ಪ್ರಾಮಾಣಿಕ ಎಸ್ ಐ ಎಂದು ಗಣರಾಜ್ಯೋತ್ಸವದಂದು ಪ್ರಶಸ್ತಿ ಪಡೆದಿದ್ದಾಕೆ 5 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ಲು.
ವಾಟ್ಸ್ ಆಪ್ ಫೀಚರ್, ಒಂದೇ ಬಾರಿ 100 ಫೋಟೋ ವಿಡಿಯೋ ಕಳುಹಿಸುವ ಅವಕಾಶ
ಪ್ರಾಮಾಣಿಕ ಎಸ್ ಐ ಎಂದು ಈಕೆಗೆ ಗಣರಾಜ್ಯೋತ್ಸವದಂದು ಪ್ರಶಸ್ತಿ ನೀಡಲಾಗಿತ್ತು. ಅದರಷ್ಟೇ ಆಕೆಯೇ 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾಳೆ. ಹರಿಯಾಣದ ಭವಾನಿ ಖೇರ ಪೊಲೀಸ್ ಠಾಣೆಯ ಎಸ್ ಐ ಮುನ್ನಿದೇವಿ ಬಂಧಿತ ಆರೋಪಿ.
ಮಹಿಳೆಯೊಬ್ಬರ ಪ್ರಕರಣದಲ್ಲಿ ತನಿಖಾಧಿಕಾರಿ ಆಗಿದ್ದ ಮುನ್ನಿದೇವಿ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಳು. ಹೀಗಾಗಿ ಈ ಮಹಿಳೆ ಎಸಿಬಿ ಗೆ ದೂರು ನೀಡಿದ್ದು, ಅವರು ವಿಶೇಷ ತಂಡ ರಚಿಸಿ ರೆಡ್ ಹ್ಯಾಂಡ್ ಆಗಿ ಹಿಡಿಯಲು ಜಲ ಹೆಣೆದಿದ್ದರು.
ನ್ಯಾಷನಲ್ ಕ್ರೈಮ್ ಇನ್ ವೆಸ್ಟಿಗೇಷನ್ ಬ್ಯುರೋ ಎಂಬ ಎನ್ ಜಿ ಓ ಈ ಎಸ್ ಐ ರೆಡ್ ಹ್ಯಾಂಡ್ ಆಗಿ ಸಿಕ್ಕಿರುವ ವಿಡಿಯೋ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಇದೆ ಲೇಡಿ ಎಸ್ ಐ ಗೆ ಉತ್ತಮ ಹಾಗೂ ಪ್ರಾಮಾಣಿಕ ಕರ್ತವ್ಯ ಎಂದು ಗಣರಾಜ್ಯೋತ್ಸವದಂದು ಗೌಸವಿಸಲಾಗಿತ್ತು ಎಂಬ ಮಾಹಿತಿಯನ್ನೂ ಈ ವಿಡಿಯೋ ಜೊತೆ ಹಂಚಿಕೊಳ್ಳಲಾಗಿದೆ.
ಹೆಂಡತಿ ಬಿಟ್ಟು ಹೋದಮೇಲೆ ಅಂತೂ ಒಂದು ನಿರ್ಧಾರಕ್ಕೆ ಬಂದ ಕಿರಿಕ್ ಕೀರ್ತಿ!