ತೋಟಗಾರಿಕೆ ಇಲಾಖೆಯಿಂದ ಶೇ. 50 ರಷ್ಟು ಸಹಾಯಧನ ನೀಡಲು ಅರ್ಜಿ ಅಹ್ವಾನ .
PS_138_ರೈತರ ಹೊಲ-ಗದ್ದೆಗಳಿಗೆ ಸೌರ್ ಚಾಲಿತ್ ಕೃಷಿ ಪಂಪ್ ಸೆಟ್ ಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.।।
ತೋಟಗಾರಿಕೆ ಇಲಾಖೆ ವತಿಯಿಂದ ವಿವಿಧ ಯೋಜನೆಗಳಡಿಯಲ್ಲಿ ರೈತರಿಗೆ ಶೇ. 50 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ .
ಹೌದು , 2022-23 , ನೇ ಶಾಲಿನ ರಾಷ್ಟೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಮಾವು , ಸೀಬೆ , ಸಪೋಟ, ಇತ್ಯಾದಿ ಹಣ್ಣಿನ ಹಾಗೂ ತರಕಾರಿ ಬೆಳೆಗಳಲ್ಲಿ ಕೊಯ್ಲೊತ್ತರ ನಷ್ಟವನ್ನು ತಡೆಗಟ್ಟಲು ಪ್ಲಾಸ್ಟಿಕ್ ಕ್ರೇಟ್ಸ್ ಗಳಿಗೆ ಶೇ. 50 ರಷ್ಟು ಸಹಾಯ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಹೆಕ್ಟೇರಿಗೆ 8750 ರೂಪಾಯಿ ಸಹಾಯಧನ ನೀಡಲಾಗುವುದು . ಗರಿಷ್ಠ 2 ಹೆಕ್ಟೇರ ಮೀರಿದಂತೇ ಜನವರಿ 13 ರೊಳಗೆ ದಾಖಲೆಗಳನ್ನು ಸಲ್ಲಿಸಿ ಸೌಲಭ್ಯ ಪಡೆಯಬಹುದು .
ರಾಜ್ಯದ ಎಲ್ಲಾ ಜಿಲ್ಲೆಯ ರೈತರು ಅರ್ಜಿ ಸಲ್ಲಿಸಬಹುದು . ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ ಸಂಪರ್ಕಿಸಿ ಅರ್ಜಿ ಪಡೆದು ಸಲ್ಲಿಸಬಹುದು . ರೈತರು ಫ್ರೂಟ್ಸ್ ತಂತ್ರಾಂಶದ್ಲಲಿ ನೋಂದಣಿ ಮಾಡಿಸಿಕೊಂಡಿರಬೇಕು , ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದು .
ತೋಟಗಾರಿಕಾ ಇಲಾಖೆ ಅನುಮೋದಿತ ಕಂಪನಿ, ಸಂಸ್ಥೆಗಳಿಂದ ಕ್ರೇಟ್ಸ್ ಖರೀದಿಸಿ ಸಹಾಯಧನವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
PS_123_ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 75 ರಿಂದ 90% ಸಬ್ಸಿಡಿಗೆ ಅರ್ಜಿ ಆಹ್ವಾನಿಸದ್ದಾರೆ.
ಸೋಲಾರ್ ಪಂಪ್ ಸೆಟ್ ಗೆ ಸಹಾಯಧನ ಪಡೆಯಲು ಅರ್ಜಿ ಅಹ್ವಾನ .
ಚಾಮರಾಜನಗರ ತೋಟಗಾರಿಕೆ ಇಲಾಖೆಯಿಂದ 2022-23 ನೇ ಸಾಲಿನ ರಾಷ್ಟೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನ ಕಾರ್ಯಕ್ರಮದಲ್ಲಿ ರೈತರಿಗೆ ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್ ಅಳವಡಿಸಿಕೊಳ್ಳಲು ಎಲ್ಲಾ ವರ್ಗದ ರೈತರಿಗೂ ಶೇ 50 ರಷ್ಟು ಸಹಾಯಧನ ನೀಡಲು ಆಹ್ವಾನಿಸಲಾಗಿದೆ.
3 ಹೆಚ್.ಪಿ ಯ ಸೋಲಾರ್ ಪಂಪ್ ಸೆಟ್ ಸಾಮರ್ಥ್ಯದ ಘಟಕ ವೆಚ್ಚ 2 ಲಕ್ಷ ರೂಪಾಯಿಗಳಿಗಾದಿದ್ದು ಶೇ 50 ರಂತೆ 1 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು. 5 ಹೆಚ್.ಪಿ ಹಾಗೂ ಮೇಲ್ಪಟ್ಟ ಸೋಲಾರ್ ಪಂಪ್ ಸೆಟ್ ಗಳಿಗೆ ಘಟಕ ವೆಚ್ಚ 3 ಲಕ್ಷ ರೂಪಾಯಿಗಳಿಗೆ ಶೇ 50 ರಂತೆ 1.50 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು.
ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್ ಗಳನ್ನು ತೋಟಗಳಲ್ಲಿ ನಿರ್ಮಿಸಿರುವ ನೀರು ಸಂಗ್ರಹಣಾ ಘಟಕ ಅಥವಾ ಕೊಳವೆ ಬಾವಿಗಳಿಗೆ ಅಳವಡಿಸಬಹುದಾಗಿದ್ದು, ನೀರು ಸಂಗ್ರಹಣಾ ಘಟಕಕ್ಕೆ ಅಳವಡಿಸಿದ ರೈತರಿಗೆ ಆದ್ಯತೆ ನೀಡಲಾಗುವುದು.
ರೈತರಿಗೆ ಸಹಾಯಧನ ಪಾವತಿಸುವ ಮುನ್ನ ಕರ್ನಾಟಕ ನವೀಕರಿಬಹುದಾದ ಇಂಧನದ ಅಭಿವೃದ್ಧಿ ನಿಯಮಿತ ಇಲಾಖೆಯಿಂದ ಹಾಗೂ ಇತರೆ ಇಲಾಖೆಗಳಿಂದ ಸೌರಶಕ್ತಿ ಆಧಾರಿತ ಪಂಪ್ ಸೆಟ್ ಗಳಿಗೆ ಸಹಾಯಧನ ಪಡೆದಿರುವುದಿಲ್ಲ ಎಂಬ ಬಗ್ಗೆ ದೃಢೀಕರಣ ಸಲ್ಲಿಸಬೇಕು.
ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್ ಗಳನ್ನೂ ಸರ್ಕಾರದ ಇಂಧನ ಇಲಾಖೆ ಅಧಿಕೃತವಾಗಿ ನೋಂದಾಯಿಸಿದ ಕಂಪನಿಗಳಿಂದ ರೈತರೇ ನೇರವಾಗಿ ಖರೀದಿಸಬೇಕು. ಘಟಕ ಅನುಷ್ಠಾನ ಪೂರ್ವ ಕಾರ್ಯಾದೇಶ ಪಡೆಯುವುದು ಕಡ್ಡಾಯವಾಗಿದೆ. ಆಸಕ್ತ ರೈತರು ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :
ತೋಟಗಾರಿಕೆ ಇಲಾಖೆಯಿಂದ ಸೌಲಭ್ಯ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಜಾತಿ ಪ್ರಮಾಣ ಪತ್ರ ಇರಬೇಕು. ಜಾತಿ ಪ್ರಮಾಣ ಪತ್ರ ಇರಬೇಕು. ಬ್ಯಾಂಕ್ ಪಾಸ್ ಬುಕ್ ಪ್ರತಿ ಇರಬೇಕು. ಜಮೀನಿನ ಪಹಣಿ ಇರಬೇಕು. ಇದರೊಂದಿಗೆ ಅಗತ್ಯ ದಾಖಲೆಗಳನ್ನು ತೋಟಗಾರಿಕೆ ಇಲಾಖೆಯಲ್ಲಿ ಸಲ್ಲಿಸಿ ಸೌಲಭ್ಯ ಪಡೆಯಬೇಕು.
2)PS_148_ಮನೆಯಲ್ಲಿ ಕುಳಿತು ತಿಂಗಳಿಗೆ 10,000 ರಿಂದ 25000 ಗಳಿಸಿ SBI ನೀಡುತ್ತಿದೆ ಉದ್ಯೋಗಾವಕಾಶ || SBI OUTLET ||
3)PS_147_ಕರ್ನಾಟಕ ರಾಜ್ಯದಲ್ಲಿ "ಗ್ರಾಮ ಕಾಯಕ ಮಿತ್ರ " ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.।।GRAMA KAYAKA MITRA ||
4)PS_141_ಮನೆಯಲ್ಲೇ ಅಥವಾ ಸ್ವ ಉದ್ಯೋಗ ಮಾಡಿ ಅದೇ ಫೋಟೋ ಶಾಪ್ ಉದ್ಯೋಗ ।। PHOTO SHOP UDYOG ||