ರಾಜ್ಯದಲ್ಲಿ ಕೆಎಂಎಫ್ (KMF) ಎಮ್ಮೆ ಹಾಲು (Buffalo Milk) ಶುಕ್ರವಾರದಿಂದ (ಇಂದು) ಮಾರುಕಟ್ಟೆಗೆ ಲಭ್ಯವಾಗುತ್ತಿದ್ದು, ಗ್ರಾಹಕರಿಂದಲೂ ಭಾರೀ ಬೇಡಿಕೆ ಬರುತ್ತಿದೆ. ಪ್ರತಿ ಲೀಟರ್ ಹಾಲಿಗೆ (Milk) 60 ರೂ. ನಿಗದಿಪಡಿಸಲಾಗಿದೆ. ಹಾಲು ಒಕ್ಕೂಟಗಳಿಗೆ ಪ್ರತಿ ನಿತ್ಯ 60 ಸಾವಿರ ಲೀಟರ್ ಎಮ್ಮೆ ಹಾಲು ಪೂರೈಕೆ ಮಾಡಲಾಗುತ್ತದೆ. ರೈತರಿಂದ ಪ್ರತಿ ಲೀಟರ್‌ಗೆ 39.50 ರೂಪಾಯಿಗೆ (5 ರೂ. ಪ್ರೋತ್ಸಾಹಧನವನ್ನೊಳಗೊಂಡು) ಖರೀದಿ ಮಾಡಲಾಗುತ್ತಿದೆ
ಕೆಎಂಎಫ್ ವತಿಯಿಂದ ಎಮ್ಮೆ ಹಾಲು ಪೂರೈಕೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಕೆಲ ವರ್ಷಗಳ ಹಿಂದೆ ನಂದಿನಿ ಎಮ್ಮೆ ಹಾಲನ್ನು (Nandini Buffalo Milk) ಮಾರುಕಟ್ಟೆಗೆ ಬಿಡಲಾಗಿತ್ತು. ಆದ್ರೆ ಪೂರೈಕೆಯಲ್ಲಿ ವ್ಯತ್ಯಯವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿತ್ತು.
ಅಂದು ಪ್ರತಿದಿನ ಸುಮಾರು 5,000 ಲೀಟರ್ ಹಾಲನ್ನು ಕೆಎಂಎಫ್ ಮಾರಾಟ ಮಾಡುತ್ತಿತ್ತು. ಸದ್ಯ ಬೆಂಗಳೂರು ಸೇರಿದಂತೆ ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ ಮಾರುಕಟ್ಟೆಗಳಲ್ಲಿಯೂ ಎಮ್ಮೆ ಹಾಲು ಮಾರಾಟಕ್ಕೆ ಕೆಎಂಎಫ್ ನಿರ್ಧಾರ ಮಾಡಿದೆ.
Tags
News