ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಣೆ ಅವಧಿ ಮತ್ತೆ 6 ತಿಂಗಳಿಗೆ ವಿಸ್ತರಣೆ....

ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ ವಿತರಣೆ ಅವಧಿ ಮತ್ತೆ 6 ತಿಂಗಳಿಗೆ ವಿಸ್ತರಣೆ....


   
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು "ಶಕ್ತಿ ಯೋಜನೆಯಡಿ ಮೂರು ತಿಂಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಿಸಲು ಈ ಹಿಂದೆ ಕೈಗೊಂಡಿದ್ದ ನಿರ್ಣಯಕ್ಕೆ ಘಟೋನೋತ್ತರ ಅನುಮೋದನೆ ನೀಡುವುದರ ಜೊತೆಗೆ ಈ ಅವಧಿಯನ್ನು ಇನ್ನೂ ಯಾರು ತಿಂಗಳು ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.

whatss

ಅಲ್ಲದೆ ಸ್ಮಾರ್ಟ್ ಕಾರ್ಡ್ ಗಾಗಿ ಫಲಾನುಭವಿಗಳಿಗೆ ಒದಗಿಸಲಾಗುತ್ತಿರುವ ಪ್ರತಿ ಕಾರ್ಡ್ ಗೆ 14.16  ರೂ ಸೇವಾ ಶುಲ್ಕವನ್ನು ನಿಗದಿ ಮಾಡಲಾಗಿದೆ. ಎಂದು ಅವರು ತಿಳಿಸಿದರು.
"ಕೆಎಸ್ ಆರ್ ಟಿಸಿ ಯಿಂದ 100 ಕೋಟಿ ರೂ ವೆಚ್ಚದಲ್ಲಿ 250  ಹೊಸ ಬಸ್ಸುಗಳು, ವಾಯವ್ಯ ರಾಜ್ಯ ರಸ್ತೆ ಸಾರಿಗೆ ನಿಗಮವು 150 ಕೋಟಿ ರೂ ವೆಚ್ಚದಲ್ಲಿ375  ಹೊಸ ಬಸ್ಸುಗಳು, ಕೆಕೆಆರ್ ಟಿಸಿ ಯಲ್ಲಿ 300 ಕೋಟಿ ರೂ ವೆಚ್ಚದಲ್ಲಿ 250 ಬಸ್ಸುಗಳು ಹಾಗೂ ಬಿಎಂಟಿಸಿ ಯಲ್ಲಿ 320 ಎಸಿ ಎಲೆಕ್ಟ್ರಿಕಲ್ ಬಸ್ಸುಗಳನ್ನು 150 ಕೋಟಿ ರೂ ವೆಚ್ಚದಲ್ಲಿ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ" ಎಂದು ಎಚ್ಚ ಕೆ ಪಾಟೀಲ್ ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು