ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಇಂದು ಕೊನೆಯ ದಿನವಾಗಿದೆ. ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ಹೊಂದಿರುವವರು ಕಡ್ಡಾಯವಾಗಿ ತಮ್ಮ ಮಾಹಿತಿಯನ್ನು ಅಪ್ಡೇಟ್ ಮಾಡಬೇಕಿದೆ. ಆಧಾರ್ ಪರಿಷ್ಕರಣೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಆಧಾರ್ ಕಾರ್ಡ್ ಅಪ್ಡೇಟ್ ಗೆ ಸೆಪ್ಟೆಂಬರ್ 14 ಕೊನೆಯ ದಿನ. ಹತ್ತು ವರ್ಷ ಹಿಂದಿನ ಆಧಾರ್ ಕಾರ್ಡ್ ಹೊಂದಿರುವವರು ಆನ್ಲೈನ್ ಅಥವಾ ಆಫ್ ಲೈನ್ ವಿಧಾನಗಳ ಮೂಲಕ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದಾಗಿತ್ತು. ಆದರೆ ಇಂದಿನಿಂದ ಅಪ್ಡೇಟ್ ಮಾಡುವಿರಾದರೆ ಶುಲ್ಕ ಪಾವತಿಸಿ ಅಪ್ಡೇಟ್ ಮಾಡಬೇಕಿದೆ. ಹತ್ತು ವರ್ಷಕ್ಕೊಮ್ಮೆ ಎಲ್ಲರು ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು. ಎಂದಿದೆ ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಸೂಚನೆ.
ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಗೆ ಅವಕಾಶ ;
ಯಾರು ಆಧಾರ್ ಕಾರ್ಡ್ ಪಡೆದು ಹತ್ತು ವರ್ಷವಾಗಿದೆಯೋ ಅವರು ಕಡ್ಡಾಯವಾಗಿ ಇದೆ ಸೆಪ್ಟೆಂಬರ್ 14 ರ ಮೊದಲು ಪರಿಷ್ಕರಿಸಬೇಕು. ಈ ರೀತಿ ಅಪ್ಡೇಟ್ ಮಾಡಲು ಹಲವು ತಿಂಗಳ ಹಿಂದೆಯೇ ಕೊನೆಯ ದಿನವಾಗಿತ್ತು. ಆದರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಈ ರೀತಿ ಉಚಿತವಾಗಿ ಅಪ್ಡೇಟ್ ಮಾಡುವ ಅವಕಾಶವನ್ನು ಸೆಪ್ಟೆಂಬರ್ 14 ರ ವರೆಗೆ ವಿಸ್ತರಿಸಿತ್ತು. ಇನ್ನು ಕೊನೆಯ ದಿನವಾಗಿದ್ದು, ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಅವಕಾಶವನ್ನು ಬಳಸಿಕೊಳ್ಳಬಹುದು.
ನನ್ನ ಆಧಾರ್ ನಲ್ಲಿ ಏನೂ ಬದಲಾವಣೆ ಇಲ್ಲ, ನಾನೂ ಅಪ್ಡೇಟ್ ಮಾಡಬೇಕೆ?
ಹತ್ತು ವರ್ಷಗಳಿಗೊಮ್ಮೆ ಬಹುತೇಕ ವಿಳಾಸ, ಫೋನ್ ನಂಬರ್ ಇತ್ಯಾದಿಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಹತ್ತು ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕೆಂದು ತಿಳಿಸಲಾಗಿದೆ. ಆದರೆ, ಹತ್ತು ವರ್ಷ ಕಳೆದರೂ ವಿಳಾಸ, ಫೋನ್ ನಂಬರ್ ಬದಲಾಯಿಸದೆ ಇರುವ ಸಾಕಷ್ಟು ಜನರು ಇದ್ದಾರೆ. ಇವರು ಆಧಾರ್ ಅಪ್ಡೇಟ್ ಮಾಡುವ ಅಗತ್ಯವಿದೆಯೇ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಉತ್ತರ ಹೌದು ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಮಾಹಿತಿಯನ್ನು ಮರುದೃಢೀಕರಣ ಮಾಡಿಕೊಳ್ಳುವ ಅಗತ್ಯವಿದೆ.
ಆಧಾರ್ ಕಾರ್ಡ್ ಪಡೆದು 10 ವರ್ಷ ಕಳೆದಿದ್ದರೆ ಇಲ್ಲಿಯವರೆಗೆ ಅಪ್ಡೇಟ್ ಮಾಡದೇ ಇದ್ದಾರೆ ನೀವು ನಿಮ್ಮ ಗುರುತಿನ ದಾಖಲೆ ಮತ್ತು ವಿಳಾಸದ ದಾಖಲೆ ನೀಡಿ ಮರು ದೃಢೀಕರಣ ಮಾಡಿಕೊಳ್ಳಲೇಬೇಕು.ಈ ಮೂಲಕ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯನ್ನು ಮರು ದೃಢೀಕರಣ ಮಾಡಿಕೊಳ್ಳಬೇಕು. ಸೆಪ್ಟೆಂಬರ್ 14 ರ ಬಳಿಕ ಆನ್ಲೈನ್ ಅಪ್ ಲೋಡಿಂಗ್ ಶುಲ್ಕ 25 ರೂ ಮತ್ತು ಆಫ್ಲೈನ್ ಶುಲ್ಕ 50/- ರು ಇರುತ್ತದೆ. ಎಂಡ್ UIDIA ಈ ಹಿಂದೆಯೇ ಸ್ಪಷ್ಟಪಡಿಸಿದೆ.
ಆಧಾರ್ ಅಪ್ಡೇಟ್ ಮಾಡಲು ಸೂಚನೆ :
ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ನೀವು myaadhaar.uidai.gov.in ವೆಬ್ಸೈಟ್ ಗೆ ಭೇಟಿ ನೀಡಿ. ಅಲ್ಲಿ ಇರುವ ಸೂಚನೆ ಈ ಮುಂದಿನಂತೆ ಇದೆ. ನಿಮ್ಮ ಆಧಾರ್ ಡೇಟಾ ಬೇಸ್ ಮಾಹಿತಿ ಪರಿಷ್ಕರಣೆ ಮಾಡಲು ಇತ್ತೀಚಿನ ನಿಮ್ಮ ಗುರುತಿನ ಪತ್ರ, ವಿಳಾಸ ಮಾಹಿತಿ ನೀಡಬೇಕು, ನೀವು ನೀಡಿರುವ ದಾಖಲೆಗಳು ನಿಮ್ಮ ಆಧಾರ್ ನಲ್ಲಿರುವ ವಿವರಕ್ಕೆ ಹೊಂದಿಕೆಯಾಗಬೇಕು. ಇದರಿಂದ ಆಧಾರ್ ಡೇಟಾಬೇಸ್ ನಿಮ್ಮ ಕುರಿತು ಸರಿಯಾದ ಮಾಹಿತಿ ಹೊಂದಿರಲು ಸಾಧ್ಯವಾಗುತ್ತದೆ.
Tags
News