ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕೂಡಲೇ ಅಪ್ಲೈ ಮಾಡಿ.

 ರಾಜ್ಯದ ಎಲ್ಲಾ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕೂಡಲೇ ಅಪ್ಲೈ ಮಾಡಿ. 

ಕರ್ನಾಟಕ ಸರ್ಕಾರವು ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ಪ್ರಾರಂಭಿಸಿದೆ. ಹಿಂದುಳಿದ ವರ್ಗ ದೇವರಾಜು ಅರಸು ಅಭಿವೃದ್ಧಿ ನಿಗಮದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಮತ್ತು ಈ ಯೋಜನೆಯ ಮುಖ್ಯ ಗುರಿ ಮಹಿಳೆಯರನ್ನು ಸ್ವತಂತ್ರ ಮತ್ತು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು. ಬಡ ಮಹಿಳೆಯರು ಇದರಿಂದ ಉದ್ಯೋಗವನ್ನು ಪಡೆಯಬಹುದು. ಹಾಗೂ ಲಾಭ ಕೂಡ ಸಿಗುತ್ತದೆ. ಪ್ರತಿಯೊಬ್ಬರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಿ. ಸ್ವಂತ ಕಾಲಿನಲ್ಲಿ ನಿಲ್ಲಲು ಇದೊಂದು ಅವಕಾಶ. ಮಹಿಳೆಯರೇ ನೀವು ಸ್ವಾವಲಂಬಿಗಳಾಗಬೇಕೆಂದು ಸರ್ಕಾರ ಈ ಯೋಜನೆಯನ್ನು ಹೊರಡಿಸಿದೆ. 


ಅರ್ಹತೆಗಳು 

⭐ 20-40 ವರ್ಷದ ವಯಸ್ಸಿನ ಒಳಗಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು.

⭐ ಅರ್ಜಿದಾರರು ಕರ್ನಾಟಕದ ನಾಗರೀಕರಾಗಿರಬೇಕು ಅಥವಾ ನಿವಾಸಿಯಾಗಿರಬೇಕು.

⭐ ಕಾರ್ಮಿಕ ಬಡ ಕುಟುಂಬದ ಮಹಿಳೆಯರು ಅರ್ಜಿ ಸಲ್ಲಿಸಬಹುದು.

⭐ ಮಹಿಳೆಯರ ಕುಟುಂಬದ ಆದಾಯವು 12,000 ಸಾವಿರಕ್ಕಿಂತ ಹೆಚ್ಚಿರಬಾರದು.ಇವರು ಸಹ ಪ್ರಯೋಜನ ಪಡೆಯಬಹುದು.

⭐ ದೇಶದ ವಿಧವೆ ಮತ್ತು ಅಂಗವಿಕಲ ಮಹಿಳೆಯರು ಸಹ ಈ ಯೋಜನೆಯ ಲಾಭ ಪಡೆಯಬಹುದು.

⭐ ಬಿಪಿಎಲ್ ಕಾರ್ಡ್ ಅನ್ನು ಹೊಂದಿರಬೇಕು.



ಪ್ರಮುಖ ದಾಖಲೆಗಳು 

⭐ ಅಭ್ಯರ್ಥಿಯ ಆಧಾರ್ ಕಾರ್ಡ್ 

⭐ ಆದಾಯ ಪ್ರಮಾಣ ಪತ್ರ 

⭐ ಗುರುತಿನ ಚೀಟಿ 

⭐ ಅಂಗವಿಕಲರಾಗಿದ್ದರೆ ಅಂಗವೈಕಲ್ಯ ವೈದ್ಯಕೀಯ ಪ್ರಮಾಣ ಪತ್ರ

⭐ ಮಹಿಳೆ ವಿಧವೆಯಾಗಿದ್ದರೆ, ಆಕೆಯ ನಿರ್ಗತಿಕ ವಿಧವೆ ಪ್ರಮಾಣಪತ್ರ 

⭐ ಪಾಸ್ಪೋರ್ಟ್ ಗಾತ್ರದ ಫೋಟೋ 

ಮೊಬೈಲ್ ನಂಬರ್ 

                     ಅರ್ಜಿ  ಸಲ್ಲಿಸಲು ಕೊನೆಯ ದಿನಾಂಕ:20-02-2023


ಉಚಿತ ಹೊಲಿಗೆ ಯಂತ್ರ  ಯೋಜನೆ 2023 ರ ಪ್ರಮುಖ ವಿವರಗಳು ;

ಯೋಜನೆಯ ಹೆಸರು 

 ಉಚಿತ ಹೊಲಿಗೆ ಯಂತ್ರ ಯೋಜನೆ 

ಪ್ರಕಟಿಸಿದವರು 

 ⭐ಕೇಂದ್ರ ಸರ್ಕಾರ 

ರಾಜ್ಯ 

⭐ಕರ್ನಾಟಕ

ಫಲಾನುಭವಿ 

  ⭐ಎಲ್ಲಾ ಅರ್ಹ ಮಹಿಳೆಯರು 

ಅರ್ಜಿದಾರರು ವಯಸ್ಸು 

 ⭐20 ರಿಂದ 40 ವರ್ಷಗಳು 

ಯೋಜನೆಯ ಉದ್ದೇಶ 

⭐ಮಹಿಳೆಯರನ್ನು ಸ್ವಾವಲಂಭಿ ಮತ್ತು ಆರ್ಥಿಕವಾಗಿ ಸಬಲರನ್ನಾಗಿಸಲು 

ಪ್ರಯೋಜನೆಗಳು 

 ⭐ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ.

ನೋಂದಣಿ ಪ್ರಕ್ರಿಯೆ 

 ⭐ ಆನ್ಲೈನ್ ಮೂಲಕ 


ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ :

1. ಮೊದಲು ಉಚಿತ ಹೊಲಿಗೆ ಯಂತ್ರ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

2. ಹೊಲಿಗೆ ಯಂತ್ರಗಳ ಉಚಿತ ಪೂರೈಕೆಗಾಗಿ ಅರ್ಜಿ ನಮುನೆ ಲಿಂಕ್ ಅನ್ನು ಕ್ಲಿಕ್ ಮಾಡಿ.

3.ಈಗ ಪಿಡಿಎಫ್ ರೂಪದಲ್ಲಿ ಪರದೆಯ ಮೇಲೆ ಅಪ್ಲಿಕೇಶನ್ ಫಾರ್ಮ್ ಪುಟವನ್ನು ಪ್ರದರ್ಶಿಸಲಾಗುತ್ತದೆ.ಮತ್ತು ಅದರ ಮುದ್ರಣವನ್ನು ತೆಗೆದುಕೊಳ್ಳಿ.

4. ಅಗತ್ಯವಿರುವ ವಿವರಗಳನ್ನು ನಮೂದಿಸಿ (ಹೆಸರು,ತಂದೆ/ಪತಿ ಹೆಸರು,ಜನ್ಮ ದಿನಾಂಕ ಮತ್ತು ಇತರ ಮಾಹಿತಿಯಂತಹ ಎಲ್ಲಾ ವಿವರಗಳನ್ನು ನಮೂದಿಸಿ ).

5.ಎಲ್ಲಾ ಮಾಹಿತಿಯನ್ನು ಭಾರ್ತಿ ಮಡಿದ ನಂತರ ನಿಮ್ಮ ಅರ್ಜಿ ನಮೂನೆಯೊಂದಿಗೆ ಫೋಟೋಕಾಪಿಯನ್ನು ಲಗತ್ತಿಸುವ ಮೂಲಕ ನಿಮ್ಮ ಎಲ್ಲಾ ದಾಖಲೆಗಳನ್ನು ನಿಮ್ಮ ಆಯಾ ಕಚೇರಿಗೆ ಲಗತ್ತಿಸಬೇಕು.

6. ಅಂತಿಮವಾಗಿ ನಿಮ್ಮ ಅರ್ಜಿ ನಮೂನೆಯನ್ನು ಕಚೇರಿ ಅಧಿಕಾರಿ ಪರಿಶೀಲಿಸುತ್ತಾರೆ.ಅಂತಿಮವಾಗಿ ನಿಮಗೆ ಉಚಿತ ಹೊಲಿಗೆ ಯಂತ್ರವನ್ನು ನೀಡಲಾಗುವುದು.






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು