ಗೃಹಲಕ್ಷ್ಮೀ ಅರ್ಜಿ ಸಲ್ಲಿಸುವ ಆಧಾರ್ EKYC ಬರುತ್ತಾ ಇದ್ದರೇ ತಪ್ಪದೆ ಈ ಕೆಲಸ ಮಾಡಿ:

ಗೃಹಲಕ್ಷ್ಮೀ ಅರ್ಜಿ ಸಲ್ಲಿಸುವ ಆಧಾರ್ EKYC ಬರುತ್ತಾ ಇದ್ದರೇ ತಪ್ಪದೆ ಈ ಕೆಲಸ ಮಾಡಿ:



ಇವತ್ತಿನ ಲೇಖನದಲ್ಲಿ ತಿಳಿಸುವುದೇನೆಂದರೆ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ವೇಳೆಯಲ್ಲಿ ಕೇಳಲಾಗುತ್ತಿರುವ EKYC ಕುರಿತಾದ ಮಾಹಿತಿಯನ್ನು ತಿಳಿಸಲಾಗುತ್ತಿದೆ. ತಪ್ಪದೆ ಸಂಪೂರ್ಣ ಮಾಹಿತಿ ಓದಿ EKYC ಸಂಬಂಧ ಕುರಿತು ತಿಳಿದುಕೊಳ್ಳಿ.

                 ಗೃಹಲಕ್ಷ್ಮೀ ಯೋಜನೆ, ಅನ್ನಭಾಗ್ಯ ಯೋಜನೆಯಡಿ ಹಣ ಪಡೆದುಕೊಳ್ಳಲು ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಹೆಸರಿಗೆ ಬದಲಾವಣೆ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ. 

ಈ ಬಗ್ಗೆ ಆಹಾರ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪಡಿತರ ಚೀಟಿಗಳಲ್ಲಿ ಮರಣ ಹೊಂದಿದವರ ಹೆಸರನ್ನು ತೆಗೆದು ಹಾಕಲು, ಕುಟುಂಬದ ಯಜಮಾನರ ಹೆಸರನ್ನು ತೆಗೆದು ಹಾಕಲು, ಕುಟುಂಬದ ಯಜಮಾನರ ಹೆಸರನ್ನು ಬದಲಾವಣೆ ಮಾಡಲು, ನ್ಯಾಯಬೆಲೆ ಅಂಗಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದಿದೆ. ರಾಜ್ಯದ ಜನರು ತಮ್ಮ ವ್ಯಾಪ್ತಿಯಲ್ಲಿನ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ, ಪಡಿತರ ಚೀಟಿಯಲ್ಲಿ ಮೃತ ಕುಟುಂಬದ ಹೆಸರನ್ನು ತೆಗೆಸಿ ಹಾಕಿ, ಹಾಲಿ ಕಾರ್ಡ್ ನಲ್ಲಿ ಇರುವಂತಹ ಸದಸ್ಯರೊಬ್ಬರನ್ನು ಮುಖ್ಯಸ್ಥರನ್ನಾಗಿ ಬದಲಾವಣೆ ಮಾಡಿಸಬಹುದಾಗಿದೆ ಎಂದು ಹೇಳಿದೆ.

ಇದಲ್ಲದೇ .............
              ಗೃಹಲಕ್ಷ್ಮೀ ಅರ್ಜಿ ಸಲ್ಲಿಸುವಾಗ ಆಧಾರ್ ekyc ಆಯ್ಕೆ ಬರುತ್ತದೆ, ಅದನ್ನು ಕಡ್ಡಾಯವಾಗಿ ನೀವು ಮಾಡಲೇ ಬೇಕಾಗುತ್ತದೆ. ಇಲ್ಲವಾದಲ್ಲಿ ಅರ್ಜಿ ಸ್ವೀಕೃತಿ ಮುಂದೊರೆಯುವುದಿಲ್ಲ.

ಹಾಗಿದ್ದರೆ eKYC ಯನ್ನು ಎಲ್ಲಿ ಮಾಡಬೇಕು ? ಎನ್ನುವುದಾದರೆ ನ್ಯಾಯಬೆಲೆ ಅಂಗಡಿಗಳಲ್ಲಿ, ಅಥವಾ ಬ್ಯಾಂಕ್ ಗೆ ಹೋಗಿ ekyc ಮಾಡಬಹುದಾಗಿದೆ. ಅಥವಾ ನಿಮ್ಮ ಹತ್ತಿರದ ಸೇವಾ ಕೇಂದ್ರಗಳಲ್ಲಿ ಕೂಡ ಮಾಡಿಸಬಹುದು.


1 ಕಾಮೆಂಟ್‌ಗಳು

ನವೀನ ಹಳೆಯದು