ಯುವನಿಧಿ 2023 ಪದವೀಧರ ನಿಡುದ್ಯೋಗಿಗಳಿಗೆ ಭತ್ಯೆ ನೀಡುವ ಯುವನಿಧಿಗೆ ಅರ್ಜಿ ಸ್ವೀಕಾರ ಆರಂಭ!! ದಿನಾಂಕ, ಅರ್ಹತೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ:

ಯುವನಿಧಿ 2023 ಪದವೀಧರ ನಿಡುದ್ಯೋಗಿಗಳಿಗೆ ಭತ್ಯೆ ನೀಡುವ ಯುವನಿಧಿಗೆ ಅರ್ಜಿ ಸ್ವೀಕಾರ ಆರಂಭ!! ದಿನಾಂಕ, ಅರ್ಹತೆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ:




          ಕರ್ನಾಟಕ ರಾಜ್ಯ ಸರ್ಕಾರವು 2022-23 ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಹಾಗೂ ಡಿಪ್ಲೋಮ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡುವ ಸಲುವಾಗಿ ಯುವನಿಧಿ ಯೋಜನೆ'ಯನ್ನು ಜಾರಿಗೊಳಿಸಿದೆ. 
ಸರ್ಕಾರವು ನೀಡಿರುವ ಮಾಹಿತಿಯಂತೆ ಡಿಸೆಂಬರ್ 21ರಿಂದ ಯುವನಿಧಿ ಯೋಜನೆಗೆ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಸುಮಾರು 5 ಲಕ್ಷ ಅಭ್ಯರ್ಥಿಗಳು ಈ ಪ್ರೋತ್ಸಾಹಧನದ ಸದುಪಯೋಗ ಪಡೆಯಲಿದ್ದಾರೆ ಎಂದು ಸರ್ಕಾರ ಅಂದಾಜು ಮಾಡಿದೆ.

ಯುವ ನಿಧಿ ಭತ್ಯೆ ವಿವರ:

ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ 3000
ಡಿಪ್ಲೋಮ ಪಾಸ್ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ರೂ 1500

ಅರ್ಜಿ ಸಲ್ಲಿಸಲು ಅರ್ಹತೆಗಳು:
2023ರ ವರ್ಷದಲ್ಲಿ ಪದವಿ/ಡಿಪ್ಲೋಮ ತೇರ್ಗಡೆಯಾಗಿದ್ದು, ಉತ್ತೀರ್ಣರಾದ ದಿನಾಂಕದಿಂದ 180 ದಿನ ಕಳೆದರೂ ಉದ್ಯೋಗ ಲಭಿಸದ ಪದವೀಧರ ನಿರುದ್ಯೋಗಿಗಳಿಗೆ ಮಾತ್ರ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಇರುತ್ತದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ದಿನಾಂಕದಿಂದ ತಾವು ಉದ್ಯೋಗ ಸಿಗುವವರೆಗೆ ಮಾತ್ರ ಅಥವಾ ಎರಡು ವರ್ಷ ಗರಿಷ್ಟ ಅವಧಿಯ ವರೆಗೆ ಮಾತ್ರ ಈ ಸೌಲಭ್ಯ ನೀಡಲಾಗುತ್ತದೆ.

ಕರ್ನಾಟಕ ರಾಜ್ಯದ ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ ಯುವನಿಧಿ ಯೋಜನೆ ಅನ್ವಯವಾಯುತ್ತದೆ.

ಯುವನಿಧಿ ಯೋಜನೆ 


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು