ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆ" 2023 ಯೋಜನೆ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆ" 2023 ಯೋಜನೆ


PS_147_ಕರ್ನಾಟಕ ರಾಜ್ಯದಲ್ಲಿ "ಗ್ರಾಮ ಕಾಯಕ ಮಿತ್ರ " ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.।।GRAMA KAYAKA MITRA ||

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆ" 2023 ಯೋಜನೆಯು ಹೊಸ ಸ್ವ-ಉದ್ಯೋಗ ಉದ್ಯಮಗಳು/ಯೋಜನೆಗಳು/ಸೂಕ್ಷ್ಮ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಒದಗಿಸುವ ಉದ್ದೇಶ ಹೊಂದಿರುತ್ತದೆ. ಅಲ್ಲದೆ,ಎಲ್ಲ ವಿಭಾಗಗಳ ಸಾಂಪ್ರದಾಯಿಕ ಮತ್ತು ಅಪೇಕ್ಷಿತ ಕುಶಲಕರ್ಮಿಗಳು  ಮತ್ತು  ಗ್ರಾಮೀಣ ಹಾಗೂ ನಗರ ಪ್ರದೇಶದ ನಿರುದ್ಯೋಗಿ ಯುವಕರಿಗೆ ನಿರಂತರವಾದ ಮತ್ತು ಸುಸ್ಥಿರವಾದ ಉದ್ಯೋಗವಕಾಶವನ್ನು ಕಲ್ಪಿಸುವ ಗುರಿ ಹೊಂದಿರುತ್ತದೆ.ಇದರಿಂದಾಗಿ, ಗ್ರಾಮೀಣ ಭಾಗದ ಯುವಕರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಬರುವುದನ್ನು ತಡೆಯಬಹುದಾಗಿದೆ. ಜೊತೆಗೆ ಕುಶಲಕರ್ಮಿಗಳ ಕೂಲಿ ಗಳಿಸುವ ಸಾಮರ್ಥ್ಯವನ್ನು ವೃದ್ಧಿಸಿ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಉದ್ಯೋಗ ಮಟ್ಟವನ್ನು ಹೆಚ್ಚಿಸುತ್ತದೆ.

        ಈ ಯೋಜನೆಯನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ(KVIC)ವು ರಾಷ್ಟ್ರ ಮಟ್ಟದ ನೋಡಲ್ ಏಜೆನ್ಸಿಗಾಗಿ ಅನುಷ್ಠಾನಗೊಳಿಸುತ್ತಿದೆ.ರಾಜ್ಯ ಮಟ್ಟದಲ್ಲಿ ಈ ಯೋಜನೆಯು ಕೆವಿಐಸಿ ನಿರ್ದೇಶನಾಲಯಗಳು, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗಳು,ಜಿಲ್ಲಾ ಕೈಗಾರಿಕಾ ಕೇಂದ್ರಗಳು ಮತ್ತು ಬ್ಯಾಂಕಗಳು ಅನುಷ್ಠಾನಗೊಳಿಸುತ್ತಿವೆ . ಹೊಸ ಯೋಜನೆಗಳು ಮಾತ್ರ ಪ್ರಧಾನ ಮಂತ್ರಿಯವರ ಉದ್ಯೋಗ ಸೃಜನೆ ಯೋಜನೆಯಡಿ ಮಂಜೂರಾತಿಗಾಗಿ ಪರಿಗಣಿಸಲಾಗುತ್ತದೆ.

ಉತ್ಪಾದಕ ವಲಯದ ಘಟಕಗಳಾಗಿದ್ದಲ್ಲಿ,ರೂ ೨೫ ಲಕ್ಷಗಳು. ಸೇವಾ/ವ್ಯಾಪಾರ ವಲಯದ ಘಟಕಗಳಾಗಿದ್ದಲ್ಲಿ ರೂ 10 ಲಕ್ಷಗಳು ಸಲ ಸೌಲಭ್ಯವನ್ನು  ಪಡೆಯಬಹುದಾಗಿದೆ. ಪಿಎಂಐಜಿಪಿ ಯಡಿ ಸಬ್ಸಿಡಿ (% ಯೋಜನಾ ವೆಚ್ಚ): ಸಾಮಾನ್ಯ ಸೌಲಭ್ಯವನ್ನು ವರ್ಗ-15% (ನಗರ) 25% (ಗ್ರಾಮೀಣ): ವಿಶೇಷ ವರ್ಗ (ಪ.ಜಾ/ಪ.ಪಂ/ಹಿಂದುಳಿದ ವರ್ಗ/ಅಲ್ಪ ಸಂಖ್ಯಾತ/ಮಹಿಳೆ/ಮಾಜಿ ಸೈನಿಕ/ವಿಕಲ ಚೇತನ, ಈಶಾನ್ಯ ರಾಜ್ಯಗಳು, ಬೆಟ್ಟ ಗುಡ್ಡಗಾಡು ಪಫ್ರ್ದೇಶಗಳು: 25% (ನಗರ) 25%(ಗ್ರಾಮೀಣ) 18 ವರ್ಷ ಮೇಲ್ಪಟ್ಟ ವಯಸ್ಕರು (ಉತ್ಪಾದಕ ವಲಯ ರೂ 10 ಲಕ್ಷಗಳು ಮತ್ತು ಸೇವಾ ವಲಯಕ್ಕೆ,ರೂ 5 ಲಕ್ಷಗಳ ಮೇಲ್ಪಟ್ಟ ವೆಚ್ಚದ ಯೋಜನೆಗಳಿಗೆ), ಸ್ವ-ಸಹಾಯ ಸಂಘಗಳು, ಸಂಘಗಳ ನೋಂದಾವಣಿ ಕಾಯ್ದೆ, 1860 ರಡಿ ನೊಂದವನಿಗೊಂಡ ಸಂಘ-ಸಂಸ್ಥೆಗಳು ಉತ್ಪಾದಕ ಸಹಕಾರ ಸಂಘಗಳು, ಧಾರ್ಮಿಕ ಟ್ರಸ್ಟ್ ಗಳು ಕೂಡ ಅರ್ಹರಾಗಿರುತ್ತಾರೆ.

        ಆದ್ದರಿಂದ ಗ್ರಾಮ ಒನ್ ಕೇಂದ್ರಗಲ್ ಮೂಲಕ "ಪ್ರಧಾನ ಮಂತ್ರಿಯವರ ಸ್ವ-ಉದ್ಯೋಗ ಸೃಜನೆ" 2023 ಅಡಿಯಲ್ಲಿ, ಯುವಕರು ಕೈಗೆತ್ತಿಕೊಳ್ಳಬಹುದಾದ ಸ್ವಯಂ ಉದ್ಯೋಗದ ಯೋಜನೆಗಳನ್ನು ನೋಂದಾಯಿಸಲು ಗ್ರಾಮ ಮಟ್ಟದಲ್ಲಿ/ಸ್ಥಳೀಯ ಸಂಸ್ಥೆಗಳು/ಪುರಸಭೆ/ನಗರ ಸಭೆ ವ್ಯಾಪ್ತಿಯಲ್ಲಿ ಯುವಕರಿಗೆ ಕಾರ್ಯಾಗಾರವನ್ನು ಆಯೋಜಿಸಲು ಕೋರಿದೆ.



ಸರ್ಕಾರದ ಯೋಜನೆಗಳು :

ಪ್ರಧಾನ ಮಂತ್ರಿಯವರ ಉದ್ಯೋಗ ಸೃಜನೆ ಯೋಜನೆ (PMEGP): 

• ಈ ಯೋಜನೆಯು ಹೊಸ ಸ್ವ-ಉದ್ಯೋಗ ಉದ್ಯಮಗಳು/ಯೋಜನೆಗಳು/ಸೂಕ್ಷ್ಮ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಒದಗಿಸುವ ಉದ್ದೇಶ ಹೊಂದಿರುತ್ತದೆ. ಅಲ್ಲದೆ, ಎಲ್ಲ ವಿಭಾಗಗಳ ಸಾಂಪ್ರದಾಯಿಕ ಮತ್ತು ಅಪೇಕ್ಷಿತ ಕುಶಲಕರ್ಮಿಗಳು ಮತ್ತು ಗ್ರಾಮೀಣ ನಗರ ಪ್ರದೇಶದ ನಿರುದ್ಯೋಗಿ ಯುವಕರಿಗೆ ನಿರಂತರವಾದ ಮತ್ತು ಸುಸ್ಥಿರವದ ಉದ್ಯೋಗಾವಕಾಶವನ್ನು ಕಲ್ಪಿಸುವ ಗುರಿ ಹೊಂದಿರುತ್ತದೆ. ಇದರಿಂದಾಗಿ ಗ್ರಾಮೀಣ ಭಾಗದ ಯುವಕರು ಉದ್ಯೋಗ ಅರಸಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಉದ್ಯೋಗ ಮಟ್ಟವನ್ನು ಹೆಚ್ಚಿಸುತ್ತದೆ.

• ಈ ಯೋಜನೆಯನ್ನು ಖಾದಿ ಮತ್ತು  ಗ್ರಾಮೋದ್ಯೋಗ ಆಯೋಗವು ರಾಷ್ಟ್ರ ಮಟ್ಟದ ನೋಡಲ್ ಏಜೆನ್ಸಿಗಾಗಿ ಅನುಷ್ಠಾನಗೊಳಿಸುತ್ತಿದೆ. ರಾಜ್ಯಮಟ್ಟದಲ್ಲಿ ಈ ಯೋಜನೆಯು KVIC ನಿರ್ದೇಶನಾಲಯಗಳು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗಳು, ಜಿಲ್ಲಾ ಕೈಗಾರಿಕಾ ಕೇಂದ್ರಗಳು, ಮತ್ತು ಬ್ಯಾಂಕಗಳು ಅನುಷ್ಠಾನಗೊಳಿಸುತ್ತಿವೇ. ಹೊಸ ಯೋಜನೆಗಳು ಮಾತ್ರ ಪ್ರಧಾನ ಮಂತ್ರಿಯವರ ಉದ್ಯೋಗ ಸೃಜನೆ ಯೋಜನೆಯಡಿ ಮಂಜೂರಾತಿಗಾಗಿ ಪರಿಗಣಿಸಲಾಗುತ್ತಿದೆ.

ನೆರವಿನ ಸ್ವರೂಪ :  ಯೋಜನೆಯ ಗರಿಷ್ಟ ವೆಚ್ಚ :ಉತ್ಪಾದಕ ವಲಯದ ಘಟಕಗಳಾಗಿದ್ದಲ್ಲಿ, ರೂ 25ಲಕ್ಷಗಳು. ಸೇವಾ/ವ್ಯಾಪಾರ ವಲಯದ ಘಟಕಗಳಾಗಿದ್ದಲ್ಲಿ ರೂ 10 ಲಕ್ಷಗಳು.

• PMEGP ಯಡಿ ಸಬ್ಸಿಡಿ,(% ಯೋಜನಾ ವೆಚ್ಚ): ಸಾಮಾನ್ಯ ವರ್ಗ-15% (ನಗರ), 25% (ಗ್ರಾಮೀಣ); ವಿಶೇಷ ವರ್ಗ (ಪ.ಜಾ/ಪ.ಪಂ/ಹಿಂದುಳಿದ ವರ್ಗ/ಅಲ್ಪ ಸಂಖ್ಯಾತ/ಮಹಿಳೆ/ಮಾಜಿ ಸೈನಿಕ/ವಿಕಲ ಚೇತನ, ಈಶಾನ್ಯ ರಾಜ್ಯಗಳು, ಬೆಟ್ಟ , ಗುಡ್ಡಗಂಡುಪ್ರದೇಶಗಳು: 25% (ನಗರ), 25% (ಗ್ರಾಮೀಣ).

ಅರ್ಜಿ ಸಲ್ಲಿಸಲು ಅರ್ಹರು : 18 ವರ್ಷ ಮೇಲ್ಪಟ್ಟ ವಯಸ್ಕರು (ಉತ್ಪಾದಕ ವಲಯ ರೂ.10 ಲಕ್ಷಗಳು ಮತ್ತು ಸೇವಾ ವಲಯಕ್ಕೆ ರೂ ೫ ಲಕ್ಷಗಳ ಮೇಲ್ಪಟ್ಟ ವೆಚ್ಚದ ಯೋಜನೆಗಳಿಗೆ), ಸ್ವ-ಶಾಯ ಸಂಘಗಳು, ಸ್ನಾಘಗಳ ನೋಂದಾವಣಿ ಕಾಯ್ದೆ , 1860 ರಾಡಿ ನೊಂದವನಿಗೊಂಡ ಸಂಘ-ಸಂಸ್ಥೆಗಳು, ಉತ್ಪಾದಕ ಸಹಕಾರ ಸಂಘಗಳು, ಧಾರ್ಮಿಕ ಟ್ರಸ್ಟಗಳು ಕೂಡ  ಅರ್ಹರಾಗಿರುತ್ತಾರೆ.


ಅರ್ಜಿ ಸಲ್ಲಿಸುವ ವಿಧಾನ:

• ಕೇವಲ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗುತ್ತದೆ. ಫಲಾನುಭವಿಗಳು https://kviconline.gov.in/pmegpeportal/pmegphonme/index.jsp ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

• ಹೊಸ ಉಪಕ್ರಮ: ಎರಡನೇ ಹಂತದ ನೆರವು ರೂ.1ಕೋಟಿಗಳ ವರೆಗೆ ಹಾಲಿ ಇರುವ ಮತ್ತು ಉತ್ತಮ ಪ್ರದರ್ಶನ ನೀಡುತ್ತಿರುವ PMEGP/MUDRA ಘಟಕಗಳ್ನನು ಮೇಲ್ದರ್ಜೆಗೇರಿಸಲು ಶೇ15 ರಷ್ಟು ಸಹಾಯಧನದೊಂದಿಗೆ.



ಉದ್ಯಮ ಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ :

ಪರಿಶಿಷ್ಠ ಜಾತಿ/ಪಂಗಡ/ಮಹಿಳೆ, ವಿಶೇಷ ಚೇತನರು, ಮಾಜಿ ಸೈನಿಕರು, ಬಡತನ ರೇಖೆಗಿಂತ ಕೆಳಗಿರುವ ಯುವಕರನ್ನೊಳಗೊಂಡಂತೆ  ಸಮಾಜದ ವಿವಿಧ ಸ್ಥರಗಳ ಯುವಕರನ್ನು ಸ್ವ-ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಅವರ ವೃತ್ತಿಯ ಒಂದು ಮುಖ್ಯ ಆಯ್ಕೆಯನ್ನಾಗಿಸಕೊಳ್ಳಲು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ, ಅಲ್ಲದೆ ಹಳಿಯಿರುವ ಎಂಎಸ್ಎಂಇಗಳ ಸಾಮರ್ಥ್ಯ ವೃದ್ಧಿಸುವುದು ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸುವುದು ಈ ಯೋಜನೆಯ ಗುರಿಯಾಗಿದೆ. 

• ನೆರವಿನ ಸ್ವರೂಪ : ಕೈಗಾರಿಕೆ ಉತ್ತೇಜಿಸುವ ಅಭಿಯಾನಗಳಿಗೆ ಸಹಾಯ ನೀಡುವುದು. ಉದ್ಯಮಶೀಲತೆ ಅರಿವು ಕಾರ್ಯಕ್ರಮಗಳು ಮತ್ತು ಉದ್ಯಮಶೀಲತೆ-ಕಂ-ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವು.

ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳಿಗೆ ಸಾಲ ಖಾತರಿ ನಿಧಿ ಟ್ರಸ್ಟ್ 

ಸೂಕ್ಷ್ಮ ಸಣ್ಣ ಮತ್ತು ಮದ್ಯಮ ಕೈಗಾರಿಕೆಗಳ ಸಚಿವಾಲಯ ಮತ್ತು ಭಾರತೀಯ ಸಣ್ಣ ಉದ್ದಿಮೆಗಳ ಅಭಿವೃದ್ಧಿ ಬ್ಯಾಂಕ್ ಜಂಟಿ ಸಹಭಾಗಿತ್ವದಲ್ಲಿ ಸೂಕ್ಷ್ಮ  ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತರಿ ನೀಡಲು ಸೂಕ್ಷ್ಮ  ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತರಿ ನಿಧಿ ಟ್ರಸ್ಟ್ ಅನ್ನು ಸ್ಥಾಪಿಸಲಾಗಿರುತ್ತದೆ. CGTMSE ನಿಧಿಗೆ  ಭಾರತ ಸರ್ಕಾರ ಮತ್ತು SIDBI ಬಂಡವಾಳ ನೀಡುತ್ತದೆ. ಯಾವುದೇ ಮೇಲಾಧಾರವಿಲ್ಲದೆ 2 ಕೋಟಿಗಳ ವರೆಗೂ ಸಾಲ ಸೌಲಭ್ಯ ನೀಡಲಾಗುತ್ತದೆ. 



ಅರ್ಹತೆ :  ಹಾಲಿಯಿರುವ ಸೂಕ್ಷ್ಮ ಮತ್ತು ಸಣ್ಣ ಉದ್ದಿಮೆಗಳು. 














ಪ್ರಮುಖ ವಿಡಿಯೋ ಗಳು 

1)PS_127_ಬಸವ ವಸತಿ ಯೋಜನೆ ಯಲ್ಲಿ ಉಚಿತವಾಗಿ ಹೊಸ ಮನೆ ನಿರ್ಮಿಸಿಕೊಳ್ಳಿ ।।BASAVA VASATI YOJANE||

2)PS_148_ಮನೆಯಲ್ಲಿ ಕುಳಿತು ತಿಂಗಳಿಗೆ 10,000 ರಿಂದ 25000 ಗಳಿಸಿ SBI ನೀಡುತ್ತಿದೆ ಉದ್ಯೋಗಾವಕಾಶ || SBI OUTLET ||


3)PS_147_ಕರ್ನಾಟಕ ರಾಜ್ಯದಲ್ಲಿ "ಗ್ರಾಮ ಕಾಯಕ ಮಿತ್ರ " ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.।।GRAMA KAYAKA MITRA ||

4)PS_141_ಮನೆಯಲ್ಲೇ ಅಥವಾ ಸ್ವ ಉದ್ಯೋಗ ಮಾಡಿ ಅದೇ ಫೋಟೋ ಶಾಪ್ ಉದ್ಯೋಗ ।। PHOTO SHOP UDYOG ||















ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು