ನಮಸ್ಕಾರ ಸ್ನೇಹಿತರೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದೀರಾ? ಹಾಗಿದ್ರೆ ನಿಮ್ಮ ಅರ್ಜಿ ಸಲ್ಲಿಕೆ ಸ್ಥಿತಿ ಚೆಕ್ ಮಾಡುವುದು ಹೇಗೆ ಎಂಬುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನವನ್ನು "ಕಲಿಕಾ ಭಾಗ್ಯ" ಯೋಜನೆಯಡಿಯಲ್ಲಿ ಪ್ರತಿ ವರ್ಷವು ನೀಡಲಾಗುತ್ತದೆ. ಈ ಬಡ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ತುಂಬಾ ಸಹಾಯಕಾರಿಯಾಗಿದೆ.
ಅರ್ಜಿ ಸ್ಥಿತಿ ತಿಳಿಯಲು ಬೇಕಾಗುವ ಅಗತ್ಯ ದಾಖಲೆಗಳು:
ನೀವು ಈ ಹಿಂದೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಾಗ ನೀಡಲಾಗಿದ್ದ ಮೊಬೈಲ್ ಸಂಖ್ಯೆಯೇ ಬೇಕು. ಒಂದು ವೇಳೆ ನೀವು ಬೇರೆ ಮೊಬೈಲ್ ಸಂಖ್ಯೆ ಹಾಕಿ ಸ್ಥಿತಿ ಪರಿಶೀಲನೆ ಮಾಡಲು ಮುಂದಾದರೆ ನೀವು ಸ್ಟೇಟಸ್ ಚೆಕ್ ಮಾಡಲು ಸಾಧ್ಯವೇ ಇಲ್ಲ.
ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ನಿಮಗೆ 'ಸಕಾಲ ಸ್ವೀಕೃತಿ' ನೀಡಲಾಗಿರುತ್ತದೆ ಅಲ್ಲಿ ನಿಮಗೆ ಸಕಾಲ ಸಂಖ್ಯೆಯನ್ನು ನೀಡಲಾಗಿರುತ್ತದೆ. ಅದು ತುಂಬಾ ಮುಖ್ಯವಾದದ್ದು.
ಒಂದುವೇಳೆ ಸಕಾಲ ಸಂಖ್ಯೆ ನಿಮಗೆ ತಿಳಿದಿಲ್ಲವೆಂದರೆ, ಅಲ್ಲಿ ನೀವು ಯಾವ ತಿಂಗಳಲ್ಲಿ From Date ಮತ್ತು To Date ಅರ್ಜಿ ಸಲ್ಲಿಸಿದ್ದೀರಿ ಎಂಬುದನ್ನು ಆಯ್ಕೆ ಮಾಡಿ. ಆ ತಿಂಗಳಲ್ಲಿ ಅರ್ಜಿ ಸಲ್ಲಿಸಿ ಅರ್ಜಿಗಳು ಅಲ್ಲಿ ತೋರಿಸುತ್ತದೆ.
ಅರ್ಜಿ ಸ್ಥಿತಿ ತಿಳಿಯುವ ವಿಧಾನ :
1. ಮೊದಲಿಗೆ ನೀವು ಗೂಗಲ್ ನಲ್ಲಿ ಸೇವಾ ಸಿಂಧು ಪ್ಲಸ್ ಅಂತ ಸರ್ಚ್ ಮಾಡಿ.
ಅಲ್ಲಿ ಮೊದಲು ಬರುವ ಸರ್ಕಾರದ ಅಧಿಕೃತ ವೆಬ್ ಸೈಟ್ ಕ್ಲಿಕ್ ಮಾಡಿ.
2. ನಂತರ ಅಲ್ಲಿ ನೀವು Apply for Services ನಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ಹಾಕಿ ಮತ್ತು ಕ್ಯಾಪ್ಚ್ಯಾ ಸರಿಯಾಗಿ ಭರ್ತಿ ಮಾಡಿ.
3. ನಂತರ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಎಡ ಭಾಗದಲ್ಲಿ menu ಮೇಲೆ ಕ್ಲಿಕ್ ಮಾಡಿ ನಂತರ View Status of Application ಮೇಲೆ ಕ್ಲಿಕ್ ಮಾಡಿ. ಅದರಲ್ಲಿ View Status ಮೇಲೆ ಕ್ಲಿಕ್ ಮಾಡಿ.
4. ಇವಾಗ ಅಲ್ಲಿ ನೀವು ಈ ಹಿಂದೆ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ನಿಮಗೆ ಸಕಾಲ ಸಂಖ್ಯೆ (KB010S230) ನೀಡಲಾಗಿರುತ್ತದೆ. ಆ ಸಂಖ್ಯೆಯನ್ನು ಭರ್ತಿ ಮಾಡಿ. ನಂತರ Get Data ಮೇಲೆ ಕ್ಲಿಕ್ ಮಾಡಿ.
5. ಕೊನೆಗೆ ನೀವು ಸಲ್ಲಿಸಿದ ಅರ್ಜಿ ಸ್ಥಿತಿ ಬಗ್ಗೆ ಸಂಪೂರ್ಣವಾಗಿ ನೀಡಲಾಗಿರುತ್ತದೆ.
Tags
Scholarship
ಪ್ರವೀಣ
ಪ್ರತ್ಯುತ್ತರಅಳಿಸಿ