ಪದವಿ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ರಿಲಾಯನ್ಸ್ ಪೌಂಡೇಶನ್ ಸ್ಕಾಲರ್ ಶಿಪ್: ಅರ್ಜಿ ಆಹ್ವಾನ....!

 ಪದವಿ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ರಿಲಾಯನ್ಸ್ ಪೌಂಡೇಶನ್ ಸ್ಕಾಲರ್ ಶಿಪ್: ಅರ್ಜಿ ಆಹ್ವಾನ....!

             

   

ರಿಲಾಯನ್ಸ್ ಪೌಂಡೇಶನ್ ಸ್ಕಾಲರ್ ಶಿಪ್ ಗೆ ಅಂಡರ್ ಗ್ರಾಜುಯೇಟ್ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರತಿ ವಿದ್ಯಾರ್ಥಿಗಳಿಗೆ 2 ಲಕ್ಷ ರೂ. ಸ್ಕಾಲರ್ ಶಿಪ್ ನೀಡಿ, ಅಶ್ಯಯನಕ್ಕೆ ಸಂಸ್ಥೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದೆ.

ರಿಲಾಯನ್ಸ್ ಕಂಪನಿಯು ಕಳೆದ 25 ವರ್ಷಗಳಿಂದ ಕೊಡುಮಾಡುತ್ತಿರುವ ರಿಲಾಯನ್ಸ್ ಪೌಂಡೇಶನ್ ಸ್ಕಾಲರ್ಶಿಪ್ ಗೆ ಇದೀಗ ಪ್ರಸಕ್ತ 2023-24 ನೇ ಸಾಲಿನ ಅಂಡರ್ ಗ್ರಾಜುಯೇಟ್ ಪ್ರೋಗ್ರಾಮ್ ಗಳಿಗೆ ಪ್ರವೇಶ ಪಡೆದಿರುವರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಮಾಜದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಹತೆ ಕುರಿತು ಹೆಚ್ಚಿನ ಮಾಹಿತಿ ಕೆಳಗಿನಂತಿದೆ.

ಯಾರು ಅರ್ಜಿ ಸಲ್ಲಿಸುವಂತಿಲ್ಲ ?

👉 ಪದವಿಯನ್ನು ಎರಡನೇ ವರ್ಷದಲ್ಲಿ / 3 ನೇ ವರ್ಷದಲ್ಲಿ ಓದುತ್ತಿರುವವರು.
👉 ಆನ್ ಲೈನ್ ಮೂಲಕ, ದೂರ ಶಿಕ್ಶಣದ ಮೂಲಕ, ಅಥವಾ ಪೂರ್ಣಾವಧಿ ಹೊರತುಪಡಿಸಿ ಇತರೆ ಯಾವುದೇ ಮಾರ್ಗದಲ್ಲಿ ಡಿಗ್ರಿ ಓದುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ.
👉 ಎಸ್ ಎಸ್ ಎಲ್ ಸಿ ನಂತರ ಡಿಪ್ಲೊಮಾ ಓದಿರುವವರು.

ರಿಲಾಯನ್ಸ್ ಪೌಂಡೇಶನ್ ಸ್ಕಾಲರ್ಶಿಪ್ ಅರ್ಜಿಗೆ ಅರ್ಹತೆಗಳು..

👉 ಭಾರತೀಯ ವಿದ್ಯಾರ್ಥಿಗಳಾಗಿರಬೇಕು.
👉ಶೇಕಡಾ 60 ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಪಾಸ್ ಮಾಡಿ, ರೆಗ್ಯುಲರ್ ತರಗತಿ ಡಿಗ್ರಿ ಕೋರ್ಸ್ ಗಳಿಗೆ ಪ್ರವೇಶ ಪಡೆದಿರಬೇಕು.
👉ವರ್ಷಕ 2.5 ಲಕ್ಷಕ್ಕಿಂತ ಕಡಿಮೆ ಕುಟುಂಬ ಆದಾಯ ಹೊಂದಿರುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಆಯ್ಕೆ ವಿಧಾನ :

ಆಪ್ಟಿಟ್ಯೂಡ್ ಟೆಸ್ಟ್ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅಕ್ಟೊಬರ್ 15,2023

ರಿಲಯನ್ಸ್ ಪೌಂಡೇಶನ್ ಸ್ಕಾಲರ್ಶಿಪ್ : ಸಂಪೂರ್ಣ ಪದವಿ ಮುಗಿಯುವವರೆಗೆ ರೂ. 2,00,000 ನೀಡಲಾಗುತ್ತದೆ.


whatss

ಅರ್ಜಿ ಸಲ್ಲಿಸುವುದು ಹೇಗೆ ?

➡ Apply Now ಲಿಂಕ್ ಕ್ಲಿಕ್ ಮಾಡಿ.
➡ ಓಪನ್ ಆದ ಪೇಜ್ ನಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ನೀಡಿ.
➡ ಎಲ್ಲ ಮಾಹಿತಿ ನೀಡಿದ ನಂತರ ' Submit ' ಎಂದಿರುವಲ್ಲಿ ಕ್ಲಿಕ್ ಮಾಡಿ.
➡ ಅರ್ಜಿ ಸಲ್ಲಿಕೆಯಾಗುತ್ತದೆ.



ರಿಲಾಯನ್ಸ್ ಪೌಂಡೇಶನ್ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ಆಪ್ಟಿಟ್ಯೂಡ್ ಟೆಸ್ಟ್ ಅನ್ನು ಪಾಸ್ ಮಾಡಬೇಕಿರುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :

👉 ಪಾಸ್ ಪೋರ್ಟ್ ಅಳತೆ ಭಾವಚಿತ್ರ 

👉 ವಿಳಾಸದ ಗುರುತಿನ ಚೀಟಿ 

👉 ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಅಂಕಪಟ್ಟಿ.

👉 ಪ್ರಸ್ತುತ ಪ್ರಥಮ ವರ್ಷದ ಡಿಗ್ರಿಗೆ ಪ್ರವೇಶ ಪಡೆದ ದಾಖಲೆ 

👉 ಆದಾಯ ಪ್ರಮಾಣಪತ್ರ 

👉 ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರ 


              

   






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು