ಗೃಹಲಕ್ಷ್ಮಿಗೆ ಷರತ್ತು ಸೂಚನೆ !! ಗೃಹಲಕ್ಷ್ಮಿ ಪ್ರತಿ ಯಜಮಾನಿಗೆ ಪ್ರತಿ ತಿಂಗಳು 2,000/-

ಗೃಹಲಕ್ಷ್ಮಿಗೆ ಷರತ್ತು ಸೂಚನೆ !! 

ಗೃಹಲಕ್ಷ್ಮಿ ಪ್ರತಿ ಯಜಮಾನಿಗೆ ಪ್ರತಿ ತಿಂಗಳು 2,000/-



             ರಾಜ್ಯದಲ್ಲಿ ಮನೆಯೊಡತಿಗೆ ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಷರತ್ತುಗಳನ್ನು ವಿಧಿಸುವಂತೆ ಹಣಕಾಸು ಇಲಾಖೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಪ್ರತಿ ವರ್ಷ 31 ಸಾವಿರ ಕೋಟಿ ಅವಶ್ಯಕತೆ ಇದೆ, ಮುಂಬರುವ 5 ವರ್ಷಗಳ ಪೂರ್ಣಾವಧಿಗೆ ಗೃಹಲಕ್ಷ್ಮಿ ಯೋಜನೆಗೆ ಹಣಕಾಸು ಪೂರೈಸಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ತನ್ನದೇ ಎಡಿಎ ಅಭಿಪ್ರಾಯವನ್ನು ತಿಳಿಸಿದೆ.

ಕೊನೆಯ ದಿನಾಂಕ್ 07-08-2023 ರಂದು ಅರ್ಜಿ ಸಲ್ಲಿಸಲು ನಿಗಧಿಯಾಗಿದೆ ಅಂತಾ ಹೇಳಬಹುದು....

ಜಾರಿಯಾಗಲಿರುವ ಗೃಹಲಕ್ಷ್ಮಿ ಯೋಜನೆಗೆ ಷರತ್ತುಗಳನ್ನು ಹಾಕದಿದ್ದರೆ ಪ್ರತಿ ವರ್ಷವೂ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡುವುದು ಅಸಾಧ್ಯ ಎಂದು ಹಣಕಾಸು ಇಲಾಖೆ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ.

ಗೃಹಲಕ್ಷ್ಮಿ ಯೋಜನೆ ಜಾರಿಗೂ ಮುನ್ನ ಸರ್ಕಾರಕ್ಕೆ ಅನೇಕ ಷರತ್ತುಗಳನ್ನು ಆರ್ಥಿಕ ಇಲಾಖೆ ಹಾಕಿದ್ದರು ಷರತ್ತುಗಳನ್ನು ಆರ್ಥಿಕ ಇಲಾಖೆ ಹಾಕಿದ್ದರು ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಇನ್ನು ಮುಂಬರುವ ದಿನಗಳಲ್ಲಿ ಕೇವಲ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಸೌಲಭ್ಯ ನೀಡಲು ಹಣಕಾಸು ಇಲಾಖೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಹಣಕಾಸು ಇಲಾಖೆ ಸಲ್ಲಿಸಿದ್ದ ಅಭಿಪ್ರಾಯ :

☆  ಆದಾಯ ತೆರಿಗೆದಾರರಿಗೆ ಕೊಡಬಾರದು 

☆  GST ರಿಟರ್ನ್ಸ್ ಪಾವತಿಸುವ ಮಹಿಳೆಯರಿಗೆ ನೀಡಬಾರದು.

☆  ಪ್ರೊಫ್ಫೆಷನಲ್ ಟ್ಯಾಕ್ ಪಾವತಿದಾರರಿಗಿಲ್ಲ.

☆  5 ಎಕರೆಗೂ ಮೀರಿದ ಒಣಭೂಮಿ ಹೊಂದಿರುವವರಿಗೆ ಕೊಡುವಂತಿಲ್ಲ.

☆  ಒಂದು ವರ್ಷಕ್ಕೆ ೨ ಲಕ್ಷ ಆದಾಯ ಇರುವವರಿಗೆ ಕೊಡಲಾಗದು. 

☆  4 ಚಕ್ರಗಳ ವಾಹನ ಹೊಂದಿರುವವರಿಗೆ ಬೇಡ.

☆  ಸರ್ಕಾರೀ ಉದ್ಯೋಗಿಗಳು ಮತ್ತು ಪಿಂಚಣಿ ಪಡೆಯುವವರಿಗೆ ಅನ್ವಯಿಸುವುದಿಲ್ಲ. 

☆  ಅಂಗನವಾಡಿ ಕಾರ್ಯಕರ್ತೆಯರು, ಆಶಾ ಸರ್ಕಾರದ ಗುತ್ತಿಗೆ ನೌಕರರು, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರಿಗೆ ಬೇಡ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು