ಬಿತ್ತನೆ ಬೀಜಕ್ಕೆ ಮುಂಗಡು ಹಣ : ಸಿಎಂ ಬೊಮ್ಮಾಯಿ

ಬಿತ್ತನೆ ಬೀಜಕ್ಕೆ ಮುಂಗಡು ಹಣ : ಸಿಎಂ ಬೊಮ್ಮಾಯಿ 



              ಬರುವ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜಕ್ಕೆ ರೈತರಿಗೆ ರೂ. 10 ಸಾವಿರ ನೆರವು ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ನಗರದ ದಿ. ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ 67 ಲಕ್ಷ ರೈತರಿಗೆ ಈ ಲಾಭ ದೊರಕಿಸಿ ಕೊಡಲಾಗುವುದು. ರೈತರಿಗೆ ಮೊಟ್ಟ ಮೊದಲಬಾರಿಗೆ ಲೈಫ್ ಇನ್ಸೂರೆನ್ಸ್ ಜಾರಿಗೆ ತರಲಾಗಿದೆ. ರೂ 180 ಕೋಟಿ ಇನ್ಸೂರೆನ್ಸ್ ರೈತರ ಪರವಾಗಿ ಸರ್ಕಾರವೇ ತುಂಬಲಿದೆ. ರೈತ ಮರಣ ಹೊಂದಿದರೆ ರೂ ಎರಡು ಲಕ್ಷ ಪರಿಹಾರ ನೀಡಲಾಗುವುದು. ರೈತ ಕೂಲಿಕಾರರಿಗೆ ಪ್ರತಿ ತಿಂಗಳು ರೂ ಒಂದು ಸಾವಿರ ನೀಡುವ ಯೋಜನೆ ಜಾರಿಗೆ ತರಲಾಗುವುದು, ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ, ರೈತರು ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸಿಕೊಡಲು ಉಚಿತ ಕಾಲೇಜು ಶಿಕ್ಷಣ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಭೂ ರಹಿತರಿಗೆ ಭೂಮಿ ಖರೀದಿಗೆ ಒಂದು ಎಕರೆ ರೂ 20 ಲಕ್ಷ ಸಹಾಯಧನ ನೀಡಿಕೆ, ವಿದ್ಯಾರ್ಥಿ ನಿಲಯಗಳಲ್ಲಿ 30 ಸಾವಿರ ಪ್ರವೇಶ ಸಂಖ್ಯೆ ಹೆಚ್ಚಳ ಮಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ  ವರ್ಗ ಹಾಗೂ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುವ ತೀರ್ಮಾನವನ್ನು ನಾವು ಕೈಗೊಂಡಿದ್ದೇವೆ ಎಂದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು