ವಾರ್ಷಿಕ ರೂ.75,000 ವರೆಗೆ HDFC ಪರಿವರ್ತನಾ ಸ್ಕಾಲರ್ಶಿಪ್ : ಅರ್ಹತೆಗಳೇನು, ಅರ್ಜಿ ಸಲ್ಲಿಕೆ ಹೇಗೆ ಇಲ್ಲಿ ತಿಳಿಯಿರಿ :

 

ವಾರ್ಷಿಕ ರೂ.75,000 ವರೆಗೆ HDFC ಪರಿವರ್ತನಾ ಸ್ಕಾಲರ್ಶಿಪ್ : ಅರ್ಹತೆಗಳೇನು, ಅರ್ಜಿ ಸಲ್ಲಿಕೆ ಹೇಗೆ ಇಲ್ಲಿ ತಿಳಿಯಿರಿ :



ಬಡ ಕುಟುಂಬದ ಮಕ್ಕಳಿಗೆ, ವಿವಿಧ ಕಾರಣಗಳಿಂದ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವಂತ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರೆಸಲು ನೆರವು ನೀಡುವ ಸಲುವಾಗಿ ಎಚ್ ಡಿಎಫ್ ಸಿ ಬ್ಯಾಂಕ್ ಪರಿವರ್ತನಾ ಇ ಸಿಎಸ್ ಎಸ್ ಸ್ಕಾಲರ್ಶಿಪ್ ಪ್ರೋಗ್ರಾಮ್ ಜಾರಿಗೆ ತಂದಿದೆ. ಇದಕ್ಕೆ ಆಹ್ವಾನಿಸಿದೆ.


 

HDFC ಬ್ಯಾಂಕ್ ಪರಿವರ್ತನಾ ಇಸಿ ಎಸ್ ಎಸ್ ಪ್ರೋಗ್ರಾಮ್ 2023-24 HDFC ಬ್ಯಾಂಕ್ ನ ಒಂದು ಸ್ಕಾಲರ್ಶಿಪ್ ಪ್ರೋಗ್ರಾಮ್. ಇದರ ಪ್ರಮುಖ ಉದ್ದೇಶ ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಹಣಕಾಸು ತೊಂದರೆ ಇಂದ ಶಿಕ್ಷಣವನ್ನು ಅರ್ಧಕ್ಕೆ ಬಿಡುವವರನ್ನು ಸಹಾಯಧನ ನೀಡಿ ಪ್ರೋತ್ಸಾಹಿಸುವ ಸಹಾಯ ಮಾಡುವ ಉದ್ದೇಶ ಹೊಂದಿದೆ. ಈ ಸ್ಕಾಲರ್ಶಿಪ್ ಅನ್ನು 1 ನೇ ತರಗತಿಯಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಡಿಪ್ಲೋಮ, ಐಟಿಐ, ಪಾಲಿಟೆಕ್ನಿಕ್, ಯುಜಿ, ಪಿಜಿ ಓದುವವರಿಗೆ ನೀಡಲಾಗುತ್ತದೆ. ತಮ್ಮ ಶಿಕ್ಷಣಕ್ಕಾಗಿ ಹಣಕಾಸು ತೊಂದರೆ ಎದುರಿಸುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಯಾರಿಗೆ ಎಷ್ಟು ವಿದ್ಯಾರ್ಥಿವೇತನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ, ಅರ್ಜಿ ಸಲ್ಲಿಸವುದು ಹೇಗೆ, ಇತರೆ ಮಾಹಿತಿಗಳು ಕೆಳಗಿನಂತಿವೆ.

ಸ್ನಾತಕೋತ್ತರ ಪದವಿ ಓದುವವರಿಗೆ ಸ್ಕಾಲರ್ಶಿಪ್ :

ಅರ್ಹತೆಗಳು :

👉 ಎಂ ಎಸ್ಸಿ, ಎಂಎ, ಎಂಟೆಕ್, ಎಂಬಿಎ ಕೋರ್ಸ್ ಓದುತ್ತಿರಬೇಕು.
👉 ಪದವಿಯಲ್ಲಿ ಶೇಕಡಾ.55 ಅಂಕಗಳನ್ನು ಪಡೆದಿರಬೇಕು.
👉 ಕುಟುಂಬದ ವಾರ್ಷಿಕ ಆದಾಯ ರೂ. 2.5 ಲಕ್ಷ ನೀರಿರಬಾರದು.

 
ಸ್ಕಾಲರ್ಶಿಪ್ ಎಷ್ಟು ?

👉 ಎಂಎಸ್ಸಿ, ಎಂ ಎ ಕೋರ್ಸ್ ಓದುತ್ತಿರುವವರಿಗೆ ರೂ. 35,000.
👉 ವೃತ್ತಿಪರ ಕೋರ್ಸ್ ಗಳಾದ ಎಂ.ಟೆಕ್, ಎಂಬಿಎ ಕೋರ್ಸ್ ಓದುತ್ತಿರುವವರಿಗೆ ರೂ.75,000

ಶಾಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ :

ಅರ್ಹತೆಗಳೇನು ?

👉 1-12ನೇ ತರಗತಿ, ಐಟಿಐ, ಡಿಪ್ಲೋಮ ಇತರೆ ಪಾಲಿಟೆಕ್ಣಿಕ್ ಕೋರ್ಸ್ ಓದುತ್ತಿರಬೇಕು.
👉 ಅರ್ಜಿ ಸಲ್ಲಿಸುವವರು ತಮ್ಮ ಹಿಂದಿನ ಶಿಕ್ಷಣವನ್ನು ಕನಿಷ್ಠ 55 % ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
👉 ಕುಟುಂಬದ ವಾರ್ಷಿಕ ಆದಾಯ ರೂ.2.5 ಲಕ್ಷ ಮೀರಿರಬಾರದು.

ಸ್ಕಾಲರ್ಶಿಪ್ ಎಷ್ಟು ?

👉 1 ರಿಂದ 6 ನೇ ತರಗತಿವರೆಗಿನ ವಿದ್ಯಾರ್ಥಿಗಳಾಗಿದ್ದಲ್ಲಿ, ವಾರ್ಷಿಕ ರೂ.15,000
👉7 ರಿಂದ 12 ನೇ ತರಗತಿ ಹಾಗೂ ಡಿಪ್ಲೋಮ, ಐಟಿಐ,ಪಾಲಿಟೆಕ್ನಿಕ್ ವಿದ್ಯಾರ್ಥಿಗಳಾಗಿದ್ದಲ್ಲಿ ವಾರ್ಷಿಕ ರೂ.18,000.


whatss

ಪದವಿ ಕೋರ್ಸ್ ಓದುತ್ತಿರುವವರಿಗೆ ಸ್ಕಾಲರ್ಶಿಪ್ :

ಅರ್ಹತೆಗಳು :

👉 ವಿದ್ಯಾರ್ಥಿಗಳು ಕಡ್ಡಾಯವಾಗಿ ಪದವಿ ಕೋರ್ಸ್ ಗಳಾದ - ಬಿಕಾಂ, ಬಿಎಸ್ಸಿ, ಬಿ ಎ , ಬಿಸಿಎ, ಇತರೆ ವೃತ್ತಿಪರ ಕೋರ್ಸ್ ಗಳಾದ ಬಿಟೆಕ್, ಎಂಬಿಬಿಎಸ್, ಎಲ್ ಎಲ್ ಬಿ, ಬಿ.ಆರ್ಚ್, ನರ್ಸಿಂಗ್ ಓದುತ್ತಿರಬೇಕು.
👉 ಹಿಂದಿನ ಶಿಕ್ಷಣವನ್ನು ಕನಿಷ್ಠ ೫೫% ಅಂಕಗಳೊಂದಿಗೆ ಪಾಸ್ ಮಾಡಿರಬೇಕು. 
ವಾರ್ಷಿಕ ಕುಟುಂಬದ ಆದಾಯ ರೂ.೨.೫ ಲಕ್ಷ ಮೀರಿರಬಾರದು.

ಸ್ಕಾಲರ್ಶಿಪ್ ಎಷ್ಟು ?

ವೃತ್ತಿಪರ ಪದವಿ ಕೋರ್ಸ್ ಓದುತ್ತಿರುವವರಿಗೆ ವಾರ್ಷಿಕ ರೂ.50,000 
ಇತರೆ ಸಾಮಾನ್ಯ ಪದವಿ ಕೋರ್ಸ್ ಗಳನ್ನು ಓದುತ್ತಿರುವವರಿಗೆ ವಾರ್ಷಿಕ ರೂ.30,000.

HDFC ಸ್ಕಾಲರ್ಶಿಪ್ ಯಾರಿಗೆ ?

1-12ನೇ ತರಗತಿ ಓದುತ್ತಿರುವವರು, ಐಟಿಐ, ಡಿಪ್ಲೊಮಾ, ಯುಜಿ,ಪಿಜಿ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-12-2023




ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು : 

👉ಪಾಸ್ ಪೋರ್ಟ್ ಅಳತೆಯ ಭಾವಚಿತ್ರ 

👉ಅರ್ಜಿ ಸಲ್ಲಿಸುವವರ ಹಿಂದಿನ ಶೈಕ್ಷಣಿಕ ಅರ್ಹತೆಯ ಅಂಕಪಟ್ಟಿ, ಪಾಸ್ ಸರ್ಟಿಫಿಕೇಷನ್.

👉ಆಧಾರ್ ಕಾರ್ಡ್ ಅಥವಾ ಸರ್ಕಾರೀ ಗುರುತಿನ ಚೀಟಿ 

👉ಆದಾಯ ಪ್ರಮಾಣಪತ್ರ.

👉ಪ್ರಸ್ತುತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಕುರಿತು ಪೂರಕ ದಾಖಲೆ.

👉ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆ, ಇತರೆ ಸಮಸ್ಯೆ ಎದುರಿಸಿದ ಕುರಿತು ಪೂರಕ ದಾಖಲೆ. (ಲಭ್ಯವಿದ್ದಲ್ಲಿ)

ಅರ್ಜಿ ಸಲ್ಲಿಸುವುದು ಹೇಗೆ ?

HDFC ಪರಿವರ್ತನಾ ಐಸಿಎಸ್ ಎಸ್ ಸ್ಕಾಲರ್ಶಿಪ್ ಅರ್ಜಿ ಸಲ್ಲಿಸಲು ಡಿಸೇಂಬರ್ 31ರವರೆಗೆ ಅವಕಾಶ ಇದೆ. ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ. ತೆರೆದ ವೆಬ್ ಪೇಜ್ ನಲ್ಲಿ ' Apply Now ' ಎಂದಿರುವಲ್ಲಿ ಕ್ಲಿಕ್ ಮಾಡಿ. ಗೂಗಲ್, ಇಮೇಲ್, ಮೊಬೈಲ್ ನಂಬರ್ ಯಾವುದಾದರು ಒಂದು ಮಾರ್ಗದ ಮೂಲಕ ರಿಜಿಸ್ಟ್ರೇಷನ್ ಪಡೆದು ಅರ್ಜಿ ಸಲ್ಲಿಸಬೇಕು.


 



ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು