ಏಪ್ರಿಲ್ 15 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ಮೇ 15 ಕೊನೆಯ ದಿನ...!
327 ಗ್ರೂಪ್ ಬಿ ಹುದ್ದೆಗೆ ಕೆಪಿಎಸ್ ಸಿ ಅಧಿಸೂಚನೆ
ಕರ್ನಾಟಕ ಲೋಕಸೇವಾ ಆಯೋಗ ( ಕೆಪಿಎಸ್ ಸಿ ) ವಿವಿಧ ಇಲಾಖೆ, ನಿರ್ದೇಶನಾಲಯ ಹಾಗೂ ಬಿಬಿಎಂಪಿಯಲ್ಲಿ ಖಾಲಿಯಿರುವ ಗ್ರೂಪ್ ಬಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
327 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಏಪ್ರಿಲ್ 15 ರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಶುಲ್ಕ ಪಾವತಿ ಹಾಗೂ ಅರ್ಜಿ ಸಲ್ಲಿಕೆಗೆ ಮೇ 15 ಕೊನೆಯ ದಿನ. ಆಗಸ್ಟ್ 11 ಹಾಗೂ 25 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಭಾವ್ಯ ದಿನಾಂಕವಾಗಿದೆ.
ಹೈ.ಕ ವೃಂದದ ಹುದ್ದೆಗಳು : ಬಿಬಿಎಂಪಿಯಲ್ಲಿ ಸಹಾಯಕ ಇಂಜಿನಿಯರ್ ( ಸಿವಿಲ್ ) 8 ಹುದ್ದೆಗಳು, ಭೂಮಾಪನ, ಭೂದಾಖಲೆಯ ಸಹಾಯಕ ನಿರ್ದೇಶಕರು - 3, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ / ಕಲ್ಯಾಣಾಧಿಕಾರಿ - 19, ಕಾರ್ಖಾನೆ ಮತ್ತು ಬಾಯ್ಲಾರ್ ಇಲಾಖೆಯ ಕಾರ್ಖಾನೆಗಳ ಸಹಾಯಕ ನಿರ್ದೇಶಕರು - 2 ಹಾಗೂ ಕೈಗಾರಿಕೆ ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರು - 3 ಹಾಗೂ ಅಂತರ್ಜಲ ನಿರ್ದೇಶನಾಲಯದ ಭೂವಿಜ್ಞಾನಿ - 15 ಸೇರಿ ಒಟ್ಟು 50 ಹುದ್ದೆಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿದೆ. ವಿವರಗಳಿಗೆ kpsc.kar.nic.in ಸಂಪರ್ಕಿಸಿ.
ಇಲಾಖೆ ಹುದ್ದೆ ಸಂಖ್ಯೆ
ಬಿಬಿಎಂಪಿ ಸಹಾಯಕ ಇಂಜಿನಿಯರ್ ( ಸಿವಿಲ್ ) 92
ಜಲಸಂಪನ್ಮೂಲ ಸಹಾಯಕ ಇಂಜಿನಿಯರ್ ( ಸಿವಿಲ್ ) 90
ಜಲಸಂಪನ್ಮೂಲ ಸಹಾಯಕ ಇಂಜಿನಿಯರ್ ( ಮೆಕ್ಯಾನಿಕಲ್ ) 10
ಭೂಮಾಪನ, ಭೂದಾಖಲೆ ಸಹಾಯಕ ನಿರ್ದೇಶಕ 24
ಹಿಂದುಳಿದ ವರ್ಗಗಳ ಕಲ್ಯಾಣ ಪತ್ರಾಂಕಿತ ವ್ಯವಸ್ಥಾಪಕ / ಕಲ್ಯಾಣಾಧಿಕಾರಿ 21
ಕೈಗಾರಿಕೆ ವಾಣಿಜ್ಯ ಸಹಾಯಕ ನಿರ್ದೇಶಕ 20
ಕಾರ್ಖಾನೆ ಮತ್ತು ಬಾಯ್ಲಾರ್ ಕಾರ್ಖಾನೆಗಳ ಸಹಾಯಕ ನಿರ್ದೇಶಕ 7
ಕಾರ್ಖಾನೆ ಮತ್ತು ಬಾಯ್ಲಾರ್ ಬಾಯ್ಲಾರ್ ಗಳ ಸಹಾಯಕ ನಿರ್ದೇಶಕ 3
ಅಂತರ್ಜಲ ನಿರ್ದೇಶನಾಲಯ ಭೂವಿಜ್ಞಾನಿ 10
ವಯೋಮಿತಿ ವಿನಾಯಿತಿ ಅನ್ವಯಿಸಲ್ಲ
ಫೆ. 26 ರಂದು ಕೆಪಿಎಸ್ ಸಿ ಹೊರಡಿಸಿದ್ದ ೩೮೪ ಗ್ರೂಪ್ ಎ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ ಅಭ್ಯರ್ಥಿಗಳಿಗೆ ಒಂದು ಬಾರಿಯ ಕ್ರಮವಾಗಿ 3ವರ್ಷಗಳ ವಯೋಮಿತಿ ವಿನಾಯಿತಿ ಘೋಷಿಸಲಾಗಿತ್ತು. ಆದರೆ, ಗ್ರೂಪ್ ಬಿ ಹುದ್ದೆಗಳ ನೇಮಕಕ್ಕೆ ಈ ವಿನಾಯಿತಿ ಪರಿಗಣಿಸಲಾಗಿಲ್ಲ. ಹೀಗಾಗಿ ಸಾಮಾನ್ಯ ವರ್ಗಕ್ಕೆ ಗರಿಷ್ಟ 35, ಹಿಂದುಳಿದ ವರ್ಗಗಳಿಗೆ 38, ಪರಿಶಿಷ್ಟ, ಪ್ರವರ್ಗ - 1 ರ ಅಭ್ಯರ್ಥಿಗಳಿಗೆ ಗರಿಷ್ಟ 40 ವರ್ಷದ ವಯೋಮಿತಿ ನಿಗದಿಪಡಿಸಲಾಗಿದೆ.
ಕೆಪಿಟಿಸಿಎಲ್ ನೇಮಕ ಪತ್ರ ಹಸ್ತಾಂತರ
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ( ಕೆಪಿಟಿಸಿಎಲ್ ) ಸಹಾಯಕ ಇಂಜಿನಿಯರ್ ( ಸಿವಿಲ್ ), ಕಿರಿಯ ಇಂಜಿನಿಯರ್ ( ಸಿವಿಲ್ ) ಮತ್ತು ಕಿರಿಯ ಇಂಜಿನಿಯರ್ ( ವಿದ್ಯುತ್ ) ಹುದ್ದೆಗಳಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ನಿಗಮದ ವತಿಯಿಂದ ಸ್ಥಳ ನಿಯುಕ್ತಿ ಹಾಗೂ ನೇಮಕಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು. ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ನೇತೃತ್ವದಲ್ಲಿ ತಾಂತ್ರಿಕ ನಿರ್ದೇಶಕ ಆರ್. ಜಯಕುಮಾರ್, ಬಿ.ಪಿ ವಿಜಯ್ ಹಾಗೂ ಹಿರಿಯ ಅಧಿಕಾರಿಗಳು ಪ್ರಕ್ರಿಯೆ ನಡೆಸಿಕೊಟ್ಟರು.
ಅಂಕಿ - ಅಂಶ : ಸಹಾಯಕ ಇಂಜಿನಿಯರ್ ( ಸಿವಿಲ್ ) - 12, ಸಹಾಯಕ ಇಂಜಿನಿಯರ್ ( ಸಿವಿಲ್ ) ಕ. ಕರ್ನಾಟಕ - 3, ಕಿರಿಯ ಇಂಜಿನಿಯರ್ ( ಸಿವಿಲ್ ) - 8, ಕಿರಿಯ ಇಂಜಿನಿಯರ್ ( ಸಿವಿಲ್ ) ಕ. ಕರ್ನಾಟಕ - 3, ಸಹಾಯಕ ಇಂಜಿನಿಯರ್ ( ವಿದ್ಯುತ್ ) - 278, ಸಹಾಯಕ ಇಂಜಿನಿಯರ್ ( ವಿದ್ಯುತ್ ) ಕ.ಕರ್ನಾಟಕ - 76