ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ ।। Apply Now @ssp.postmatric.karnataka.gov.in

ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ ।। Apply Now @ssp.postmatric.karnataka.gov.in




 
              ಕರ್ನಾಟಕ ಸರ್ಕಾರ ರಾಜ್ಯದ ಇವಿದ್ಯಾರ್ಥಿಗಳಿಗೆ ಹಲವಾರು ಯೋಜನೆಗಳನ್ನು ಹೊರತಂದಿದೆ. ಅದರಲ್ಲೂ ವಿಶೇಷವಾಗಿ SC / ST ಸಮುದಾಯದ ವಿದ್ಯಾರ್ಥಿಗಳಿಗೆ ಫ್ರೀಶಿಪ್ ಕಾರ್ಡ್ ಗಳನ್ನೂ ಒದಗಿಸುತ್ತಿದೆ. ಭಾರತ ಸರ್ಕಾರದ ಮಾರ್ಗಸೂಚಿ 2020-21 ರನ್ವಯ Freeship Card ಯೋಜನೆಯಡಿಯಲ್ಲಿ ಎಲ್ಲ ಅರ್ಹ ವಿದ್ಯಾರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸದೇ ತಮ್ಮ ಆಯ್ಕೆಯ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಶುಲ್ಕ ಪಾವತಿಸಲು ವಿಳಂಬವಾಗುವ ಏಕೈಕ ಕಾರಣಕ್ಕೆ ತಾವು ಇಚ್ಛಿಸಿದ ಕೋರ್ಸಿಗೆ ಪ್ರವೇಶಾತಿಯನ್ನು ಪಡೆಯದೇ ಇರುವಂತಹ ಪರಿಸ್ಥಿತಿಯನ್ನು ತಪ್ಪಿಸಲು ಈ ಕಾರ್ಡ್ ಗಳನ್ನೂ ವಿತರಿಸುತ್ತಿದೆ.

ಏನಿದು ಫ್ರೀಶಿಪ್ ಕಾರ್ಡ್ ?

ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನವನ್ನು ಜಮಾ ಮಾಡುವಲ್ಲಿ ವಿಳಂಬವನ್ನು ನಿವಾರಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಕಾರ್ಡ್ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕ ಪಾವತಿಗೆ ಸರ್ಕಾರದ ಗ್ಯಾರಂಟಿಯಾಗಿ ಕಾರ್ಯನಿರ್ವಹಿಸುತ್ತದೆ. ಮತ್ತು ಶುಲ್ಕ ಪಾವತಿಸಲು ನಿರ್ದೇಶನ ನೀಡಿದೆ.

Freeship Card ವಿತರಿಸುವಾಗ ವಿದ್ಯಾರ್ಥಿಗೆ ಶುಲ್ಕ ಮರು ಪಾವತಿ ಪಡೆದ ಕೊಡಲೆ ಅದನ್ನು ಶಿಕ್ಷಣ ಸಂಸ್ಥೆಗೆ ಪಾವತಿಸಲು ಹಾಗೂ ಈ ಬಗ್ಗೆ ಶಿಕ್ಷಣ ಸಂಸ್ಥೆಗೆ ಮಾಹಿತಿಯನ್ನು ನೀಡಬೇಕೆಂಬ ಷರತ್ತನ್ನು ವಿಧಿಸಬೇಕಾಗಿರುತ್ತದೆ. Freeship Card ನಿಂದಾಗಿ ಅರ್ಹ ವಿದ್ಯಾರ್ಥಿಗೆ ತನ್ನ ಐಚ್ಛಿಕ ಕೋರ್ಸ್ ಗಾಗಿ ಯಾವುದೇ ಶೈಕ್ಷಣಿಕ ಸಂತೆಯಲ್ಲಿ ಶುಲ್ಕರಹಿತವಾಗಿ ಷರತ್ತುಬದ್ಧ ಪ್ರವೇಶಾತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.

whatss

ಅರ್ಹತೆ :

👉  ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. 

👉  ಪೋಸ್ಟ್ ಮೆಟ್ರಿಕ್ ಓದುತ್ತಿರುವ ವಿದ್ಯಾರ್ಥಿಗಳು ಕರ್ನಾಟಕ ಫ್ರೀಶಿಪ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 

👉  ಎಲ್ಲ ಹಿಂದುಳಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಫ್ರೀಶಿಪ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬಹುದು.

ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

ಯಾವುದೇ ಕೋರ್ಸ್ ಗೆ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗೂ ಪ್ರವೇಶಾತಿಯ ದಿನಾಂಕಕ್ಕೂ ಮೊದಲೇ ರಾಜ್ಯದ ವಿದ್ಯಾರ್ಥಿ ವೇತನ ವಿತರಣಾ ಪೋರ್ಟಲ್ ನಲ್ಲಿ ತನ್ನ ಆಧಾರ್ ಸಂಖ್ಯೆ ಹಾಗೂ ತಾನು ಇಚ್ಛಿಸುವ ಕೋರ್ಸ್ ವಿವರಗಳನ್ನು ಸಲ್ಲಿಸಿ Freeship Card ಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಹಾಗೂ ಶುಲ್ಕ ಮರುಪಾವತಿ ಪಡೆದ 7 ದಿನಗಳೊಳಗಾಗಿ ತಾನು ಶಿಕ್ಷಣ ಸಂಸ್ಥೆಗೆ ಶುಲ್ಕವನ್ನು ಪಾವತಿಸುವ ಬಗ್ಗೆ ಪ್ರಮಾಣ ಪತ್ರ ನೀಡಬೇಕಾಗಿರುತ್ತದೆ.


ಅರ್ಜಿ ಸಲ್ಲಿಸಲು SSP ಪೋಸ್ಟ್ ಮ್ಯಾಟ್ರಿಕ್ ಕರ್ನಾಟಕ ಪೋರ್ಟಲ್ ಗೆ ಭೇಟಿ ನೀಡಿ .......👇👇👇👇👇


 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು