ಸೆಪ್ಟೆಂಬರ್ ತಿಂಗಳಿಂದ ಹೊಸ ಪಡಿತರ ಚೀಟಿ ವಿತರಣೆ ಶುರು ಹಾಗೂ ,,,,,,,,, ಬಿಪಿಎಲ್ ಗೆ ಹೊಸ ಮಾನದಂಡ !!!

ಸೆಪ್ಟೆಂಬರ್ ತಿಂಗಳಿಂದ ಹೊಸ ಪಡಿತರ ಚೀಟಿ ವಿತರಣೆ ಶುರು ಹಾಗೂ ,,,,,,,,,
ಬಿಪಿಎಲ್ ಗೆ ಹೊಸ ಮಾನದಂಡ !!! 



2.9 ಲಕ್ಷ ಅರ್ಜಿಗಳು ಇಲಾಖೆಯಲ್ಲಿ ಬಾಕಿ । ಆರ್ಥಿಕ ಇಲಾಖೆ ಅನುಮತಿ ಪಡೆದು ವಿತರಣೆ । ಸಚಿವ ಮುನಿಯಪ್ಪ ಹೇಳಿಕೆ ।

          ರಾಜ್ಯದಲ್ಲಿ ನೂತನವಾಗಿ ರೇಷನ್ ಕಾರ್ಡ್ ವಿತರಿಸಲು ಸರ್ಕಾರ ನಿರ್ಧರಿಸಿದೆ. ಚುನಾವಣಾ ನೀತಿಸಂಹಿತೆ ಕಾರಣಕ್ಕೆ ಸ್ಥಗಿತವಾಗಿದ್ದ ಪ್ರಕ್ರಿಯೆ ಪುನಾರಂಭಕ್ಕೆ ಶೀಘ್ರವೇ ಚಾಲನೆ ಸಿಗಲಿದೆ. ಆದರೆ ಬಿಪಿಎಲ್ ಕಾರ್ಡ್ ಹೊಂದಲು ಹೊಸ ಮಾನದಂಡ ರೂಪಿಸಲಾಗಿದ್ದು, ವೈಟ್ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ. 

ವೈಟ್ ಬೋರ್ಡ್ ಕಾರು ಇದ್ದರೆ ಬಿಪಿಎಲ್ ಇಲ್ಲ !

        ಬಿಪಿಎಲ್ ಕಾರ್ಡ್ ಗೆ ಇರುವ ಮಾನದಂಡಗಳನ್ನು ಉಲ್ಲಂಘಿಸಿ ಪಡೆದಿರುವ ಹಲವರ ಬಿಪಿಎಲ್ ಮೊದಲು ರದ್ದು ಮಾಡಲಾಗಿದೆ. ಮುಂದೆಯೂ ಅನರ್ಹ ಕಾರ್ಡ್ ಗಳ ಬಗ್ಗೆ ತನಿಖೆ ನಡೆಸಲಾಗುವುದು. ಯಾವಾಗ ಎಂಬುದು ಸಧ್ಯಕ್ಕೆ ನಿರ್ಧರಿಸಿಲ್ಲ.  ವಿಧಾನಸೌಧದಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಹಾರ ಮತ್ತು ನಾಗರೀಕ  ಪೂರೈಕೆ ಸಚಿವ ಕೆ ಎಚ್ ಮುನಿಯಪ್ಪ ಅವರು ದುಡಿಮೆಗಾಗಿ ಕಾರನ್ನು (ಯಲ್ಲೋ ಬೋರ್ಡ್) ಇಟ್ಟುಕೊಂಡಿರುವವರು ಬಿಪಿಎಲ್ ಕಾರ್ಡ್ ಗೆ ಅರ್ಹರಿರುತ್ತಾರೆ. 2016ರಲ್ಲಿ ಬಿಪಿಎಲ್ ಕಾರ್ಡ್  ಪಡೆಯಲು ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಇದರಡಿ ವಾಣಿಜ್ಯ ಬಳಕೆಗೆ ತೆಗೆದುಕೊಳ್ಳುವ ತ್ರಿಚಕ್ರ ವಾಹನ ಅಥವಾ ಕಾರು ಹೊಂದಿರುವವರಿಗೆ ಕಾರ್ಡ್ ನೀಡಬಹುದು..  ಈಗಾಗಲೇ 2,95,986 ಅರ್ಜಿ ಬಿಪಿಎಲ್ ಕಾರ್ಡ್ ಕೋರಿ ಸಲ್ಲಿಸಲ್ಪಟ್ಟಿದ್ದು ಶೀಘ್ರವೇ ಪರಿಶೀಲನೆ ನಡೆಸಿ ಅರ್ಹರನ್ನು ಆಯ್ಕೆ ಮಾಡಿ ಆರ್ಥಿಕ ಇಲಾಖೆ ಅನುಮೋದನೆಗೆ ಸಲ್ಲಿಸಲಾಗುವುದು ಎಂದು ವಿವರಿಸಿದರು.




ಒಂದು ಕೋಟಿ ಕುಟುಂಬಗಳಿಗೆ 566 ಕೋಟಿ ರೂ ಹಣ:

              ಅನ್ನಭಾಗ್ಯ ಯೋಜನೆ ಜಾರಿಗೆ ಬಂದು ಒಂದು ತಿಂಗಳ ಒಳಗಾಗಿ ಒಂದು ಕೋಟಿಗೂ ಹೆಚ್ಚು ಪಡಿತರ ಕುಟುಂಬಗಳಿಗೆ 566 ಕೋಟಿ ರೂ ಜಮೆ ಮಾಡಲಾಗಿದೆ. ಇದರಿಂದ 3.5 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ. ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಬದಲು ಪ್ರತಿ ಸದಸ್ಯರಿಗೆ 170 ಗಳಂತೆ ಹಣವನ್ನು ನೇರವಾಗಿ ಡಿಬಿಟ್ ಮುಖಾಂತರ ವಿತರಿಸಿದ ಕೀರ್ತಿಗೆ ರಾಜ್ಯ ಸರ್ಕಾರ ಪಾತ್ರವಾಗಿದೆ. ಈ ಬಾರಿ ಅನ್ನಭಾಗ್ಯದಡಿ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದೆವು. ಕೇಂದ್ರ ಸಹಕರಿಸದ ಕಾರಣ 5 ಕೆಜಿ ಅಕ್ಕಿಗೆ ಹಣ ನೀಡುತ್ತಿದ್ದೇವೆ. ಯೋಜನೆಗೆ ಚಾಲನೆ ದೊರೆತು ಇಂದಿಗೆ 25  ದಿನಗಳಾಗಿವೆ. ಅತಿ ಕಡಿಮೆ ಸಮಯದಲ್ಲಿ ನೇರ ನಗದು ವರ್ಗಾವಣೆ ಮಾಡಿರುವುದು ದಾಖಲೆಯಾಗಿದೆ ಎಂದರು 
          ಇದೆ ವೇಳೆ ಈ ತಿಂಗಳು ಹಣ ಪಡೆಯಲು ಅನರ್ಹ ಆದವರಿಗೆ ಈ ತಿಂಗಳ ಹಣ ಮುಂದಿನ ತಿಂಗಳು ಕೊಡಲ್ಲ. ಖಾತೆ ಎಡಿಎ ಮೇಲೆ ಆ ತಿಂಗಳಿಂದಲೇ ಹಣ ಕೊಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

2 ತಿಂಗಳಲ್ಲಿ ಹಣ ವಿತರಣೆ ನಿಲ್ಲಿಸಿ ಧಾನ್ಯ ವಿತರಣೆ :

               ಅನ್ನಭಾಗ್ಯ ಅಡಿ ಅಕ್ಕಿ ಹೊಂದಿಸಲು ಪ್ರಯತ್ನ ಮುಂದುವರೆದಿದೆ. ಅಕ್ಕಿ ಜತೆ ರಾಗಿ, ಬಿಳಿ ಜೋಳ ನೀಡಲು ನಿರ್ಧರಿಸಲಾಗಿದೆ. ಅಗತ್ಯ ಆಹಾರಧಾನ್ಯ ಕ್ರೋಢೀಕರಣ ಆದರೆ ಮುಂದಿನ ಎರಡು ತಿಂಗಳಲ್ಲಿ ಆಧಾರಧಾನ್ಯ ನೀಡಲಾಗುವುದು ಎಂದು ಕೆ ಎಚ್ ಮುನಿಯಪ್ಪ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ರೈತರಿಂದ 8 ಲಕ್ಷ ಟನ್ ರಾಗಿ, 3 ಲಕ್ಷ ಟನ್ ಜೋಳ ಖರೀದಿ ಮಾಡುತ್ತೇವೆ. ಉಳಿದಂತೆ ಆಂಧ್ರ ಮತ್ತು ತೆಲಂಗಾಣ ಅಕ್ಕಿ ಕೊಡಲು ಮುಂದೆ ಬಂದಿವೆ. ಕೆ ಜಿ ಗೆ ೩೪ ರೂ ಗಿಂತ ಹೆಚ್ಚು ನೀಡಲ್ಲ ಎಂದು ಹೇಳಿದ್ದೇವೆ. ಎರಡು ರಾಜ್ಯಗಳ ಜತೆ ಮಾತನಾಗುತ್ತಿದ್ದೇವೆ. ಜತೆಗೆ ನಾಫೆಡ್, ಕೇಂದ್ರೀಯ ಭಂಡಾರದಿಂದಲೂ ಅಕ್ಕಿ ಪಡೆಯುವ ಪ್ರಯತ್ನ ಮುಂದುವರೆದಿದೆ ಎಂದರು. ಅಥವಾ //////

 ಸೆಪ್ಟೆಂಬರ್ ನಿಂದನೇ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಲಾಗಿದೆ. 5 ಕೆಜಿ ಅಕ್ಕಿ ಬದಲು ಜನರಿಗೆ ಸುಧೀರ್ಘ ಅವಧಿಗೆ ಹಣ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮುಂದಿನ ತಿಂಗಳಿನಿಂದಲೇ 10 ಕೆಜಿ ಅಕ್ಕಿ ನೀಡಲು ಚಿಂತನೆ ನಡೆಯುತ್ತಿದೆ. ಅಕ್ಕಿ ಸಿಗದಿದ್ದರೆ ಅನಿವಾರ್ಯವಾಗಿ ದುಡ್ಡನ್ನೇ ಫಲಾನುಭವಿಗಳ ಖಾತೆಗೆ ಹಾಕಬೇಕಾಗುತ್ತದೆ. ಅಕ್ಕಿ ಒದಗಿಸುವ ಬಗ್ಗೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮಾತುಕತೆ ನಡೆಯುತ್ತಿದ್ದು, ಎರಡು ರಾಜ್ಯಗಳು ಮುಂದೆ ಬಂದಿವೆ ಎಂದರು.

ಆಂಧ್ರ ಪ್ರದೇಶದಲ್ಲಿ ಜಾರಿಯಲ್ಲಿರುವಂತೆ ಆಹಾರ ಧಾನ್ಯ ಪಡೆಯುವವರಿಗೆ ಎ ಕಾರ್ಡ್ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಬಿ ಕಾರ್ಡ್ ವಿತರಣೆ ಯೋಚನೆ ಇದೆ. ಇದರ ಅನುಷ್ಠಾನಕ್ಕೆ ಅಧಿಕಾರಿಗಳ ತಂಡ ರಚಿಸಿ ಆ ರಾಜ್ಯಕ್ಕೆ ಭೇಟಿ ನೀಡಿ ಅಧ್ಯಯನ ವರದಿ ಪಡೆದುಕೊಂಡ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು