ಆರ್ ಟಿಇ ಶಾಲೆಗಳ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ, ಈ ದಿನಾಂಕ ಅರ್ಜಿ ಪ್ರಾರಂಭ ; ಇಲ್ಲಿದೆ ಸಂಪೂರ್ಣ ಮಾಹಿತಿ
ಆರ್ ಟಿಇ ಕರ್ನಾಟಕ ಪ್ರವೇಶ 2924--25 ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.ಉಚಿತ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ, ಮಕ್ಕಳಿಗೆ ಉಚಿತ ಶಿಕ್ಷಣವನ್ನು ಪಡೆದುಕೊಳ್ಳುವ ಅವಕಾಶವನ್ನು ಕರ್ನಾಟಕ ಸರ್ಕಾರವು ಮಾಡಿಕೊಟ್ಟಿದೆ. ಈ ಉಚಿತ ಶಿಕ್ಷಣವನ್ನು ಪಡೆಯಲು ಬೇಕಾಗಿರುವ ಅರ್ಹತೆಗಳು ಮತ್ತು ಉಚಿತ ಶಿಕ್ಷಣವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ?ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಇದರ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋ ಮುಲಕ ತಿಳಿಸಿಕೊಡಲಾಗುತ್ತದೆ.
ಆರ್ ಟಿಇ ಕರ್ನಾಟಕ ಪ್ರವೇಶ :
ಶಿಕ್ಷಣ ಹಕ್ಕು ಕಾಯಿದೆ ಎಂಬ ಸರ್ಕಾರೀ ಕಾರ್ಯಕ್ರಮವು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಅಗತ್ಯವಿರುವ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ. ಆದ್ದರಿಂದ ಆರ್ ಟಿಇ ಕಾಯ್ದೆಯನ್ನು ಅಳವಡಿಸಿಕೊಂಡ ಭಾರತೀಯಾ ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ದೇಶದ ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ಹಕ್ಕಿದೆ ಶ್ಕ್ಷಣ ಹಕ್ಕು ಕಾಯಿದೆಯು 6 ರಿಂದ 14 ವರ್ಷದ ವಯ್ಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುತ್ತದೆ. ಈ ಕಾಯಿದೆಯು ದೇಶದ ಪ್ರತಿಯೊಬ್ಬ ಮಗುವು ಸಾಮಾಜಿಕ - ಆರ್ಥಿಕ ಹಿನ್ನಲೆಯನ್ನು ಲೆಕ್ಕಿಸದೆ ಗುಣಮಟ್ಟದ ಶಿಕ್ಷಣದ ಪ್ರವೇಶವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳುವ ಗುರುಯನ್ನು ಹೊಂದಿದೆ ಆರ್ ಟಿಇ ಕಾಯ್ದೆಯ ಪ್ರಕಾರ ಎಲ್ಲ ಖಾಸಗಿ ಶಾಲೆಗಳು ತಮ್ಮ ಶೇ 25 ರಷ್ಟು ಸೀಟುಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಮೀಸಲಿಡಬೇಕು. ಈ ಶಾಲೆಗಳು ಸರ್ಕಾರದಿಂದ ಆರ್ಥಿಕ ಸಹಾಯವನ್ನು ಪಡೆಯುತ್ತವೆ ಇದರಿಂದ ಅವರು ಈ ವಿಧ್ಯಾರ್ಥಿಗಳಿಗೆ ಖರ್ಚು ಮಾಡಿಸುವ ವೆಚ್ಚವನ್ನು ಭರಿಸಬಹುವುದು.
ಆರ್ ಟಿಇ ತಾತ್ಕಾಲಿಕ ವೇಳಾಪಟ್ಟಿ :
* ಫೆ. 7-2024-25 ಸಾಲಿನ ಆರ್ ಟಿಟಿ ಪ್ರವೇಶ ಪ್ರಕ್ರಿಯೆಗೆ ಸಂಭಂದಿಸಿದಂತೆ ಮಾರ್ಗಸೂಚಿ ಪ್ರಕಟಿಸುವುದು
* ಫೆ 23-ಶಾಲೆಗಲ ತಾತ್ಕಾಲಿಕ ಪಟ್ಟಿ ಪ್ರಕಟಿಸುವುದು
* ಫೆ 28- ಶೇ. ೨೫ ಸೀಟುಗಳು ಲಭ್ಯವಿರುವ ಶಾಲೆಗಳ ಪಟ್ಟಿಯನ್ನು ಜಿಲ್ಲೆಯ ಅಧಿಕೃತ ವೆಬ್ ಸೈಟ್ ಹಾಗು ಕಚೇರಿ ಸೂಚನಾಲಕದಲ್ಲಿ ಪ್ರಕಟಿಸುವುದು.
* ಮಾರ್ಚ್ 20-21 ಪ್ರಯೋಗಿಕವಾಗಿ ಅರ್ಜಿ ಸಲ್ಲಿಕೆ ಆರಂಭ,
* ಮಾರ್ಚ್ 22 ರಿಂದ -ಏ - 22 ವರೆಗೆ ಅರ್ಜಿ ಸಲ್ಲಿಸಲು ಅವಕಾಶ,
* ಏಪ್ರಿಲ್ 20 - ಮೊದಲ ಸುತ್ತಿನ ಸಿತು ಹಂಚಿಕೆ ನಡೆಯಲಿದೆ ಎಂದು ಇಲಾಖೆ ಆಯುಕ್ತಕಾರು ತಿಳಿಸಿದ್ದಾರೆ.
ಆರ್ ಟಿಇ ಕರ್ನಾಟಕ ಪ್ರವೇಶ ಪಡೆಯಲು ಬೇಕಾಗಿರುವ ಅರ್ಹತೆಗಳು :
೧. ವಿದ್ಯಾರ್ಥಿಯು ಕರ್ನಾಟಕದ ಖಾಯಂ ಪ್ರಜೆಯಾಗಿರಬೇಕು.
೨. ಒಂದನೇ ತರಗತಿ ಮಾತ್ರ ಪ್ರವೇಶವಿದೆ.
೩. ಒಂದನೇ ತರಗತಿ ಪಡೆಯುವ ವಿದ್ಯಾರ್ಥಿಗಳು 1/6/2016 ರಿಂದ 1/1/2018 ರ ಒಳಗಡೆ ಜನಿಸಿರಬೇಕು
೪. ಕುಟುಂಬದ ಒಟ್ಟು ಆದಾಯ 2.5 ಲಕ್ಷ ಮೀರಿರಬಾರದು
೫. ಸಮಾಜದ ಹಿಂದುಳಿದ ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
* ಮಗುವಿನ ಆಧಾರ್ ಕಾರ್ಡ್
* ಮಗುವಿನ ಜನನ ಪ್ರಮಾಣ ಪತ್ರ
* ಮಗುವಿನ ಜಾತಿ ಪ್ರಮಾಣ ಪಾತ್ರ
* ಪೋಷಕರ ಆಧಾರ್ ಕಾರ್ಡ್
* ತಂದೆ ಅಥವಾ ತಾಯಿಯ ಜಾತಿ ಹಾಗು ಆದಾಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ ;
ಪಾಲಕರು ಸರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಗಳಲ್ಲಿ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ಚೇರಿಗಳಲ್ಲಿ ಉಚಿತವಾಗಿ ಅಥವಾ ಸರ್ಕಾರ ಪಾವತಿ ಕೇಂದ್ರಗಳಾದ ಬೆಂಗಳೂರು-ಒನ್ ಇತರೆ ನಗರ ಪ್ರದೇಶಗಳಲ್ಲಿ ಕರ್ನಟಕ -ಒನ್, ತಾಲೂಕು ಮತ್ತು ಹೋಬಳಿ ಮಟ್ಟದ ಅಟಲ್ ಜಿ ಜನಸ್ನೇಹಿ ಕೇಂದ್ರಗಳ ಮೂಲಕ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
ಹಂತ 1: ಮೊದಲಿಗೆ ಆರ್ ಟಿಇ ಕರ್ನಾಟಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
ಹಂತ 2: ನಂತರ ಅಧಿಕೃತ ಜಾಲತಾಣಕ್ಕೆ ನೋಂದಣಿಯನ್ನು ಮಾಡಿಕೊಂಡು ಲಾಗಿನ್ ಆಗಿ
ಹಂತ 3: ನಿಮ್ಮ ಮಗುವಿನ ವಿವರಗಳನ್ನು ಮತ್ತು ಪೋಷಕರ ವಿವರಗಳನ್ನು ಫಾರ್ಮ್ ನಲ್ಲಿ ನಮೂದಿಸಿ, ಭಾರ್ತಿ ಮಾಡುವ ಸಮಯದಲ್ಲಿ ಫರ್ಮ್ ನಿಮ್ಮ ಹತ್ತಿರದ ವಿಳಾಸವನ್ನು ಆಯ್ಕೆ ಮಾಡುತ್ತದೆ
ಹಂತ 4: ಶಾಲೆಯನ್ನು ಆಯ್ಕೆ ಮಾಡಿ ಮತ್ತು ಅಗತ್ಯವಿರುವ ಗುಣಮಟ್ಟವನ್ನು ಸಹ ಆಯ್ಕೆಮಾಡಿ .
ಹಂತ 5: ಕೇಳಲಾದ ದಾಖಾಲೆಗಳನ್ನು ಅಪ್ಲೋಡ್ ಮಾಡಿ.
ಹಂತ 6: ನಂತರ ಅರ್ಜಿಯನ್ನು ಸಲ್ಲಿಸುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಆಯ್ಕೆ ಪ್ರಕ್ರಿಯೆ :
ಲಾಟರಿ ಕಾರ್ಯವಿಧಾನವು ಆರ್ ಟಿಇ ಕರ್ನಾಟಕ ಪ್ರವೇಶ ಪ್ರಕ್ರಿಯೆಯ ಒಂದು ಭಾಗವಾಗಿದೆ, ಇದರಲ್ಲಿ ಗಣಕೀಕೃತ ವ್ಯವಸ್ಥೆಯನ್ನು ಬಳಸಿಕೊಂಡು ಅರ್ಜಿದಾರ ಹೆಸರನ್ನು ಯಾದೃಚಿಕವಾಗಿ ಆಯ್ಕೆ ಮಾಡಲಾಗುತ್ತದೆ. ನಂತರ ಮೂಲಭೂತವಾಗಿ, ಇದು ಅವರ ಅತ್ಯುತ್ತಮ ಶೈಕ್ಷಣಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಿಟುಗಳ ಲಭ್ಯತೆಯನ್ನು ಆಧರಿಸಿದೆ ಮತ್ತು ಆಯ್ಕೆ ಮಡಿದ ವಿಧ್ಯಾರ್ಥಿಗಳನ್ನು ಆ ಸಂಸ್ಥೆಗಳಿಗೆ ನಿಯೋಸಿಸಲಾಗುತ್ತದೆ,
ಹೀಗೆ ಉಚಿತ ಶಿಕ್ಷನಡ ಹಕ್ಕು ಕಾಯ್ದೆಯ ಅಡಿಯಳ್ಳಿ ಒಂದನೇ ತರಗತಿಗೆ ಖಾಸಗಿ ಸಂಸ್ಥೆಗಳಲ್ಲಿ ಉಚಿತವಾಗಿ ಪ್ರವೇಶವನ್ನು ಪಡೆಯಬಹುದು. 1ನೇ ತರಗತಿಗೆ ಸೇರಿದ ನಂತರ 14ವರ್ಷದ ವರೆಗೆ ಅದೇ ಖಾಸಗಿ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣ ದೊರಿಯುತ್ತದೆ.
ರಾಜ್ಯದ ಎಲ್ಲ ಸರಕಾರಿ, ಬಿಬಿಎಂಪಿ ಶಾಲೆಗಳು, ಅನುಧಾನಿತ ಮತ್ತು ಅನುಧಾನ ರಹಿತ ಶಾಲೆಗಳನ್ನು ಮ್ಯಾಪಿಂಗ್ ಮಾಡುವುದು. ಅಲ್ಪಸಂಖ್ಯಾತ ಶಾಲೆಗಳೆಂದು ಘೋಷ್ನ ಪಾತ್ರ ಪಡೆದಿರುವ, ಇಗಾಗಲೇ ಮುಚ್ಚಿರುವ ಮತ್ತು ನ್ಯಾಯಾಲಯದ ತಡೆಯಾಜ್ಞೆ ಪಡೆದಿರುವ ಶಾಲೆಗಳನ್ನು ಪಟ್ಟಿಯಿಂದ ಕೈಬಿಡಬೇಕು. ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಮಾತ್ರ ನಡೆಸುವ ಶಾಲೆಗಳನ್ನು ಪಟ್ಟಿಯಲ್ಲಿ ಸೇರಿಸಬಾರದು. 2023 ರ ಡಿ. 31 ರಲ್ಲಿದ್ದ ಧಾಖಲಾತಿ ಸಂಖ್ಯೆಯನ್ನು ಅಧರಿಸಿ ಶೇ. 25 ಸಿಟು ಹಂಚಿಕೆಗೆ ಪರಿಗಣಿಸುವಂತೆ ಇಲಾಖೆ ಆಯುಕ್ತರು ಸೂಚನ ನೀಡಿದ್ದಾರೆ.
Tags
Govt.scheme