Cibil Score - ಸಾಲಕ್ಕೆ ಅರ್ಜಿ ಹಾಕುವಾಗ ಸಿಬಿಲ್ ಸ್ಕೊರ್ ಜಾಸ್ತಿ ಮಾಡುವ ಟ್ರಿಕ್ಸ್ ಇಲ್ಲಿದೆ...!
ಕ್ರೆಡಿಟ್ ಕಾರ್ಡ್ ಅನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತೇವೆ, ಆದರೆ ಸಾಮಾನ್ಯವಾಗಿ ಅದರ ಕ್ರೆಡಿಟ್ ಸ್ಕೊರ್ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಗೊತ್ತಿರುವುದಿಲ್ಲ. ಹೌದು, ನಾವು ಕ್ರೆಡಿಟ್ ಕಾರ್ಡ್ ಬಳಸುತ್ತೇವೆ ಎಂದರೆ ಅದರ ಕ್ರೆಡಿಟ್ ಸ್ಕೊರ್ ಬಗ್ಗೆ ಕೂಡ ನಾವು ಅಷ್ಟೇ ಗಮನ ಹರಿಸಬೇಕಾಗುತ್ತದೆ. ಏನು ಸಿಬಿಲ್ ಸ್ಕೊರ್? ಯಾಕೆ ನಾವು ಕ್ರೆಡಿಟ್ ಸ್ಕೊರ್ ಗೆ ಅಷ್ಟು ಇಂಪಾರ್ಟೆನ್ಸ್ ಕೊಡ್ಬೇಕು? ಒಂದು ವೇಳೆ ಕಡಿಮೆ ಕ್ರೆಡಿಟ್ ಸ್ಕೊರ್ ಇದ್ದರೆ, ಅದನ್ನು ಹೇಗೆ ಸುಲಭವಾಗಿ ಹೆಚ್ಚಾಗೇ ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೋಣ.
ನಿಮ್ಮ ಕ್ರೆಡಿಟ್ ಅಥವಾ ಸಿಬಿಲ್ ಸ್ಕೊರ್ ಅನ್ನು ಹೇಗೆ ಮೆಂಟೇನ್ ಮಾಡಬಹುದು ಎಂದು ತಿಳಿಯಿರಿ.
ನಿಗದಿತ ಸಮಯಕ್ಕೆ ಬಿಲ್ ಗಳನ್ನು ಪಾವತಿಸಿ:
ಕ್ರೆಡಿಟ್ ಕಾರ್ಡ್ ಬಿಲ್ ಗಳು ಮತ್ತು ಲೋನ್ EMI ಗಳ ಸಕಾಲಿಕ ಪಾವತಿಯನ್ನು ಖಚಿತಪಡಿಸಿಕೊಳ್ಳಿ. ವಿಳಂಬವಾದ ಪಾವತಿಗಳು ನಿಮ್ಮ ಸ್ಕೊರ್ ಮೇಲೆ ಪರಿಣಾಮ ಬೀರಬಹುದು. ಮೊಬೈಲ್ ನಲ್ಲಿ ರಿಮೈಂಡರ್ ಗಳನ್ನು ಹೊಂದಿಸುವ ಮೂಲಕ ಅಥವಾ ಸ್ವಯಂ ಚಾಲಿತ ಮರುಪಾವತಿಯನ್ನು ಸಕ್ರಿಯಗೊಳಿಸಿ ಇದು ಪಾವತಿಯನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ. ಈ ಮೂಲಕ ಬಿಲ್ ಗಳನ್ನು ನಿಗದಿತ ಸಮಯಕ್ಕೆ ಪಾವತಿಸಬಹುದು.
Cidil or Credit score :
ನೀವು ಸಾಲ ಪಡೆದುಕೊಂಡರೆ ಅದನ್ನುಪರಿಪೂರ್ಣವಾಗಿ ಮರುಪಾವತಿ ಮಾಡುವ ಸಾಮರ್ಥ್ಯ ನಿಮ್ಮಲ್ಲಿ ಇದೆಯೇ ಅನ್ನುವುದನ್ನ ನೋಡುವುದಕ್ಕೆ ಕ್ರೆಡಿಟ್ ಸ್ಕೊರ್ ಎಂದು ಕರೆಯುತ್ತಾರೆ. ಸಿಬಿಲ್ ಸ್ಕೊರ್ ಮೂರೂ ಅಂಕಿಯ ಸಂಖ್ಯಾ ಪ್ರಾತಿನಿಧ್ಯವನ್ನು ಹೊಂದಿರುತ್ತದೆ. ಭಾರತದಲ್ಲಿ ಸಾಮಾನ್ಯವಾಗಿ ಸಿಬಿಲ್ ಸ್ಕೊರ್ 300 ರಿಂದ 900 ಶ್ರೇಣಿಯವರೆಗೆ ಇರುತ್ತದೆ.
ಉತ್ತಮ ಕ್ರೆಡಿಟ್ ಸ್ಕೊರ್ ಹೊಂದಿರುವುದು ಖಂಡಿತವಾಗಿಯೂ ಅದರ ಪ್ರಯೋಜನಗಳನ್ನು ಹೊಂದಿದೆ. ಕ್ರೆಡಿಟ್ ಸ್ಕೊರ್ ಉತ್ತಮವಾಗಿದ್ದರೆ ನಿಮಗೆ ಬೇಕಾದ ರೀತಿಯ ಸಾಲ ಅಥವಾ ಹೊಸ ಸಾಲಗಳಿಗೆ ಅನುಮೋದನೆ (ಅಪ್ರೂವಲ್) ಪಡೆಯುವುದನ್ನು ಸುಲಭವಾಗಿ ಕಂಡುಕೊಳ್ಳುತ್ತೀರಿ. ಕ್ರೆಡಿಟ್ ಸ್ಕೊರ್ 750ಕ್ಕಿಂತ ಹೆಚ್ಚಿದರೆ ಅದನ್ನು ಉತ್ತಮ ಸ್ಕೊರ್ ಎಂದು ಪರಿಗಣಿಸಲಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೊರ್ ವೇಗವಾಗಿ ಸಾಲವನ್ನು ಅನುಮೋದಿಸುವುದಲ್ಲದೆ, ನಿಮ್ಮ ಸಾಲದಾತರೊಂದಿಗೆ ಕೈಗಟಕುವ ಬಡ್ಡಿ ದರ ಮತ್ತು ಮರುಪಾವತಿ ಸೇರಿದಂತೆ ನಿಯಮಗಳು ಮತ್ತು ಶರತ್ತುಗಳಿಗಾಗಿ ಮಾತುಕತೆ ನಡೆಸುವ ಪವರ್ ಸಹ ಒದಗಿಸುತ್ತದೆ. ಇನ್ನು ಕಡಿಮೆ ಕ್ರೆಡಿಟ್ ಸ್ಕೊರ್ ಹೊಂದಿದ್ದರೆ, ಅವರಿಗೆ ಸಾಲ ಪಡೆಯುವ ಸಂಧರ್ಭದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕ್ರೆಡಿಟ್ ಬಳಕೆಯನ್ನು ಕಡಿಮೆ ಮಾಡಿ:
ತುರ್ತು ಪರಿಸ್ಥಿತಿಗಾಗಿ ಕ್ರೆಡಿಟ್ ಕಾರ್ಡ್ ಕಂಪನಿಗಳು ಕ್ರೆಡಿಟ್ ಕಾರ್ಡ್ ಗಳಲ್ಲಿ ಹೆಚ್ಚುವರಿ ಬ್ಯಾಲೆನ್ಸ್ ಅನ್ನು ಒದಗಿಸುತ್ತಾರೆ. ಹೀಗಿರುವಾಗ ಆರೋಗ್ಯಕರ ಕ್ರೆಡಿಟ್ ಸ್ಕೊರ್ ಅನ್ನು ಕಾಪಾಡಿಕೊಳ್ಳಲು ನಿಮ್ಮ ಕ್ರೆಡಿಟ್ ಬಳಕೆಯನ್ನು ೩೦% ಕ್ಕಿಂತ ಕಡಿಮೆ ಇರಿಸಿಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ, ಒಂದು ವೇಳೆ 5 ಲಕ್ಷ ರೂಪಾಯಿಗಳ ಕ್ರೆಡಿಟ್ ಲಿಮಿಟ್ ಇರುವಂತ ಕಾರ್ಡ್ ಇದ್ದು, ಅದನ್ನು ನೀವು 4.50 ಲಕ್ಷ ಅಥವಾ 5 ಲಕ್ಷದವರೆಗೂ ಖರ್ಚು ಮಾಡಿದ್ದೆ ಆದಲ್ಲಿ ಅದು ನಿಮ್ಮ ಕ್ರೆಡಿಟ್ ಸ್ಕೊರ್ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಕ್ರೆಡಿಟ್ ಲಿಮಿಟ್ ಅನ್ನು 30% ಕ್ಕಿಂತ ಕಡಿಮೆ ಇರಿಸಿಕೊಳ್ಳಲು ಪ್ರಯತ್ನಿಸಬೇಕು.
ಕಠಿಣ ವಿಚಾರಣೆಗಳನ್ನು ಮಿತಗೊಳಿಸಿ :
ಸಾಮಾನ್ಯವಾಗಿ ನೀವು ಕ್ರೆಡಿಟ್ ಕಾರ್ಡ್ ಅಥವಾ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಕ್ರೆಡಿಟ್ ಕಾರ್ಡ್ ವಿಚಾರಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದನ್ನು ಕಠಿಣ ವಿಚಾರಣೆ ಎಂದು ಹೇಳಲಾಗುತ್ತದೆ. ಪದೇ ಪದೇ ಕಠಿಣ ವಿಚಾರಣೆಗಳು ಸಲ್ಲಿಸಿದರೆ ಅದು ಕ್ರೆಡಿಟ್ ಸ್ಕೊರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಅಗತ್ಯವಿದ್ದರೆ ಮಾತ್ರ ವಿಚಾರಣೆ ಅರ್ಜಿ ಸಲ್ಲಿಸಬೇಕು. ಅನಾವಶ್ಯಕವಾಗಿ ಪ್ರತಿ ಬಾರಿಯೂ ಕ್ರೆಡಿಟ್ ಕಾರ್ಡ್ ವಿಚಾರಣೆಗೆ ಅರ್ಜಿ ಸಲ್ಲಿಸುವುದನ್ನು ತಪ್ಪಿಸಿ.
ಸಾಲ ಮರುಪಾವತಿ ಮಾಡಿ :
ಈಗಾಗಲೇ ನೀವು ಯಾವುದೇ ರೀತಿಯ ಸಾಲವನ್ನು ಪಡೆದಿದ್ದರೆ ಸಾಲವನ್ನು ಸಕಾಲಿಕ ಸಮಯಕ್ಕೆ ಮರುಪಾವತಿಸಿ, ಇಲ್ಲವಾದಲ್ಲಿ ನಿಮ್ಮ ಕ್ರೆಡಿಟ್ ಸ್ಕೊರ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಸಾಲವನ್ನು ಪಡೆಯುವ ಮುನ್ನ ನೀವು ಸಾಲವನ್ನು ಮರುಪಾವತಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಮಾತ್ರ ಸಾಲವನ್ನು ಪಡೆಯಿರಿ, ಇಲ್ಲವೇ ನಿಮ್ಮ ಕ್ರೆಡಿಟ್ ಸ್ಕೊರ್ ಕಡಿಮೆ ಆಗುವ ಸಾಧ್ಯತೆ ಇರುತ್ತದೆ.
ಎಲ್ಲಾ ಕ್ರೆಡಿಟ್ ಕಾರ್ಡ್ ಗಳನ್ನು ನಿರ್ವಹಿಸಿ :
ನೀವು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಒಂದಕ್ಕಿಂತ ಜಾಸ್ತಿ ಕ್ರೆಡಿಟ್ ಕಾರ್ಡ್ ಗಳನ್ನು ಅನ್ವಯಿಸಬಹುದು, ಅದು ಈ ಕ್ರೆಡಿಟ್ ಕಾರ್ಡ್ ಗಳನ್ನು ನಿರ್ವಹಿಸಲು ನಿಮ್ಮಲ್ಲಿ ಸಾಮರ್ಥ್ಯವಿದ್ದರೆ, ಮಾತ್ರ. ಇಲ್ಲವಾದಲ್ಲಿ ನಿಮ್ಮ ಕ್ರೆಡಿಟ್ ಸ್ಕೊರ್ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಹಳೆಯ ಕ್ರೆಡಿಟ್ ಕಾರ್ಡ್ ಗಳ ನಿರ್ವಹಣೆ ತಪ್ಪಿಸಿದ್ದಲ್ಲಿ, ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್ ನ ಇತಿಹಾಸವನ್ನು ವಿಶ್ಲೇಷಿಸುವ ಮೂಲಕ ಕ್ರೆಡಿಟ್ ಕಾರ್ಡ್ ಕಂಪನಿಯು ನಿಮ್ಮ ಸ್ಕೊರ್ ಅನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಒಂದಕ್ಕಿಂತ ಹೆಚ್ಚು ಕಾರ್ಡ್ ಗಳನ್ನೂ ಅನ್ವಯಿಸುವುದನ್ನು ತಪ್ಪಿಸಿ,ನಿಮ್ಮ ಸಾಮರ್ಥ್ಯಕ್ಕೆ ಮೀರಿ ಹೆಚ್ಚಿನ ಕ್ರೆಡಿಟ್ ಕಾರ್ಡ್ ಗಳನ್ನು ತೆಗೆದುಕೊಳ್ಳಬೇಡಿ.
ಈ ಮೇಲಿನ ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಮತ್ತು ಜವಾಬ್ದಾರಿಯುತ ಕ್ರೆಡಿಟ್ ಅಭ್ಯಾಸಗಳನ್ನು ನಿರ್ವಹಿಸುವ ಮೂಲಕ ನಿಮ್ಮ ಕ್ರೆಡಿಟ್ ಅರ್ಹತೆಯನ್ನು ನೀವು ಸ್ಥಿರವಾಗಿ ಹೆಚ್ಚಿಸಬಹುದು ಮತ್ತು ಉತ್ತಮ ಹಣಕಾಸಿನ ಅವಕಾಶಗಳನ್ನು ಪ್ರವೇಶಿಸಬಹುದು. ಹಾಗೆಯೆ ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮೆಲ್ಲ ಸ್ನೇಹಿತರೊಂದಿಗೆ ಶೇರ್ ಮಾಡಿ.
Tags
Social