ಚಂದ್ರಸ್ಪರ್ಶಕ್ಕೆ ಶುರುವಾಗಿದೆ ಕ್ಷಣಗಣನೆ !!!

ಚಂದ್ರಸ್ಪರ್ಶಕ್ಕೆ ಶುರುವಾಗಿದೆ ಕ್ಷಣಗಣನೆ !!! 

ಸುರಕ್ಷಿತ ಲ್ಯಾಂಡಿಂಗ್ ಗೆ ಸ್ಥಳ ಹುಡುಕುತ್ತಿರುವ ವಿಕ್ರಂ । ಬಂಡೆಗಳು, ಕಂದಕ ಇಲ್ಲದ ಸ್ಥಳಕ್ಕೆ ಲ್ಯಾಂಡರ್ ಶೋಧ




          ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಕಳಿಸಿರುವ ಚಂದ್ರಯಾನ ನೌಕೆ ಚಂದ್ರನ ದಕ್ಷಿಣ ಭಾಗದ ಚಿತ್ರಗಳನ್ನು ಸೋಮವಾರ ಬಿಡುಗಡೆ ಮಾಡಿದ್ದೂ, ಸುರಕ್ಷಿತ ಲ್ಯಾಂಡಿಂಗ್ ಗೆ ಉತ್ತಮ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ.
ಕಾರ್ಯಾಚರಣೆಯ ಕೊನೆಯ ಹಂತದಲ್ಲಿರುವ ಲ್ಯಾಂಡರ್ ವಿಕ್ರಂ ಚಂದ್ರನ ಮೇಲ್ಮೈನ ಹಲವು ಚಿತ್ರಗಳನ್ನು ಸೆರೆ ಹಿಡಿದಿದೆ. ಇವುಗಳ ಆಧಾರದ ಮೇಲೆ, ಹಲವು ರೀತಿಯ ವಿಶ್ಲೇಷಣೆ ನಡೆಸಿ, ಆಗಸ್ಟ್ 23ರಂದು ಸುರಕ್ಷಿತ ಸ್ಥಳದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಲಿದೆ. ನಂತರ ರೋವರ್ ಚಂದ್ರನ ಮೇಲೆ ಇಳಿದು ಶೋಧ ಕಾರ್ಯ ನಡೆಸಲಿದೆ. 
ಚಂದ್ರನ ದಕ್ಷಿಣ ಧ್ರುವವನ್ನು ಕಪ್ಪು ಭಾಗ ಎಂದೂ ಕರೆಯುತ್ತಾರೆ. ಈ ಪ್ರದೇಶದ ಬಗ್ಗೆ ವಿಜ್ಞಾನಿಗಳಿಗೆ ಹೆಚ್ಚಿನ ಮಾಹಿತಿ ಇಲ್ಲ. ಚಂದ್ರನ ಈ ಭಾಗದ ಹೆಪ್ಪುಗಟ್ಟಿದ ನೀರು ಮತ್ತು ಅಮೂಲ್ಯ ಖನಿಜ ನಿಕ್ಷೇಪ ಇದೆ ಎಂಬುದು ವಿಜ್ಞಾನಿಗಳ ಅಂದಾಜಾಗಿದೆ. 

         ⭐2008 ರಲ್ಲಿ ಮೊದಲ ಚಂದ್ರಯಾನ ಯೋಜನೆ ಕೈಗೊಳ್ಳಲಾಗಿತ್ತು. ಇದು ಚಂದ್ರನ ಮೇಲ್ಮೈನಲ್ಲಿ ನೀರಿನ ಅಂಶ ಇರುವಿಕೆ ಕಂಡುಹಿಡಿದಿತ್ತು. ಹಗಲಿನ ಸಮಯದಲ್ಲಿ ಚಂದ್ರನಿಗೆ ವಾತಾವರಣವಿದೆ ಎಂಬುದನ್ನು ಕಂಡುಬಂದಿತ್ತು. 

         ⭐ಚಂದ್ರಯಾನ-2 ಅರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಒಳಗೊಂಡಿತ್ತು. ಜುಲೈ 2019ರಲ್ಲಿ ಉಡಾವಣೆಗೊಂಡು ಭಾಗಶಃ ಯಶಸ್ವಿಯಾಗಿತ್ತು. ಆದರೆ ಲ್ಯಾಂಡರ್ ಮೃದುವಾಗಿ ಲ್ಯಾಂಡ್ ಆಗಲು  ವಿಫಲವಾಗಿತ್ತು.

ಭಾರತಕ್ಕೆ ಏನು ಪ್ರಯೋಜನ ?

          ಚಂದ್ರಯಾನ ಯೋಜನೆ ಆರ್ಥಿಕ ಲಾಭಗಳಿಗೆ ದಾರಿ ಮಾಡಿಕೊಡುತ್ತದೆ. ಭಾರತದ ಬಾಹ್ಯಾಕಾಶ ಆರ್ಥಿಕತೆ 2025ರ ವೇಳೆಗೆ 13 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಚಂದ್ರನ ಮೇಲೆ ಯಶಸ್ವಿ ಲ್ಯಾಂಡಿಂಗ್ ಆದರೆ ಭಾರತದ ತಾಂತ್ರಿಕತೆ ಇಡೀ ವಿಶ್ವಕ್ಕೆ ಪರಿಚಯವಾಗಲಿದೆ.

ಚಂದ್ರಯಾನ-3 ಹೇಗೆ ಉತ್ತಮ ?

ಚಂದ್ರಯಾನ-2 ಯೋಜನೆಯಿಂದ ಹಲವು ಪಾಠಗಳನ್ನು ಕಲಿತು ಚಂದ್ರಯಾನ-3 ರಲ್ಲಿ ಹಲವು ಸುಧಾರಣೆಗಳನ್ನು ಮಾಡಲಾಗಿದೆ. ಟಾರ್ಗೆಟ್ ಲ್ಯಾಂಡಿಂಗ್ ಪ್ರದೇಶವನ್ನು 4.2 ಕಿಮೀ ಉದ್ದ ಮತ್ತು 2.5 ಕಿಮೀ ಅಗಲಕ್ಕೆ ವಿಸ್ತರಿಸಲಾಗಿದೆ. ಚಂದ್ರಯಾನ-3 ಲೇಸರ್ ಡಾಪ್ಲರ್ ವೆಲೊಸಿಮೀಟರ್ ನೊಂದಿಗೆ ನಾಲ್ಕು ಎಂಜಿನ್ ಗಳನ್ನು ಹೊಂದಿದೆ. ಅಂದರೆ ಅದು ಚಂದ್ರನ ಇಳಿಯುವಿಕೆಯ ಎಲ್ಲಾ ಹಂತಗಳಲ್ಲಿ ಅದರ ಎತ್ತರ ಮತ್ತು ದೃಷ್ಟಿಕೋನವನ್ನು ನಿಯಂತ್ರಿಸುತ್ತದೆ.

whatss


ವಿಕ್ರಮ್ ಗೆ ಚಂದ್ರಯಾನ-2 ಆರ್ಬಿಟರ್ ಸ್ವಾಗತ 

                 ಚಂದ್ರಯಾನ-3 ನೌಕೆಯನ್ನು ಚಂದ್ರಯಾನ-2 ನೌಕೆ ಸ್ವಾಗತಿಸಿದೆ! ಎರಡು ಬಾಹ್ಯಾಕಾಶ ನೌಕೆಗಳ ನಡುವೆ ಸಂಪರ್ಕ ಸ್ಥಾಪಿಸಲಾಗಿದೆ. ಈ ಬಗ್ಗೆ ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಚಂದ್ರಯಾನ-2 ರ ಆರ್ಬಿಟರ್ ಮತ್ತು ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ನಡುವೆ ದ್ವಿಮುಖ ಸಂವಹನ ಏರ್ಪಟ್ಟಿದೆ. ಈಗ ಬೆಂಗಳೂರಿನಲ್ಲಿ ನೆಲೆಗೊಂಡಿರುವ ಮಿಷನ್ ಆಪರೇಷನ್ ಕಾಂಪ್ಲೆಕ್ ನಿಂದ ವಿಕ್ರಮ್ ಲ್ಯಾಂಡರ್ ಜತೆ ಸುಲಭವಾಗಿ ಸಂಪರ್ಕ ಸಾಧಿಸಬಹುದು. ಪ್ರಸ್ತುತ ನೌಕೆ ಚಂದ್ರನಿಂದ 25 ಕಿಲೋಮೀಟರ್ ಎತ್ತರದಲ್ಲಿ ಸುತ್ತುತ್ತಿದೆ. ಆಗಸ್ಟ್ 23 ರಂದು ಭಾರತೀಯ ಕಾಲಮಾನ ಸಂಜೆ 6:04 ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಯಲ್ಲಿ ಇಳಿಯಲಿದೆ.

ವಿಜಾನಿಗಳಲ್ಲಿ ವಿಶ್ವಾಸ .....

ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಅಂತರ್ಗತ ಸಾಲ್ಟೇಜ್ ಮೋಡ್ ಹೊಂದಿದೆ. ಕೊನೆ ಕ್ಷಣದಲ್ಲಿ ಏನೇ ತಾಂತ್ರಿಕ ದೋಷ ಆದರೂ ಚಂದ್ರನ ಮೇಲೆ ಇಳಿಯಲು ಇದು ನೆರವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಚಂದ್ರಯಾನ-೨ ವೈಫಲ್ಯದ ನಂತರ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. 
ಚಂದ್ರಯಾನ-2 ಲ್ಯಾಂಡರ್ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದ  ಕಾರಣ ವಿಫಲವಾಯಿತು. ಈಗ ಅದನ್ನು ಸರಿಪಡಿಸಲಾಗಿದೆ. ವಿಕ್ರಮ್ ಲ್ಯಾಂಡರ್ ಕಾಲುಗಳು ಹೆಚ್ಚು ಧೃಢವಾಗಿವೆ. ಚಂದ್ರಯಾನ-3 ಅನ್ನು ಆರು ಸ್ನಿಗ್ನಾ ಬೌಂಡರ್ ಗಳಿಗಾಗಿ ವಿನ್ಯಾಸಪಡಿಸಲಾಗಿದೆ. ಸಾಕಷ್ಟು ಒತ್ತಡ ಪರೀಕ್ಷೆಗೆ ಇದನ್ನು ಒಳಪಡಿಸಲಾಗಿದೆ. ಲ್ಯಾಂಡರ್ ಎರಡು ಆನ್-ಬೋರ್ಡ್ ಕಂಪ್ಯೂಟರ್ ಗಳನ್ನು ಹೊಂದಿದೆ. ಚಂದ್ರಯಾನ-೨ ರಲ್ಲಿ ಒಂದು ಕಂಪ್ಯೂಟರ್ ಇತ್ತು. ಹೀಗಾಗಿ ವಿಕ್ರಮ್ ಲ್ಯಾಂಡರ್ ನಿರೀಕ್ಷೆಯಂತೆ ಕಾರ್ಯನಿರ್ವಹಿಸಲಿದೆ.

ಲ್ಯಾಂಡಿಂಗ್ ನೇರ ಪ್ರಸಾರ :

ಬಹುನಿರೀಕ್ಷಿತ ಚಂದ್ರಯಾನ ಲ್ಯಾಂಡಿಂಗ್ ಆಗಸ್ಟ್ 23ರಂದು ದೂರದರ್ಶನದಲ್ಲಿ ನೇರ ಪ್ರಸಾರವಾಗಲಿದೆ. ಇಸ್ರೋದ ವೆಬ್ ಸೈಟ್, ಅದರ ಯೌಟ್ಯೂಬ್ ಚಾನೆಲ್, ಇಸ್ರೋದ ಫೇಸ್ಬುಕ್ ಪುಟ ಸೇರಿದಂತೆ ಅನೇಕ ಮಾಧ್ಯಮಗಳಲ್ಲಿ ಸಂಜೆ 5.27 ಕ್ಕೆ ನೇರ ಪ್ರಸಾರ ಆರಂಭವಾಗಲಿದೆ.




whatss


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು