ಸಹಕಾರಿಗಳಿಗಾಗಿ ಯಶಸ್ವಿನಿ ಅರೋಗ್ಯ ರಕ್ಷಣಾ ಯೋಜನೆಯನ್ನುಹೊಸ ಸದಸ್ಯರನ್ನು ನೋಂದಾಯಿಸುವ ಅವಧಿಯನ್ನು ದಿನಾಂಕ:31-01-2023 ರವರೆಗೆ ವಿಸ್ತರಿಸಿ

2022-23 ನೇ ಸಾಲಿಗೆ ಸಹಕಾರಿಗಳಿಗಾಗಿ ಯಶಸ್ವಿನಿ ಅರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ  ಅವಧಿಯನ್ನು ವಿಸ್ತರಿಸುವ ಬಗ್ಗೆ.



 ಪ್ರಸ್ತಾವನೆ: 

            2022-2023 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 67 ರಲ್ಲಿ ಮಾನ್ಯ ಮುಖ್ಯಮಂತ್ರಿಯವರು ಯಶಸ್ವಿನಿ ಯೋಜನೆಯನ್ನು ರಾಜ್ಯದಲ್ಲಿ ಮರು ಜಾರಿಗೊಳಿಸಲು ಘೋಷಿಸಿರುತ್ತಾರೆ.

             ಸರ್ಕಾರದ ಆದೇಶದಲ್ಲಿ 2022-23 ಸಾಲಿಗೆ   ಸಹಕಾರಿಗಳಿಗಾಗಿ ಯಶಸ್ವಿನಿ ಅರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ  ಅವಧಿಯನ್ನು ದಿನಾಂಕ 01-11-2022 ರಿಂದ 31-12-2022 ರವರೆಗೆ ಆದೇಶಿಸಲಾಗಿತ್ತು. 



PS_90_ಯಶಸ್ವಿನಿ ಯೋಜನೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-12-2022 |YASHASVINI YOJANE LAST DATE 31-01-2023|

                 ಮುಖ್ಯಕಾರ್ಯನಿರ್ವಹಣಾಧಿಕಾರಿ ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಇವರ ಟಿಪ್ಪಣಿ ದಿನಾಂಕಆ :31-12-2022 ರಲ್ಲಿ, ಸರ್ಕಾರವು ಯಶಸ್ವಿನಿ ಯೋಜನೆಯ ಸದಸ್ಯತ್ವ ನೋಂದಣಿ ದಿನಾಂಕದ ಅವಧಿಯನ್ನು 31-12-2022 ರ ವರೆಗೆ ನಿಗದಿಪಡಿಸಿದ್ದು ಈ ಅವಧಿಯಲ್ಲಿ ಅರ್ಹವಿರುವ ಎಲ್ಲಾ ಸದರಿಯನ್ನು ನೋಂದಾಯಿಸಲು ಸಾಧ್ಯವಾಗಿರುವುದಿಲ್ಲವೆಂದು ಹಾಗೂ ಅನೇಕ ಸಹಕಾರ ಸಂಘಗಳ ಸದಸ್ಯರು, ಸಹಕಾರಿಗಳು ಹಾಗೂ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಮಾನ್ಯ ಶಾಸಕರುಗಳು ನೋಂದಣಿ ಅವಧಿಯನ್ನು ವಿಸ್ತರಿಸುವಂತೆ, ಕೋರಿರುವುದಾಗಿ ತಿಳಿಸಿರುತ್ತಾರೆ. ಮುಂದುವರೆದು, ಯೋಜನೆಗೆ ನಿಗದಿಪಡಿಸಿರುವ ೩೦ ಲಕ್ಷಗಳ ನೋಂದಣಿ ಗುರಿಯನ್ನು ಸಾಧಿಸಲು ನೋಂದಣಿ ದಿನಾಂಕದ ಅವಧಿಯನ್ನು ವಿಸ್ತರಿಸುವುದು ಸಮಂಜಸವೆಂದು ತಿಳಿಸುತ್ತಾ ಸದಸ್ಯತ್ವ ನೋಂದಣಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ. 

PS_107_ರೈತ ಮಕ್ಕಳಿಗೆ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಹಾಗೂ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ವಿಸ್ತರಣೆ ।।

ಪ್ರಸ್ತಾವನೆಯಳ್ಳಿ ತಿಳಿಸಿರುವ ಆದೇಶ: 

ಸರ್ಕಾರದ ಆದೇಶ ಸಂಖ್ಯೆ:154 (1) ಸಿಎಲ್ಎಸ್ 2022, ದಿನಾಂಕ:02-01-2023 

     2022-23 ನೇ ಸಾಲಿಗೆ ಸಹಕಾರಿಗಳ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಹೊಸ ಸದಸ್ಯರನ್ನು ನೋಂದಾಯಿಸುವ ಅವಧಿಯನ್ನು ದಿನಾಂಕ:31-01-2023 ರವರೆಗೆ ವಿಸ್ತರಿಸಿ ಆದೇಶಿಸಿದೆ.



ಪ್ರಮುಖ ವಿಡಿಯೋ ಗಳು 

1)PS_127_ಬಸವ ವಸತಿ ಯೋಜನೆ ಯಲ್ಲಿ ಉಚಿತವಾಗಿ ಹೊಸ ಮನೆ ನಿರ್ಮಿಸಿಕೊಳ್ಳಿ ।।BASAVA VASATI YOJANE||

2)PS_148_ಮನೆಯಲ್ಲಿ ಕುಳಿತು ತಿಂಗಳಿಗೆ 10,000 ರಿಂದ 25000 ಗಳಿಸಿ SBI ನೀಡುತ್ತಿದೆ ಉದ್ಯೋಗಾವಕಾಶ || SBI OUTLET ||


3)PS_147_ಕರ್ನಾಟಕ ರಾಜ್ಯದಲ್ಲಿ "ಗ್ರಾಮ ಕಾಯಕ ಮಿತ್ರ " ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.।।GRAMA KAYAKA MITRA ||

4)PS_141_ಮನೆಯಲ್ಲೇ ಅಥವಾ ಸ್ವ ಉದ್ಯೋಗ ಮಾಡಿ ಅದೇ ಫೋಟೋ ಶಾಪ್ ಉದ್ಯೋಗ ।। PHOTO SHOP UDYOG ||





















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು