ಕರ್ನಾಟಕ ಸರ್ಕಾರದಿಂದ "ಗೃಹಿಣಿ ಶಕ್ತಿ ಯೋಜನೆ" : ಮಹಿಳೆಯರಿಗಾಗಿ ಭರ್ಜರಿ 500 ರೂ ಪ್ರತಿ ತಿಂಗಳ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಕರ್ನಾಟಕ ಸರ್ಕಾರದಿಂದ "ಗೃಹಿಣಿ ಶಕ್ತಿ ಯೋಜನೆ" :


ಮಹಿಳೆಯರಿಗಾಗಿ ಭರ್ಜರಿ 500 ರೂ ಪ್ರತಿ ತಿಂಗಳ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.


'ಗೃಹಿಣಿ ಶಕ್ತಿ'ಗೆ ರೂ 500 ನೆರವು :

ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ 'ಗೃಹಿಣಿ ಶಕ್ತಿ' ಯೋಜನೆ ಘೋಷಿಸಿದ್ದು, ಇದರಡಿ ಭೂಮಿರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂ ಸಹಾಯ ಧನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ ನೀಡುವುದಾಗಿ ಈಗಾಗಲೇ ಘೋಷಿಸಿರುವುದನ್ನು ಸ್ಮರಿಸಬಹುದು. ಇದೀಗ ರಾಜ್ಯ ಸರಕಾರ ಕೂಡ ಇದೆ ಮಾದರಿ ಯೋಜನೆ ಘಿಶಿಸಿದೆ. 

                 ಗೃಹಿಣಿಯರಿಗೆ ಮನೆಯಲ್ಲೇ ಲಾಭದಾಯಕ ಉದ್ಯಮ ಪ್ರಾರಂಭಿಸಲು ಅನುವಾಗುವಂತೆ ಈ ವರ್ಷದಲ್ಲಿ ಒಂದು ಲಕ್ಷ ಮಹಿಳೆಯರಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ನಿರ್ಧರಿಸಿದೆ.
ಅಂಗನವಾಡಿಯಲ್ಲಿ ಮಹಿಳೆಯರಿಗೆ ಬಿಸಿಯೂಟ : ಮಹಿಳೆಯರಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಯಲು ಅರೋಗ್ಯ ಉಷ್ಟಿ ಯೋಜನೆಯಡಿ 'ಮಾತೃಪೂರ್ಣ' ಯೋಜನೆಯಂತೆ ಅರ್ಹ ವಿವಾಹಿತ ಮಹಿಳೆಯರಿಗೆ  ಅಂಗನವಾಡಿಗಳಲ್ಲಿ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮತ್ತು ಪ್ರೊಫಿಲ್ಯಾಕ್ಟಿಕ್ ಐ.ಎಫ್.ಐ ಮಾತ್ರೆಯನ್ನು ಗರಿಷ್ಟ 6 ತಿಂಗಳ ಅವಧಿಯಲ್ಲಿ ಒಂದು ಬಾರಿ ನೀಡುವುದಾಗಿ ಸರಕಾರ ಘೋಷಿಸಿದೆ.

ಗೃಹಿಣಿಯರಿಗೆ ಶಕ್ತಿ, ಶ್ರಮಕ್ಕೆ ಬೆಲೆ :

              ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ವಿಭಜಿಸಿ, ಮಕ್ಕಳ ಪೌಷ್ಟಿಕತೆ ಕುರಿತು ಪ್ರತ್ಯೇಕ ಇಲಾಖೆ ಮತ್ತು ಮಹಿಳಾ ಸಬಲೀಕರಣ ಇಲಾಖೆಯನ್ನು ರೂಪಿಸಲು ಸರ್ಕಾರ ನಿರ್ಧರಿಸಿದೆ. ಮಹಿಳೆಯರ ಸಬಲೀಕರಣ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸದಾಗಿ ಗೃಹಿಣಿ ಶಕ್ತಿ ಯೋಜನೆ ಅನುಷ್ಠಾನಿಸಲಿದ್ದು, ಇದರಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಶ್ರಮ ಶಕ್ತಿ ಯೋಜನೆ ಘೋಷಿಸಿದ್ದು, ಪ್ರತಿ ತಿಂಗಳು ತಲಾ 500 ರೂಗಳ ಸಹಾಯಧನ ಡಿಬಿಟಿ ಮೂಲಕ ನೀಡಲಿದೆ. 

               ಒಂದು ಲಕ್ಷ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ಉಚಿತ ತರಬೇತಿ ನೀಡಲಾಗುತ್ತದೆ. ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಯಲು ಅರ್ಹ ವಿವಾಹಿತ ಮಹಿಳೆಯರಿಗೆ ಆರೋಗ್ಯ ಪುಷ್ಟಿ ಯೋಜನೆ ಘೋಷಿಸಲಾಗಿದೆ. ಇದರಲ್ಲಿ ಜೀವಿತಾವಧಿಯಲ್ಲಿ ಒಮ್ಮೆ ಗರಿಷ್ಟ 6 ತಿಂಗಳ ಅವಧಿಗೆ ಬಿಸಿಯೂಟ ಮತ್ತು ಮಾತ್ರೆಗಳನ್ನು ಒದಗಿಸಲಾಗುತ್ತದೆ. ರಾಜ್ಯದ ಸಂಘಟಿತ ವಲಯದಲ್ಲಿ ದುಡಿಯುವ ಮಹಿಳೆಯರಿಗೆ 1000 ಕೋಟಿ ರುಗಳಲ್ಲಿ ಉಚಿತ ಬಸ್ ಪಾಸ್ ನೀಡಲಾಗುತ್ತದೆ. 

ವಿಶಿಷ್ಟಚೇತನರಿಗೆ ಸ್ವಚೇತನ: ವಿಶಿಷ್ಟ ಚೇತನರಿಗೆ ಸ್ವಾವಲಂಬಿ ಜೀವನ ನಡೆಸಲು ಸ್ವಚೇತನ ಯೋಜನೆಯಡಿ ೫೦೦೦ ಮಂದಿ ಅರ್ಹರಿಗೆ ಯಂತ್ರಚಾಲಿತ ದ್ವಿಚಕ್ರವಾಹನಗಳನ್ನು 50 ಕೋಟಿ ರೂ ವೆಚ್ಚದಲ್ಲಿ ಒದಗಿಸಲಾಗುತ್ತದೆ. ಯಾಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ಸೌಲಭ್ಯ ಮತ್ತು ಸ್ವಯಂ ಉದ್ಯೋಗಕ್ಕಾಗಿ ಮಹಿಳಾಭಿವೃದ್ಧಿ ನಿಗಮದಿಂದ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗಾಗಿ ನಗರ ಪ್ರದೇಶದಲ್ಲಿ 4000 ಶಿಶುಪಾಲನಾ ಕೇಂದ್ರಗಳು ಮತ್ತು ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆಯ ಒಗ್ಗೂಡಿಸುವಿಕೆ ಮೂಲಕ 500 ಶಿಶುವಿಹಾರ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ.
























ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು