ವಾಟ್ಸಪ್ ಸ್ಟೇಟಸ್ ಇನ್ಮುಂದೆ 24 ಗಂಟೆ ಮಾತ್ರ ಅಲ್ಲ: ವಾಟ್ಸಾಪ್ ನಿಂದ ಬೆರಗುಗೊಳಿಸುವ ಅಪಡೇಟ್ !
ವಾಟ್ಸಾಪ್ ಅಪಡೇಟ್ ಗಳ ಬಗ್ಗೆ ಸದಾ ಮಾಹಿತಿಯನ್ನು ತಿಳಿಸುವ WABetalnfo ನ ಪ್ರಕಾರ ಕಂಪನಿಯು ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಎರಡು ವಾರಗಳವರೆಗೆ ಲೈವ್ ಆಗಿ ಇರಿಸಲು ಅನುಮತಿಸುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಬಳಕೆದಾರರು ತಮ್ಮ ಸ್ಟೇಟಸ್ ಗೋಚರಿಸುವ ಅವಧಿಯನ್ನು ನಿಗದಿ ಪಡಿಸುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ ಎನ್ನಲಾಗಿದೆ.
2 ಬಿಲಿಯನ್ ಜಾಗತಿಕ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ದಿನಕ್ಕೊಂದು ನೂತನ ಫಿಚರ್ ಗಳನ್ನು ಘೋಷಿಸುತ್ತಿದೆ. ನೂತನ ಅಪಡೇಟ್ ಗಳನ್ನು ನೀಡಿ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗುತ್ತಿರುವ ವಾಟ್ಸಾಪ್ ಇದೀಗ ಬೆರಗುಗೊಳಿಸುವ ಅಪಡೇಟ್ ನೀಡಲು ಮುಂದಾಗಿದೆ. ವಾಟ್ಸಾಪ್ ನಲ್ಲಿ ಪ್ರಸ್ತುತ ಬಳಕೆದಾರರು ತಮ್ಮ ಸ್ಟೇಟಸ್ ಅನ್ನು 24 ಗಂಟೆಗಳವರೆಗೆ ಇರುವ ರೀತಿಯಲ್ಲಿ ಪೋಸ್ಟ್ ಮಾಡಬಹುದು. ಆದರೆ ಇತ್ತೀಚಿನ ವರದಿಯ ಪ್ರಕಾರ ಈ 24 ಗಂಟೆಗಳ ಅವಧಿಯನ್ನು ವಾಟ್ಸಾಪ್ ಯಾಪ್ ವಿಸ್ತರಿಸಲಿದೆಯಂತೆ.
ಮುಂಬರುವ ಅಪಡೇಟ್ ನಲ್ಲಿ ವಾಟ್ಸಾಪ್ ಬಳಕೆದಾರರಿಗೆ ಸ್ಟೇಟಸ್ ವಿಭಾಗದಲ್ಲಿ ನಾಲ್ಕು ಅವಧಿಯ ಆಯ್ಕೆಗಳನ್ನು ಒದಗಿಸುವ ನಿರೀಕ್ಷೆಯಿದೆ. ೨೪ ಗಂಟೆಗಳು, ೩ ದಿನಗಳು, ೧ ವಾರ ಮತ್ತು ೨ ವಾರಗಳು. ಇದು ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಎಷ್ಟು ಸಮಯದವರೆಗೆ ವೀಕ್ಷಿಸಲು ಲಭ್ಯವಾಗಬೇಕೆಂದು ಬಯಸುತ್ತಾರೆ ಎಂಬುದರ ಕುರಿತು ಆಗಿದೆ.
ವಾಟ್ಸಾಪ್ ನಲ್ಲಿ ಫಿಲ್ಟರ್ ಆಯ್ಕೆ :