ಕರ್ನಾಟಕದಲ್ಲಿ Apple ಕಂಪನಿಯಲ್ಲಿ ಭಾರೀ ಉದ್ಯೋಗ ಅವಕಾಶ ಹಾಗೂ ದೇಶ್ಯಾದ್ಯಂತ ವಿವಿದೆಡೆ 19 ತಿಂಗಳಲ್ಲಿ 1 ಲಕ್ಷ ನೇರ ಉದ್ಯೋಗ ......!

ಕರ್ನಾಟಕದಲ್ಲಿ Apple ಕಂಪನಿಯಲ್ಲಿ ಭಾರೀ ಉದ್ಯೋಗ ಅವಕಾಶ ಹಾಗೂ ದೇಶ್ಯಾದ್ಯಂತ  ವಿವಿದೆಡೆ 19 ತಿಂಗಳಲ್ಲಿ 1 ಲಕ್ಷ ನೇರ ಉದ್ಯೋಗ ......!


          ಆಪಲ್ ನ 3 ವೆಂಡರ್ ಗಳು ಹಾಗೂ ವಿವಿಧ ಸರಬರಾಜುದಾರರಿಂದ ಭಾರತದಲ್ಲಿ ಕಳೆದ 19 ತಿಂಗಳಲ್ಲಿ 1 ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಿದೆ. ಹಾಗೆಯೆ 3 ಲಕ್ಷದಷ್ಟು ಪರೋಕ್ಷ ಉದ್ಯೋಗಗಳು ಆಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಐಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಕರ ಆಪಲ್ ಸಂಸ್ಥೆಯಿಂದ ಭಾರತದಲ್ಲಿ ಒಳ್ಳೆಯ ಉದ್ಯೋಗ ಸೃಷ್ಠಿಯಾಗುತ್ತಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್ ಫೋನ್ PLI ಸ್ಕೀಮ್ ಇಂಥದೊಂದು ಬೆಳವಣಿಗೆಗೆ ಕಾರಣವಾಗಿದೆ. ಆಪಲ್ ಸಂಸ್ಥೆ ತನ್ನ ಉತ್ಪನ್ನಗಳನ್ನು ತಯಾರಿಸಲು ಇತರ ಕಂಪನಿಗಳಿಗೆ ಗುತ್ತಿಗೆ ಕೊಡುತ್ತದೆ. ವಿಸ್ಟ್ರಾನ್, ಫಾಕ್ಸ್ ಕಾನ್, ಪೆಗಾಟ್ರಾನ್ ಎಂಬ ಮೂರೂ ಕಂಪನಿಗಳು ಆಪಲ್ ಉತ್ಪನ್ನಗಳನ್ನು ತಯಾರಿಸಲು ಇರುವ ವೆಂಡರ್ ಗಳಾಗಿವೆ. ವಿಸ್ಟ್ರಾನ್ ಕಂಪನಿ ಕೋಲಾರದಲ್ಲಿ ಘಟಕ ಹೊಂದಿದೆ. ಈ ಮೂರೂ ಕಂಪನಿಗಳು 60 ಸಾವಿರಕ್ಕಿಂತ ಹೆಚ್ಚು ಹೊಸ ನೇರ ಉದ್ಯೋಗ ಸೃಷ್ಟಿಗೆ ಕಾರಣವಾಗಿವೆ. ಅದರಲ್ಲಿ ಹೆಚ್ಚಿನ ಭಾಗ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆ ಆರಂಭವಾದ 2021 ಆಗಸ್ಟ್ ನಂತರ ಸೃಷ್ಠಿಯಾಗಿವೆ.

ಭಾರತದಲ್ಲಿ ಐಫೋನ್ ಗಳನ್ನು ತಯಾರಿಸುವ ಮೂರೂ ವೆಂಡರ್ ಗಳ ಪೈಕಿ ಫಾಕ್ಸ್ ಕಾನ್ ಹೋನ್ ಹಯ್ ಎಂಬ ಸಂಸ್ಥೆ 35 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದೆ. ಇದು ತಮಿಳುನಾಡಿನಲ್ಲಿ ಘಟಕ ಹೊಂದಿದೆ. ಇದೆ ತಮಿಳುನಾಡಿನಲ್ಲಿರುವ ಪೆಗಾ ಟ್ರಾನ್ ಕಂಪನಿ 14 ಸಾವಿರ ಮಂದಿಗೆ ಉದ್ಯೋಗ ನೀಡಿದೆ. ಕರ್ನಾಟಕದಲ್ಲಿರುವ ವಿಸ್ಟ್ರಾನ್ ಕಂಪನಿ 12,800 ಮಂದಿಗೆ ಉದ್ಯೋಗ ಕೊಟ್ಟಿದೆ.

ಇದರ ಜೊತೆಗೆ ಆಪಲ್ ನ ಕಾಂಪೊನೆಂಟ್, ಚಾರ್ಜರ್ ಇತ್ಯಾದಿ ಸರಬರಾಜುದಾರರಿರುವ ವ್ಯವಸ್ಥೆಯಿಂದ 40 ಸಾವಿರ ಉದ್ಯೋಗಗಳು ಸೃಷ್ಟಿಯಾಗಿವೆ. ಟಾಟಾ ಎಲೆಕ್ಟ್ರಾನಿಕ್ಸ್, ಸಾಲ್ ಕಾಂಪ್, ಅವರಿ ಫಾಕ್ಸ್ ಲಿಂಕ್, ಸನ್ ವೋಡ, ಜಿಬಿಲ್ ಮೊದಲಾದ ಕಂಪನಿಗಳು ಆಪಲ್ ನ ಇಕೋಸಿಸ್ಟಮ್ ನ ಭಾಗಗಳಾಗಿವೆ.

ಆಪಲ್ ಸರಬರಾಜುದಾರರ ಪೈಕಿ ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಸಾಲ್ ಕಾಂಪ್ ಕಂಪನಿಗಳು ಅತಿಹೆಚ್ಚು ಉದ್ಯೋಗ ನೀಡಿದೆ. 

          2020, ಅಕ್ಟೊಬರ್ 6 ರಂದು ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಸ್ಮಾರ್ಟ್ ಫೋನ್ PLI  ಸ್ಕೀಮ್ ಅಡಿಯಲ್ಲಿ ಮುಂದಿನ 5 ವರ್ಷದಲ್ಲಿ 2 ಲಕ್ಷ ನೇರ ಉದ್ಯೋಗ ಸೃಷ್ಟಿಯಾಗಬಹುದು ಎಂದು ಅಂದಾಜು ಮಾಡಲಾಗಿತ್ತು. ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿವೆ, ಇನ್ನೆರಡು ವರ್ಷದಲ್ಲಿ ಇನ್ನೂ 1 ಲಕ್ಷ ಉದ್ಯೋಗ ಸೃಷ್ಟಿಯಾದರೆ ಸರ್ಕಾರ ಇರಿಸಿದ ಗುರಿ ಈಡೇರಿದಂಡಾಗುತ್ತದೆ. 

ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಒಂದು ನೇರ ಉದ್ಯೋಗ ಇದ್ದಾರೆ ಮೂರು ಪಟ್ಟು ಪರೋಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಆ ಲೆಕ್ಕಾಚಾರದಲ್ಲಿ ಕಳೆದ 19 ತಿಂಗಳಲ್ಲಿ 1 ಲಕ್ಷ ನೇರ ಉದ್ಯೋಗ ಮತ್ತು 3 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಗೆ ಆಪಲ್ ಕಾರಣವಾಗಿದೆ. 


ರಾಜ್ಯದಲ್ಲಿ ಐಫೋನ್ ಉತ್ಪಾದನಾ ಘಟಕ :

        ತೈವಾನ್ ಮೂಲದ ಫಾಕ್ಸ್ ಕಾನ್ ಸಮೂಹದ CEO ಮತ್ತು ಅಧ್ಯಕ್ಷ ಯಂಗ್ ಲಿಯು ನೇತೃತ್ವದ ಉನ್ನತಮಟ್ಟದ ನಿಯೋಗವು ರಾಜ್ಯದಲ್ಲಿ ಐಫೋನ್ ತಯಾರಿಕಾ ಘಟಕ ಸ್ಥಾಪನೆಗಾಗಿ ಸ್ಥಳ ವೀಕ್ಷಣೆಗೆ ಆಗಮಿಸಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರ ರೆಡ್ ಕಾರ್ಪೆಟ್ ಸ್ವಾಗತ ನೀಡಿವೆ. ಐಫೋನ್ ತಯಾರಿಕೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಫಾಕ್ಸ್ ಕಾನ್ ಕಂಪನಿಯು ರಾಜ್ಯದಲ್ಲಿ ವಿಮಾನ ನಿಲ್ದಾಣದ ಸಮೀಪವೇ ಘಟಕ ತೆರೆಯುವ ಚಿಂತನೆ ನಡೆಸುತ್ತಿದೆ. ಬಿಡಿಭಾಗಗಳನ್ನು ಕೂಡ ಸ್ಥಳೀಯವಾಗಿಯೇ ಉತ್ಪಾದಿಸಿ, ಪೂರ್ಣಪ್ರಮಾಣದಲ್ಲಿ ಐಫೋನ್ ತಯಾರಿಸುವ ಘಟಕ ಇದಾಗಿರಲಿದೆ. ಇದಕ್ಕಾಗಿ ಕಂಪನಿಗೆ ದೊಡ್ಡಬಳ್ಳಾಪುರದ KIADB ಪ್ರದೇಶದಲ್ಲಿ 300 ಎಕರೆ ಜಾಗ ತೋರಿಸಲಾಗಿದೆ.











 








ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು