ಕರ್ನಾಟಕ PDO ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಸ್ವೀಕಾರ ಆರಂಭ : ಅರ್ಜಿ ವಿಧಾನ ಇಲ್ಲಿದೆ...
Karnataka PDO Jobs 2024 Application Dates : ಪದವಿ ಪಾಸ್ ಮಾಡಿದ್ದು, ಒಂದೊಳ್ಳೆ ಸರ್ಕಾರಿ ಉದ್ಯೋಗ ಪಡೆಯಬೇಕು ಎಂದುಕೊಂಡ ಕರ್ನಾಟಕ ನಿರುದ್ಯೋಗಿ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ. ಕೆಎಎಸ್, ಗ್ರೂಪ್ ಬಿ, ಗ್ರೂಪ್ ಸಿ, ಹುದ್ದೆಗಳ ಜತೆಗೆ, ಕೆಪಿಎಸ್ ಸಿ ಈ ವರ್ಷ 247 PDO ಹುದ್ದೆಗಳಿಗೆ ಅರ್ಜಿ ಕರೆದಿದೆ.ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.
ಯಾವುದೇ ಡಿಗ್ರಿ ಪಾಸ್ ಮಾಡಿದ್ದು ಕೆಲಸಕ್ಕಾಗಿ ಹುಡುಕಾಡುತ್ತಿರುವವರಿಗೆ ಈ ವರ್ಷ ಭರ್ಜರಿ ಜಾಬ್ ಆಫರ್ ಅನ್ನು ಕರ್ನಾಟಕ ಸರ್ಕಾರ ನೀಡಿದೆ. ಕೆಪಿಎಸ್ ಸಿ, ಕೆಇಎ ಮೂಲಕ ಸುಮಾರು 16 ಕ್ಕೂ ಹೆಚ್ಚು ಇಲಾಖೆಗಳ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು,ಇವುಗಳ ಪೈಕಿ ಹಲವು ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸ್ವೀಕಾರ ಆರಂಭವಾಗಿದೆ. ನೀವು ಸಹ ನಿರುದ್ಯೋಗಿ ಯುವಕ ಯುವತಿಯರಾಗಿದ್ದಲ್ಲಿ ಈಗ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಹೆಚ್ಚಿನ ಉದ್ಯೋಗ ಮಾಹಿತಿಗಳಿಗಾಗಿ ವಿಜಯ ಕರ್ನಾಟಕ ವೆಬ್ ನ ಉದ್ಯೋಗ ಸೆಕ್ಷನ್ ಗೆ ಭೇಟಿ ನೀಡಿ, ಲೇಟೆಸ್ಟ್ ಉದ್ಯೋಗ ಮಾಹಿತಿಗಳ ಅಪಡೇಟ್ ಪಡೆದುಕೊಳ್ಳಿ. ನೀವು ಅರ್ಹ ಹುದ್ದೆಗಳಿಗೆ ಅರ್ಜಿ ಹಾಕಿರಿ.
ಅಂದಹಾಗೆ ಕಳೆದ ತಿಂಗಳೇ ಕೆಪಿಎಸ್ ಸಿ ಅಧಿಸೂಚಿಸಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಇದೀಗ ಅರ್ಜಿ ಸ್ವೀಕಾರ ಆರಂಭವಾಗಿದೆ. 150 ಉಳಿಕೆ ಮೂಲ ವೃಂದದ, 97 ಹೈದ್ರಾಬಾದ್ ಕರ್ನಾಟಕ ವೃಂದದ ಪಿಡಿಒ ಹುದ್ದೆಗಳಿಗೆ ಯಾವುದೇ ಪದವಿ ಪಾಸಾದವರು - ತತ್ಸಮಾನ ವಿದ್ಯಾರ್ಹತೆಯುಳ್ಳವರು ಅರ್ಜಿಯನ್ನು ಈಗ ಸಲ್ಲಿಸಬಹುದು.
ಕರ್ನಾಟಕ ಲೋಕಸೇವಾ ಆಯೋಗವು ಏಪ್ರಿಲ್ 15 ರಂದು ಆನ್ ಲೈನ್ ಅರ್ಜಿ ಲಿಂಕ್ ಆಕ್ಟಿವೇಟ್ ಮಾಡಿದ್ದು, ಮೇ 15, 2024 ರವರೆಗೆ ಅರ್ಜಿ ಸ್ವೀಕರಿಸಲಿದೆ.ನಂತರದಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಇರುವುದಿಲ್ಲ.ಆದ್ದರಿಂದ ಕೊನೆ ಕ್ಷಣದವರೆಗೆ ಕಾಯದೇ ಇಂದಿನಿಂದಲೇ ಅರ್ಜಿ ಹಾಕಿರಿ.

WhatsApp Group
