ಖಾತೆಗೆ ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ವಾ? ಹಾಗಾದ್ರೆ ನಿಮಗಿದೆ ಮುಖ್ಯ ಮಾಹಿತಿ ....... ತಪ್ಪದೆ ತಿಳಿಯಿರಿ!!

ಖಾತೆಗೆ ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ವಾ? ಹಾಗಾದ್ರೆ ನಿಮಗಿದೆ ಮುಖ್ಯ ಮಾಹಿತಿ ....... ತಪ್ಪದೆ ತಿಳಿಯಿರಿ!!



 


                 ರಾಜ್ಯ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿಯ ಯೋಜನೆ ಗೃಹಲಕ್ಷ್ಮಿ. ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ಹಣ ಘೋಷಿಸಿದಂತೆ ಈಗಾಗಲೇ ಕಳೆದುಕೊಂಡು ವಾರದಿಂದ ಹಣ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮಾಡಲಾಗುತ್ತಿದೆ.
ರಾಜ್ಯಾದ್ಯಂತ ಇದರ ಪ್ರಮಾಣ ಶೇ 45 ರಷ್ಟು  ಇದ್ದಾರೆ ರಾಜಧಾನಿ ಬೆಂಗಳೂರಿನಲ್ಲಿ ಇದರ ಶೇಕಡಾ 20 ರಷ್ಟು ತಲುಪಿಲ್ಲ. ಬೆಂಗಳೂರು ನಗರದಲ್ಲಿ 5,27,768 ಅರ್ಜಿಯಲ್ಲಿ 69,642 ಮನೆಯೊಡತಿಗೆ ಎರಡು ಸಾವಿರ ಹಣ ಸಂದಾಯವಾಗಿದೆ.
ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1,22,917 ಅರ್ಜಿಯಲ್ಲಿ 94,338 ಮನೆಯೊಡತಿಗೆ ಹಣ ಸಂದಾಯ ಮಾಡಲಾಗಿದೆ. ಇನ್ನು ಹತ್ತು ದಿನದಲ್ಲಿ ಉಳಿದವರಿಗೆ ಹಣ ಜಮೆ ಆಗಲಿದೆ. ಇದರಲ್ಲಿ ಕ್ರಮವಾಗಿ ಬೆಂಗಳೂರು ನಗರ 380 ಗ್ರಾಮಾಂತರ ಜಿಲ್ಲೆಯ 478, ಮನೆಯೊಡತಿಗೆ ಬ್ಯಾಂಕ್ ಖಾತೆಗೆ ಕೆವೈಸಿ, ಆಧಾರ್ ಲಿಂಕ್ ಆಗದ ಕಾರಣ ಹಣ ಸಂದಾಯ ಮಾಡಲಾಗಿಲ್ಲ.



ನಿಮ್ಮ ಬ್ಯಾಂಕ್ ಖಾತೆ ಗೃಹಲಕ್ಷ್ಮಿ ಹಣ ಬಾರದೆ ಇರೋದು ಎರಡು ಸಾವಿರ ಹಣ ಜಮೆ ಆಗದೆ ಇರಲು ಕಾರಣವೇನು ?
ಡಿಬಿಟಿ ಸ್ಟೇಟಸ್ ಚೆಕ್ ಮಾಡೋದು ಹೇಗೆ ?
ಎಂಬ ಪ್ರಶ್ನೆಗೆ ಕರ್ನಾಟಕ ಸರ್ಕಾರ ಆಪ್ ಮೂಲಕ ಡಿಬಿಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಅವಕಾಶ ಮಾಡಿದೆ.

whatss

ನಿಮ್ಮ ಮೊಬೈಲ್ ನಲ್ಲಿ ಆಪ್ ನಲ್ಲಿ ಡಿಬಿಟಿ ಕರ್ನಾಟಕ ಆಪ್ ಡೌನ್ ಲೋಡ್ ಮಾಡಿ, ನಂತರ ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಕಿದರೆ ಒಟಿಪಿ ಮೂಲಕ ಸ್ಟೇಟಸ್ ಚೆಕ್ ಮಾಡಬಹುದು. ಅನ್ನಭಾಗ್ಯ ಡಿಬಿಟಿ ಚೆಕ್ ಮಾಡಲು ರೇಷನ್ ಕಾರ್ಡ್ ನಂಬರ್ ಹಾಕಬೇಕು.


ಗೃಹಲಕ್ಷ್ಮಿ ಪರಿಶೀಲಿಸಲು ಅರ್ಜಿ ಸಂಖ್ಯೆ ಹಾಕಿದರೆ ಸ್ಟೇಟಸ್ ಸಿಗಲಿದೆ. ಅನ್ನಭಾಗ್ಯ ಡಿಬಿಟಿ ಹಣ ಪರಿಶೀಲಿಸಲು ಈ ಆಪ್ ಬಳಕೆ ಆಗಲಿದೆ. ರಾಜ್ಯದಲ್ಲಿ ಇದುವರೆಗೆ 1.13 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳ ನೋಂದಣಿ ಆಗಿದೆ. ಇದರಲ್ಲಿ 44.52 ಲಕ್ಷ ಫಲಾನುಭವಿಗಳಿಗೆ ಎರಡು ಸಾವಿರ ಹಣ ಜಮೆ ಆಗಿದೆ. 

                    69 ಲಕ್ಷ ಫಲಾನುಭವಿಗೆ ಹಣ ಜಮೆ ಆಗಬೇಕಿದೆ. ಇದರಲ್ಲಿ 25 ಸಾವಿರ ಫಲಾನುಭವಿಗೆ ಜಮೆ ಆಗೋದು ಡೌಟ್!!! ಇನ್ನು ಹತ್ತು ದಿನದಲ್ಲಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಯ ಫಲಾನುಭವಿಗೆ ಜಮೆ ಆಗಲಿದೆ.


  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು