ಕೃಷಿಗೆ ಬಜೆಟ್ ನಲ್ಲಿ ಸಿಕ್ಕಿದ್ದು ಏನು? ರೈತರಿಗೆ ಭರ್ಜರಿ ಸಿಹಿ ಸುದ್ದಿ, 10 ಅದ್ಭುತ ಘೋಷಣೆಗಳು

ಕೃಷಿಗೆ ಬಜೆಟ್ ನಲ್ಲಿ ಸಿಕ್ಕಿದ್ದು ಏನು? ರೈತರಿಗೆ ಭರ್ಜರಿ ಸಿಹಿ ಸುದ್ದಿ, 10 ಅದ್ಭುತ ಘೋಷಣೆಗಳು 

                

ರೈತರಿಗೆ ಸಂತಸದ ಸುದ್ದಿ, ಈ ಬಾರಿ ಬಜೆಟ್ ನಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ಶುಭ ಸುದ್ದಿ ನೀಡಿದೆ. ಹಾಗೆಯೆ ರೈತರಿಗೆ ಕೃಷಿಯಲ್ಲಿ ಬೇಕಾಗುವಂತಹ ಎಲ್ಲಾ ಅನುಕೂಲವನ್ನು ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ  ಸೀತಾರಾಮನ್ ಅವರು ಫೆಬ್ರುವರಿ 1-2023 ಬಜೆಟ್ ಘೋಷಣೆಯನ್ನು ಮಾಡಿದ್ದಾರೆ.ಬಜೆಟ್ ಘೋಷಣೆಯಲ್ಲಿ ಅದ್ಭುತ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ.ಈ ಬಜೆಟ್ ಘೋಷಣೆಯ ಪ್ರಮುಖ ಎಲ್ಲಾ ಅಂಶಗಳನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ.


ಬಜೆಟ್ 10 ಘೋಷಣೆ ಪ್ರಮುಖ ಅಂಶಗಳು 2023:

1. ಮೊದಲು ರೈತರ ಸಮಸ್ಯೆ ಬಗೆಹರಿಸಲು ಕೃಷಿ ಆಧಾರಿತ ಸೌಲಭ್ಯಗಳನ್ನು ಸ್ಮಾರ್ಟ್ ಫೋನ್ ಗಳನ್ನು ಕೊಡಲಾಗುತ್ತದೆ. ಅದಕ್ಕೆ ಅನುದಾನವನ್ನು ಕೊಡಲಾಗುತ್ತದೆ.ಎಂದು ಹೇಳಾಗುತ್ತದೆ.

2. ವಸತಿ ಕುಡಿಯುವ ನೀರು,ವಿದ್ಯುತ್ ಮತ್ತು ರಸ್ತೆ ಅಭಿವೃದ್ಧಿಗೆ ಅನುದಾನವನ್ನು ಹೂಡಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

3. ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹಧನವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

4. ದೇಶದ ರೈತರಿಗೆ 20 ಲಕ್ಷ ಕೋಟಿ  ರೂಪಾಯಿ ಸಾಲ ಸೌಲಭ್ಯವನ್ನು  ನೀಡಲಾಗುವುದು ಎಂದು 3% ಬಡ್ಡಿದರ ದಲ್ಲಿ ಸಾಲ ಸಿಗಲಿದೆ ಎಂದು ಘೋಷಿಸಲಾಗಿದೆ.

5. ದೇಶದಲ್ಲಿ ಕೃಷಿಯ ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮೀನುಗಾರಿಕೆ 6 ಸಾವಿರ ಕೋಟಿ ವೆಚ್ಚ ಹೂಡಿಕೆಮಾಡಲಾಗುವುದು ಎಂದು ತಿಳಿಸಿದ್ದಾರೆ. ರೈತರನ್ನು ಒಳಗೊಂಡು ದೇಶದಲ್ಲಿ 63 ಸಾವಿರಕ್ಕೂ ಹೆಚ್ಚು ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಲಾಗುವುದು. 



6. ಕರ್ನಾಟಕ ಮತ್ತು ಉತ್ತರ ಕರ್ನಾಟಕ ರೈತರಿಗೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಸಾವಿರ ಕೋಟಿ ಹಣವನ್ನು ನೀಡಲು ನಿರ್ಧರಿದೆ. 

7. ಗ್ರಾಮೀಣ ಭಾಗದಲ್ಲಿ ಇರುವ ಕುಶಲ ಕರ್ಮಿಕರಿಗೆ ಕೌಶಲ್ಯ ಸಮ್ಮಾನ್ ಯೋಜನೆಯನ್ನು ಜಾರಿಗೆ ಮಾಡಲಾಗಿದೆ.

8. ಜಾಮೀನು ಹಣವನ್ನು ಕಟ್ಟಲಾಗದ ಬಡವರಿಗೆ ಕೇಂದ್ರ ಸರ್ಕಾರದಿಂದ ಸಹಾಯ ಮಾಡಲಾಗಿದೆ. ಜೈವಿಕ ಗೊಬ್ಬರವನ್ನು ಮಾಡಲು ಗೋವರ್ಧನ್ ಯೋಜನೆಯನ್ನು ಮಾಡಲಾಗಿದೆ. ಇದರ ಜೊತೆಗೆ 1 ಕೋಟಿ ರೈತರಿಗೆ ಸಾವಯವ ಕೃಷಿಗೆ ಉತ್ತೇಜನ ನೀಡಲು ಪ್ರೋತ್ಸಾಹವನ್ನು ನೀಡಲು ಹಣಕಾಸು ಸಚಿವೆ ತಿಳಿಸಿದ್ದಾರೆ.

9.ಬಿಪಿಎಲ್ ಪಡಿತರ ಕಾರ್ಡ್ ಹೊಂದಿದವರಿಗೆ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಧಾನ್ಯವನ್ನು ಮುಂದಿನ ವರ್ಷದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಬರುವ ವರ್ಷದಲ್ಲಿ 11 ಕೋಟಿ 40 ಲಕ್ಷ ಜನರಿಗೆ, 2.2 ಲಕ್ಷ ಕೋಟಿ ಹಣವನ್ನು ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಮೀಸಲು ನೀಡಲಾಗಿದೆ ಎಂದು ತಿಳಿಸಿದ್ದಾರೆ.

10. ಉಜ್ವಲ ಯೋಜನೆಯಲ್ಲಿ 9.6 ಕೋಟಿ ಗ್ಯಾಸ್ ಸಂಪರ್ಕವನ್ನು ಪ್ರತಿ ಮನೆಗಳಿಗೆ ಕಲ್ಪಿಸಲಾಗುವುದು. ಹಾಗೆಯೆ 7 ಲಕ್ಷ ರೂಪಾಯಿ ಆದಾಯ ತೆರಿಗೆಯನ್ನುಪಾವತಿ ಮಾಡುವಂತಿಲ್ಲ.ಆದಾಯ ತೆರಿಗೆ ಪಾವತಿದಾರರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು.ಕೇಂದ್ರ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.


ಪ್ರಮುಖ ವಿವರಗಳು :

ಸಂಸ್ಥೆಯ ಹೆಸರು                             

     ↣   ಕೇಂದ್ರ ಸರ್ಕಾರ

ಕೇಂದ್ರ ಬಜೆಟ್                                  

     ↣    ಪ್ರಮುಖ ಘೋಷಣೆಗಳು 

ಬಜೆಟ್ ಘೋಷಣೆಯ ದಿನಾಂಕ        

     ↣    01-02-2023

ಘೋಷಿಸಿದವರು                                

     ↣     ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 







ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು