ವಾಟ್ಸ್ ಆಪ್ ಫೀಚರ್, ಒಂದೇ ಬಾರಿ 100 ಫೋಟೋ ವಿಡಿಯೋ ಕಳುಹಿಸುವ ಅವಕಾಶ
ಇಂಡಿಯನ್ ಪ್ರೀಮಿಯರ್ ಲೀಗ್ ದಿನಾಂಕ 31-03-2023 ರಂದು ಪ್ರಾರಂಭ :
★ ಹೊಸ ಫೀಚರ್ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಲಭ್ಯ,
★ ಒಂದೇ ಬಾರಿ ಗರಿಷ್ಠ 100 ಫೋಟೋ ಮತ್ತು ವಿಡಿಯೋ ಕಳುಹಿಸಬಹುದು.
ವಾಟ್ಸ್ ಆಪ್ ಬಳಕೆದಾರರಿಗೆ ಕಂಪನಿಯು ಭರ್ಜರಿ ಫೀಚರ್ ಗಳನ್ನು ಒದಗಿಸಿದ್ದು, ಇನ್ನು ಮುಂದೆ ಬಳಕೆದಾರರು 100 ಫೋಟೋ ಅಥವಾ ವಿಡಿಯೋಗಳನ್ನು ಒಂದೇ ಬಾರಿ ಕಳುಹಿಸಬಹುದು.
ಈ ಹೊಸ ಫೀಚರ್ ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಲಭ್ಯವಿದೆ. ಹೊಸ ಫೀಚರ್ ಗಳು ದೊರಕಬೇಕಾದರೆ ಗೂಗಲ್ ಪ್ಲೇಸ್ಟೋರ್ ಅಥವಾ ಆಪಲ್ ಸ್ಟೋರ್ ಗೆ ಹೋಗಿ ವಾಟ್ಸ್ ಆಪ್ ಅಪ್ಡೇಟ್ ಮಾಡಿಕೊಳ್ಳಬೇಕು.
ವಿಡಿಯೋ ಹಂಚಿಕೊಳ್ಳುವುದು ಹೇಗೆ ?
ಇದಕ್ಕಾಗಿ ನೀವು ಲೇಟೆಸ್ಟ್ ವರ್ಷನ್ ನ ವಾಟ್ಸ್ ಆಪ್ ಗೆ ಅಪ್ ಗ್ರೇಡ್ ಆಗಬೇಕು. ಬಳಿಕ ವಾಟ್ಸ್ ಆಪ್ ನಲ್ಲಿ ಯಾರಿಗಾದರೂ ಅತ್ಯಧಿಕ ಫೋಟೋಸ್, ವೀಡಿಯೋಸ್ ಕಳುಹಿಸಬಹುದು. ಗರಿಷ್ಠ 100 ರವರೆಗೆ ಫೋಟೋ ಅಥವಾ ವಿಡಿಯೋ ಫೈಲ್ ಗಳನ್ನು ಕಳುಹಿಸಬಹುದು.
ವಾಟ್ಸ್ ಆಪ್ ಗೆ ಯಾವೆಲ್ಲ ಹೊಸ ಫೀಚರ್ ಗಳು ಬಂದಿವೆ?
✷ ಇನ್ನು ಮುಂದೆ ಬಳಕೆದಾರರು ಒಂದೇ ಬಾರಿ ಗರಿಷ್ಠ 100 ಫೋಟೋ ಅಥವಾ ವಿಡಿಯೋಗಳನ್ನು ಕಳುಹಿಸಬಹುದು. ಈವರೆಗೆ 30 ಫೋಟೋ ಅಥವಾ ವಿಡಿಯೋ ಕಳುಹಿಸಲು ಅವಕಾಶವಿತ್ತು.
✷ನೂತನ ಫೀಚರ್ ನಲ್ಲಿ ಡಾಕ್ಯುಮೆಂಟ್ ಕಳುಹಿಸುವಾಗ ಅದಕ್ಕೆ ಕ್ಯಾಪ್ಚ್ ನ್ ಹಾಕುವ ಅವಕಾಶವಿದೆ.
✷ದೊಡ್ಡ ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಸಬ್ಜೆಕ್ಟ್ ಮತ್ತು ಡಿಸ್ಕ್ರಿಪಿಷನ್ ನಲ್ಲಿ ಹೆಚ್ಚಿನ ವಿವರ ನಮೂದಿಸಬಹುದು.
✷ಬಳಕೆದಾರರು ಇನ್ನು ಮುಂದೆ ಪರ್ಸನಲೈಜ್ಡ್ ಅವತಾರ್ ಗಳನ್ನು ರಚಿಸಿಕೊಳ್ಳಬಹುದು. ಅದನ್ನು ಪ್ರೊಫೈಲ್ ಆಗಿಯೂ ಬಳಸಬಹುದು. ಈ ಆಯ್ಕೆ ಬೇಕಿದ್ದರೆ ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ ಅವತಾರ್ ಎಂಬ ಆಯ್ಕೆಯಿದೆ.
ಭವಿಷ್ಯದಲ್ಲಿ ಇನ್ನಷ್ಟು ಫೀಚರ್ಸ್
ಮುಂದಿನ ದಿನಗಳಲ್ಲಿ ವಾಟ್ಸ್ ಆಪ್ ಧ್ವನಿ ಸಂದೇಶವನ್ನು ಅಕ್ಷರ ರೂಪಕ್ಕೆ ಪರಿವರ್ತಿಸುವ ಪ್ರಯತ್ನದಲ್ಲಿದೆ. ಯಾರಾದರೂ ವಾಯ್ಸ್ ರೆಕಾರ್ಡ್ ಕಳುಹಿಸಿದರೆ ಆ ಧ್ವನಿಯಲ್ಲಿರುವ ಸಂದೇಶವನ್ನು ಅಕ್ಷರ ರೂಪದಲ್ಲಿ ಓದುವ ಅವಕಾಶ ಭವಿಷ್ಯದಲ್ಲಿ ದೊರಕಲಿದೆ. ಆದರೆ, ಈ ಫೀಚರ್ ಸದ್ಯ ಅಭಿವೃದ್ಧಿ ಹಂತದಲ್ಲಿದ್ದು, ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಧ್ವನಿ ಸಂದೇಶಗಳನ್ನು ಸ್ಟೇಟಸ್ ಅಪಡೇಟ್ ಆಗಿ ಹಂಚಿಕೊಳ್ಳುವ ಅವಕಾಶವನ್ನು ವಾಟ್ಸ್ ಆಪ್ ತರಲಿದೆ. ಪ್ರಸ್ತುತ ನಾವು ಫೋಟೋ ಮತ್ತು ವಿಡಿಯೋ ಹಾಗೂ ಬರಹಗಳನ್ನು ಮಾತ್ರ ಸ್ಟೇಟಸ್ ರೀತಿಯಲ್ಲಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.
ಚಾಟ್ ಪಟ್ಟಿ ಮತ್ತು ನೋಟಿಫಿಕೇಶನ್ ಮೂಲಕ ಕಂಟ್ಯಾಕ್ಟರ್ ಗಳನ್ನು ನಿರ್ಬಂಧಿಸಲು ಅಥವಾ ಬ್ಲಾಕ್ ಮಾಡಲು ಎರಡು ಹೊಸ ಶಾರ್ಟ್ ಕಟ್ ಗಳನ್ನು ವಾಟ್ಸ್ ಆಪ್ ನೀಡಲಿದೆ. ಸ್ಟೇಟಸ್ ಅಪಡೇಟ್ ಗಳನ್ನು ವರದಿ ಮಾಡಲು ಬಳಕೆದಾರರಿಗೆ ಅವಕಾಶ ನೀಡುವ ಹೊಸ ಸಾಮರ್ಥ್ಯವನ್ನು ಸೇರಿಸಲು ವಾಟ್ಸ್ ಆಪ್ ಪ್ರಯತ್ನಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ
@@@@@@@@@@@@@@@@@@@@@@@@@
Tags
Social