ನಿಗಮದಿಂದ ಒಳ್ಳೆಯ ಪ್ಲಾನ್ !! ಕೆ ಎಸ್ ಆರ್ ಟಿ ಸಿ ಗಳಲ್ಲಿ ಇನ್ನು ಮುಂದೆ ಕಂಡಕ್ಟರ್ ಜತೆ "ಚಿಲ್ಲರೆ" ಜಗಳ ಇರಲ್ಲ.....

ನಿಗಮದಿಂದ ಒಳ್ಳೆಯ ಪ್ಲಾನ್ !! ಕೆ ಎಸ್ ಆರ್ ಟಿ ಸಿ ಗಳಲ್ಲಿ ಇನ್ನು ಮುಂದೆ ಕಂಡಕ್ಟರ್ ಜತೆ "ಚಿಲ್ಲರೆ" ಜಗಳ ಇರಲ್ಲ.....



   
ಕರ್ನಾಟಕದ ಯಾವ ಸಾರಿಗೆ ಬಸ್ ಹತ್ತಿದರೂ ಚಿಲ್ಲರೆ ಸಮಸ್ಯೆ ಎಂಬುದು ಪ್ರಯಾಣಿಕರು ಹಾಗೂ ನಿರ್ವಾಹಕರನ್ನು ಬಾಧಿಸುತ್ತದೆ. ಎಲ್ಲರಿಗೂ ಚಿಲ್ಲರೆ ಕೊಡಲು ಕಂಡಕ್ಟರ್ ಗೆ ಸಾಧ್ಯವಾಗುವುದಿಲ್ಲ. ತುಂಬಾ ಪ್ರಯಾಣಿಕರ ಬಳಿ ಚಿಲ್ಲರೆಯೇ ಇರುವುದಿಲ್ಲ. ಇದರಿಂದಾಗಿ ನಿತ್ಯ ಬಸ್ ಗಳಲ್ಲಿ ಕಂಡಕ್ಟರ್ ಮತ್ತು ಪ್ರಯಾಣಿಕರ ಮದ್ಯೆ ಚಿಲ್ಲರೆ ಜಗಳ ಇದ್ದೇ ಇರುತ್ತದೆ. ಆದರೆ ಇದನ್ನು ತಪ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಒಳ್ಳೆಯ ಪ್ಲಾನ್ ರೂಪಿಸಿದೆ. 
ರಾಜ್ಯದ KSRTC ಬಸ್ ಗಳಲ್ಲಿ ಶೀಘ್ರವೇ UPI ಜಾರಿಗೆ ಬರಲಿದೆ. ಇದರಿಂದ ಕಂಡಕ್ಟರ್ ಗಳು ಹಾಗೂ ಪ್ರಯಾಣಿಕರು ಚಿಲ್ಲರೆಗಾಗಿ ವಾಗ್ವಾದ ನಡೆಸುವ ಸಮಸ್ಯೆ ಬಗೆಹರಿಯಲಿದೆ.

                   ಹೌದು ಚಿಲ್ಲರೆ ಸಮಸ್ಯೆ ನಿವಾರಿಸುವ ದೆಸೆಯಲ್ಲಿ ಏಕೀಕೃತ ಪಾವತಿ ವ್ಯವಸ್ಥೆ (UPI) ಜಾರಿಗೆ ತರಲು ಕೆಎಸ್ ಆರ್ ಟಿ ಸಿ ನಿರ್ಧರಿಸಿದೆ. ಹಾಗಾಗಿ ಪ್ರಯಾಣಿಕರು ಇನ್ನು ಮುಂದೆ ಪೆಟಿಎಂ, ಫೋನ್ ಪೇ, ಗೂಗಲ್ ಪೆ ಮೂಲಕ ಹಣ ಪಾವತಿಸಿ, ಟಿಕೆಟ್ ಪಡೆಯಬೇಕು., ನಗದು ರಹಿತ ಪಾವತಿ ಮೂಲಕ ಗ್ರಾಹಕರು ಹಾಗು ಸಾರಿಗೆ ಸೈಬ್ಬಂಧಿಗೆ ಅನುಕೂಲ ಕಲ್ಪಿಸುವುದು ಇದರ ಉದ್ದೇಶವಾಗಿದೆ. 


whatss

ಪ್ರಾಯೋಗಿಕವಾಗಿ ಜಾರಿ..............!

ಕೆಲ ಆಯ್ದ ಬಸ್ ಗಳಲ್ಲಿ ಮಾತ್ರ ಪ್ರಯೋಗಿಕವಾಗಿ UPI ಪೇಮೆಂಟ್ ವ್ಯವಸ್ಥೆ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಕೆಎಸ್ ಆರ್ ಟಿ ಸಿಯ ಎಲ್ಲಾ ಬಸ್ ಗಳಲ್ಲಿ ಮೊಬೈಲ್ ಮೂಲಕ ನೇರ ಬ್ಯಾಂಕ್ ಖಾತೆಯಿಂದ ಕೆಎಸ್ ಆರ್ ಟಿ ಸಿ ಬ್ಯಾಂಕ್ ಖಾತೆಗೆ ಗ್ರಾಹಕರ ಹಣ ಪಾವತಿಯಾಗಲಿದೆ ಎಂದು ತಿಳಿದುಬಂದಿದೆ.

ಕೆಎಸ್ ಆರ್ ಟಿ ಸಿ ಬಸ್ ಗಳಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗುತ್ತದೆ. ಆಗ ಗ್ರಾಹಕರು ಪೆಟಿಎಂ, ಫೋನ್ ಪೇ, ಗೂಗಲ್ ಪೆ ಸೇರಿ ಯಾವುದೇ ಆನ್ಲೈನ್ ಅಪ್ಲಿಕೇಶನ್ ಗಳ ಮೂಲಕ ಹಣವನ್ನು ಪಾವತಿಸಿ ಟಿಕೆಟ್ ಖರೀದಿಸಬಹುದಾಗಿದೆ. ಕೆಎಸ್ ಆರ್ ಟಿ ಸಿ ನಿರ್ಧಾರಗಳನ್ನು ಕಂಡಕ್ಟರ್ ಹಾಗೂ ಪ್ರಯಾಣಿಕರು ಸ್ವೀಕರಿಸಿದ್ದಾರೆ. 

   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು