾ ಕಾರ್ಯಗಳನ್ನು ಸಾರ್ವಜನಿಕರು ಮಾಡಿಕೊಳ್ಳಬಹುದು ಎಂಬುದು ತಿಳಿದಿರುವುದಿಲ್ಲ. ನಮ್ಮ ನಿತ್ಯ ಆಗುಹೋಗುಗಳು ಸೇರಿ ಹತ್ತು ಹಲವು ಕಾರ್ಯಗಳನ್ನು ಪಂಚಾಯತ್ ಅಡಿ ಮಾಡಿಸಿಕೊಳ್ಳಬಹುದು. ಪಂಚಾಯತ್ ಗಳು ಇಲಾಖೆಯ ಅಡಿಯಲ್ಲಿ ಸೇವಾ ಪಟ್ಟಿ ಈ ಮೇಲೆ ನೀಡಲಾಗಿದ್ದು, ಅಗತ್ಯ ಸೇವೆಗಳ ಕುರಿತು ತಿಳಿಯಲು ಫೋಟೋ ಮೇಲೆ ಕ್ಲಿಕ್ ಮಾಡಿ.

ಪಟ್ಟಣ ಪಂಚಾಯತನಲ್ಲಿ ದೊರಕುವ ಸೇವೆಗಳು.

👉 ಜನನ, ಮರಣ ಮತ್ತು ಸತ್ತು ಹುಟ್ಟಿದ ಮಗುವಿನ ಪ್ರಮಾಣ ಪತ್ರಗಳನ್ನು ವಿತರಿಸಿವುದು.

👉ನಿಯಮಿಸಲಾದಂತೆ ವಾಣಿಜ್ಯ ಲೈಸೆನ್ಸ್ ಅನ್ನು ನೀಡುವುದು.

👉ಖಾತಾ ಉದ್ಭತ / ಪ್ರಮಾಣಪತ್ರ 

👉ಕಟ್ಟಡ ಪರವಾನಗಿ ನೀಡುವುದು.

👉 ನಳ ಮತ್ತು ಒಳಚರಂಡಿ ವ್ಯವಸ್ಥೆಯ ಸಂಪರ್ಕವನ್ನು ಕಲ್ಪಿಸುವುದು.

👉 ಕಟ್ಟಡದ ಸ್ವಾಧೀನಾನುಭವ ಪ್ರಮಾಣಪತ್ರ ನೀಡುವುದು.

👉 ಆಸ್ತಿಗಳ ಮಾಲೀಕತ್ವದ ಹಕ್ಕು ಬದಲಾವಣೆ.

👉 ವಿದ್ಯುತ್ ಸಂಪರ್ಕಕ್ಕಾಗಿ ರಸ್ತೆ ಅಗೆಯಲು ಅನುಮತಿ ನೀಡುವುದು.

👉 ಅಂತರ್ಜಲ ಬಳಕೆಗೆ ನಿರಾಪೇಕ್ಷಣಾ ಪಾತ್ರ ನೀಡುವುದು.

👉 ಸ್ವಯಂ ಚಾಲಿತ ಉದ್ದಿಮೆ ಪರವಾನಗಿ ನವೀಕರಣ.

👉 ಓ ಎಫ್ ಸಿ ವ್ಯವಸ್ಥೆ ಕಲ್ಪಿಸಲು ರಸ್ತೆ ಅಗೆಯುವುದಕ್ಕೆ ಅನುಮತಿ ನೀಡುವುದು.

👉 ಗ್ಯಾಸ್ ಪೈಪ್ ಲೈನ್ ಅಳವಡಿಸಲು ರಸ್ತೆ ಅಗೆಯುವುದಕ್ಕೆ ಅನುಮತಿ ನೀಡುವುದು.

👉 ಫ್ಲಿಂತ್ ಪರಿಶಿಲನೆ.

👉 ಜಾಹಿರಾತಿನ ಸೂಚನಾ ಫಲಕವನ್ನು ಅಳವಡಿಸಲು ಪರವಾನಗಿ ನೀಡುವುದು.

👉 ಜಾಹಿರಾತಿನ ಸೂಚನಾ ಫಲಕದ ಪರವಾನಗಿ ನವೀಕರಣ.


ಪಟ್ಟಣ ಪಂಚಾಯತಿಯಲ್ಲಿ ಇನ್ನು ಹಲವಾರು ಸೇವೆಗಳು ಬರುತ್ತವೆ. ಕಾಲಕಾಲಕ್ಕೆ ಅಧಿಸೂಚನೆಗಳು ಹಾಗೂ ಚೀಫ್ ಆಫೀಸರ್ (ಮುಖ್ಯಾಧಿಕಾರಿಗಳು) ಇವರ ಆದೇಶದ ಮೇರೆಗೆ ಕೆಲವು  ಆದೇಶಗಳು ಜಾರಿಗೆ ಬರುತ್ತವೆ. 

ಮುಂದಿನ ದಿನಗಳಲ್ಲಿ ಡಿಜಿಟಲೀಕರಣದಿಂದ ಮನೆಯ ಉತಾರ ವನ್ನು ಆನ್ಲೈನ್ ಮೂಲಕ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು