ಸರ್ಕಾರದ ಬಿಗ್ ಅಪ್ಡೇಟ್ !! ಕರೆಂಟ್ ಬಿಲ್ ಜೀರೋ ಬಂದಿದ್ರೂ ಮುಂದಿನ ತಿಂಗಳು ಇಂತವರು ಬಿಲ್ ಕಟ್ಟಲೇಬೇಕು:

ಸರ್ಕಾರದ ಬಿಗ್ ಅಪ್ಡೇಟ್ !!  ಕರೆಂಟ್ ಬಿಲ್ ಜೀರೋ ಬಂದಿದ್ರೂ ಮುಂದಿನ ತಿಂಗಳು ಇಂತವರು ಬಿಲ್ ಕಟ್ಟಲೇಬೇಕು:


            

   
ರಾಜ್ಯ ಸರ್ಕಾರ ಅಪ್ಡೇಟ್ ಒಂದನ್ನು ನೀಡಿದ್ದು ಈ ತಿಂಗಳಿನಲ್ಲಿ ಜೀರೋ ವಿದ್ಯುತ್ ಪಡೆದುಕೊಂಡವರು ಮುಂದಿನ ತಿಂಗಳಿನಲ್ಲಿ ಕರೆಂಟ್ ಬಿಲ್ ಕಟ್ಟ ಬೇಕಾಗುವ ಪರಿಸ್ಥಿತಿ ಬರಬಹುದು. ಕಾರಣ ಏನು ಗೊತ್ತಾ.? 

             ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಗಳಲ್ಲಿ ಒಂದು ಗೃಹಜ್ಯೋತಿ ಯೋಜನೆ ಜುಲೈ ನಲ್ಲಿಯೇ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು 200 ಯೂನಿಟ್ ಗಿಂತಲೂ ಕಡಿಮೆ ವಿದ್ಯುತ್ ಯಾರು ಬಳಸುತ್ತಾರೋ ಅವರಿಗೆ ವಿದ್ಯುತ್ ಬಿಲ್ ಕಟ್ಟುವ ಹಾಗೆ ಇಲ್ಲ. ಅಂದ್ರೆ ಸಂಪೂರ್ಣ ಉಚಿತವಾಗಿ ವಿದ್ಯುತ್ ಬಳಸಬಹುದು, ಇಲ್ಲಿ ಮುಖ್ಯವಾಗಿರುವ ನಿಯಮ ಅಂದರೆ 200 ಯೂನಿಟ್ ಗಿಂತಲೂ ಹೆಚ್ಚಿಗೆ ವಿದ್ಯುತ್ ಬಳಸುವಂತಿಲ್ಲ, ಈಗಾಗಲೇ ರಾಜ್ಯದಲ್ಲಿ ಲಕ್ಷಾಂತರ ಜನ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ಸರ್ಕಾರದ ಈ ಹೊಸ ನಿಯಮದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು, ಮುಖ್ಯವಾಗಿ ಒಂದು ವರ್ಷದ ಸರಾಸರಿ ಬಳಸಲ್ಪಟ್ಟ ವಿದ್ಯುತ್ ಆಧಾರದ ಮೇಲೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡಲಾಗುತ್ತದೆ ಅಂದರೆ ಸರಾಸರಿ 200 ಯೂನಿಟ್ ಗಿಂತಲೂ ಕಡಿಮೆ ಬರಬೇಕು.

ಆದರೆ ಈ ತಿಂಗಳು ನಿಮಗೆ ಫ್ರೀ ವಿದ್ಯುತ್ ಬಂದಿದೆ ಎಂದುಕೊಳ್ಳಿ. ಹೀಗೆ ಬಂದಿರುವ ಕಾರಣಕ್ಕೆ ನೀವು ಮುಂದಿನ ತಿಂಗಳು ಯಥೇಚ್ಛವಾಗಿ ವಿದ್ಯುತ್ ಬಳಸುವಂತಿಲ್ಲ. ಯಾಕಂದ್ರೆ ಪ್ರತಿ ಬಿಲ್ ನಲ್ಲಿಯೂ ಈ ಬಾರಿ ನೀವು ಎಷ್ಟು ಯೂನಿಟ್ ವಿದ್ಯುತ್ ಬಳಸಿದ್ದೀರಿ ಎನ್ನುವುದನ್ನು ಮುದ್ರಿಸಲಾಗುತ್ತದೆ.

whatss

ಉದಾಹರಣೆಗೆ ನೀವು ಈ ಬಾರಿ 150 ಯೂನಿಟ್ ವಿದ್ಯುತ್ ಬಳಸಿದ್ದಿ ಎಂದುಕೊಳ್ಳಿ ಅದೇ ಮುಂದಿನ ತಿಂಗಳು ನೀವು ಇದೆ ಲಿಮಿಟ್ ನಲ್ಲಿ ವಿದ್ಯುತ್ ಬಳಸಬೇಕು. ಇದಕ್ಕಿಂತ ಹೆಚ್ಚಿಗೆ ವಿದ್ಯುತ್ ಬಳಸಿದರೆ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದರು ಕೂಡ ಕಳೆದ ತಿಂಗಳು ಬಂದ  ವಿದ್ಯುತ್ ಮಿತಿಯ ಆಧಾರದ ಮೇಲೆ ವಿದ್ಯುತ್ ಬಿಲ್ ಕಟ್ಟ ಬೇಕಾಗುತ್ತದೆ.



ಸರಳವಾಗಿ ಹೇಳುವುದಾದರೆ ನಿಮ್ಮ ಈ ತಿಂಗಳ ಯೂನಿಟ್ ಎಷ್ಟು ಮೊತ್ತ ಹೊಂದಿರುತ್ತದೆಯೋ, ಮುಂದಿನ ತಿಂಗಳು ಅದಕ್ಕಿಂತ ಕಡಿಮೆ ಇದ್ದರೆ ತೊಂದರೆ ಇಲ್ಲ ಆದರೆ ಅದಕ್ಕಿಂತ ಹೆಚ್ಚಿದ್ದರೆ ಆಗ ನೀವು ವಿದ್ಯುತ್ ಬಿಲ್ ಬರಿಸಬೇಕಾಗುತ್ತದೆ. ನೀವು ಒಂದೇ ತರನಾದ ಯೂನಿಟ್ ಮಿತಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ.

ಈ ಹಿಂದೆಯೂ ಸರ್ಕಾರ ಇದರ ಬಗ್ಗೆ ಮಾಹಿತಿಯನ್ನು ನೀಡಿತ್ತು. ಆದರೆ ಈಗ ಮತ್ತೆ ಇದರ ಬಗ್ಗೆ ಚರ್ಚೆ ನಡೆದಿದ್ದು ವಿದ್ಯುತ್ ಬಿಲ್ ಜೀರೋ ಮಾಡಿಕೊಳ್ಳಲು ಯೂನಿಟ್ ಮೊತ್ತವನ್ನು ಕಾಯ್ದುಕೊಳ್ಳುವುದು ಗ್ರಾಹಕರಿಗೆ ದೊಡ್ಡ ಸವಾಲಾಗಿದೆ.

ಹಾಗಾಗಿ ವಿದ್ಯುತ್ ಬಿಲ್ ಜೀರೋ ಬರಬೇಕು ಅಂದರೆ ನೀವು ಬಳಸುವ ಯೂನಿಟ್ ಕಡಿಮೆ ಇರಬೇಕು ಎನ್ನುವುದು ನೆನಪಿರಲಿ. ಇಲ್ಲವಾದರೆ ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.

   






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು