ಫ್ರೀ ವಿದ್ಯುತ್ ಬಿಲ್ ಇಂದು ಶುರು !! ಆಗಸ್ಟ್ 01 ರಿಂದ 200 ಯೂನಿಟ್ ಗಳ ಉಚಿತ ವಿದ್ಯುತ್ ನ ಶೂನ್ಯ ಬಿಲ್ ವಿತರಣೆ :

ಫ್ರೀ ವಿದ್ಯುತ್ ಬಿಲ್ ಇಂದು ಶುರು !! 

ಆಗಸ್ಟ್ 01 ರಿಂದ 200 ಯೂನಿಟ್ ಗಳ ಉಚಿತ ವಿದ್ಯುತ್ ನ ಶೂನ್ಯ ಬಿಲ್ ವಿತರಣೆ :




          1.42 ಕೋಟಿ ಮಂದಿ ನೊಂದಣಿ: ಯೋಜನೆಯಡಿ 2.18 ಕೋಟಿ  ಮಂದಿ ನೋಂದಣಿಯಾಗುವ ನಿರೀಕ್ಷೆಯನ್ನು ಇಂಧನ ಇಲಾಖೆ ಹೊಂದಿತ್ತು. ಈವರೆಗೆ ಕೇವಲ 1.42 ಕೋಟಿ ಮಂದಿ ಮಾತ್ರ ನೋಂದಣಿ  ಮಾಡಿಕೊಂಡಿದ್ದಾರೆ. 

ಶೂನ್ಯ ಬಿಲ್ ನ ಮಾದರಿ ಬಗ್ಗೆ ಕುತೂಹಲ :

ಗೃಹಜ್ಯೋತಿ ಶೂನ್ಯ ಬಿಲ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಚಿವ ಕೆ.ಜೆ ಜಾರ್ಜ್ ಫೋಟೋ ಹಾಗೂ ಗೃಹಜ್ಯೋತಿ ಲೋಗೋ ಇರಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಗೃಹಜ್ಯೋತಿ ಫಲಾನುಭವಿಗಳಿಗೆ ಶೂನ್ಯ ಬಿಲ್ ! ಜುಲೈ ೨೭ರೊಳಗೆ ನೋಂದಾಯಿಸಿದವರಿಗೆ ಮಾತ್ರ !

         ಗೃಹಜ್ಯೋತಿ ಯೋಜನೆಯಡಿ ಉಚಿತ ಬಿಲ್ ನೀಡುವ ಪ್ರಕ್ರಿಯೆಗೆ ಆಗಸ್ಟ್ 1 ರಿಂದ ತಾಂತ್ರಿಕವಾಗಿ ಚಾಲನೆ ದೊರೆಯಲಿದ್ದು, ಜುಲೈ ನಲ್ಲಿ ನಿಗದಿತ ವಿದ್ಯುತ್ ಬಳಕೆ ಗ್ರಾಹಕರಿಗೆ ಮಂಗಳವಾರದಿಂದ ಶೂನ್ಯ ಬಿಲ್ ವಿತರಣೆ ಶುರುವಾಗಲಿದೆ. ಈ ಬಗ್ಗೆ ಇಂಧನ ಇಲಾಖೆ ಸಚಿವರು ಕೆ ಜೆ ಜಾರ್ಜ್ ಸುದ್ಧಿಗೋಷ್ಠಿಯಲ್ಲಿ ನಡೆಸಲಿದ್ದು, ಗೃಹಜ್ಯೋತಿ ನೋಂದಣಿ, ರೂಪುರೇಷೆ, ಉದ್ಘಾಟನೆ ಕುರಿತು ಮಾಹಿತಿ ನೀಡಿದರು. ಜುಲೈ 1ರಿಂದ ಬಳಕೆಯಾಗಿರುವ ಗೃಹ ಬಳಕೆ ವಿದ್ಯುತ್ ಗೆ ಗ್ರಾಹಕರು ಕಳೆದ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ಅದಕ್ಕಿಂತ ಶೇ 10ರಷ್ಟು ಹೆಚ್ಚಿನ ವಿದ್ಯುತ್ ಉಚಿತವಾಗಿ ಪಡೆಯಬಹುದು.


3 ಕಾಮೆಂಟ್‌ಗಳು

ನವೀನ ಹಳೆಯದು