ರಾಜ್ಯ ಸರ್ಕಾರ ಸಿ.ಎಂ ಕಿಸಾನ್ ಸಮ್ಮಾನ್ ಯೋಜನೆಯ ಹಣ ಯಾವಾಗ ಜಮಾ ಆಗುತ್ತದೆ ಗೊತ್ತಾ?
ಕೇಂದ್ರ ಸರ್ಕಾರವು ಕೈಗೊಂಡ ಹಲವು ಯೋಜನೆಗಳಲ್ಲಿ ರೈತರಿಗಾಗಿ ಮಾಡಿದ ಪಿ ಎಂ ಕಿಸಾನ್ ಸಮ್ಮಾನ್ ಯೋಜನೆ ಒಂದು ಶ್ರೇಷ್ಠ ಯೋಜನೆ ಆಗಿದೆ. ಈ ಯೋಜನೆಯ ಮುಖಾಂತರ ನಮ್ಮ ದೇಶದ ಅನ್ನದಾತನಾಗಿರುವ ರೈತರು ವರ್ಷಕ್ಕೆ ಆರು ಸಾವಿರ ರೂಗಳನ್ನು ಕೇಂದ್ರ ಸರ್ಕಾರದ ವತಿಯಿಂದ ಮೂರೂ ಕಂತುಗಳಲ್ಲಿ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಸಹಾಯಧನವನ್ನು ಪಡೆಯುತ್ತಿದ್ದಾರೆ. ಈಗಾಗಲೇ ದೇಶದ ೧14 ಕೋಟಿ ರೈತರು ಇದರ ಸದುಪಯೋಗ ಪಡೆದು ಕೊಳ್ಳುತ್ತಿದ್ದಾರೆ.
ಅದೇ ರೀತಿ ಕರ್ನಾಟಕ ರಾಜ್ಯ ಸರ್ಕಾರವು ಕೂಡ ಇದೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕರ್ನಾಟಕದ ರೈತರಿಗೆ ಎರಡು ಕಂತುಗಳಲ್ಲಿ 4000 ಹಣಗಳನ್ನು ನೀಡಿ ಇಡೀ ನಮ್ಮ ರಾಜ್ಯದ ರೈತರುಗಳಿಗೆ ಇನ್ನು ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ. ಇದುವರೆಗೆ ರೈತರಿಗಾಗಿ ಮಾಡಿದ್ದ ಎಲ್ಲಾ ಯೋಜನೆಗಳಿಗಿಂತಲೂ ತುಂಬಾ ಪರಿಣಾಮಕಾರಿಯಾಗಿ ಇದು ದೇಶದ ಕಡೆಗೆ ರೈತನವರಿಗೂ ಕೂಡ ತಲುಪುತ್ತಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಿ, ಬೇಕಾಗಿರುವ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ನೀಡಿರುವ ಎಲ್ಲಾ ರೈತರಿಗೂ ಕೂಡ ಅವರ ಬ್ಯಾಂಕ್ ಖಾತೆಗೆ ಈ ಹಣ ಜಮೆ ಆಗುತ್ತಿದೆ ಮತ್ತು ಹೊಸದಾಗಿ ಯೋಜನೆಗೆ ಅರ್ಜಿ ಸಲ್ಲಿಸುವವರು ಕೂಡ ಇದೆ ನಿಯಮವನ್ನು ಅನುಸರಿಸಿ ಅರ್ಜಿ ಸಲ್ಲಿಸಿದರೆ ಅವರಿಗೂ ಕೂಡ ಮುಂದಿನ ಕಂತುಗಳಿಂದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಧನಸಹಾಯ ಖಾತೆಗೆ ಬರಲಿದೆ. ಈಗಷ್ಟೆ ಫೆಬ್ರವರಿ 27ರಂದು ಕೇಂದ್ರ ಸರ್ಕಾರದಿಂದ ಬಿಡುಗಡೆ ಆಗಬೇಕಾಗಿದ್ದ 13ನೇ ಕಂತಿನ ಹಣ ಬಿಡುಗಡೆ ಆಗಿದೆ. ಬೆಳಗಾವಿ ಬಿಜೆಪಿ ಸಮಾವೇಶಕ್ಕೆ ಬಂದಿದ್ದ ಮಾನ್ಯ ಪ್ರಧಾನ ಮಂತ್ರಿಗಳು ಆ ಕಾರ್ಯಕ್ರಮದಲ್ಲಿ ಇದಕ್ಕೆ ಚಾಲನೆ ನೀಡಿದ್ದಾರೆ.
ಈ ಆರ್ಥಿಕ ವರ್ಷದಲ್ಲಿ ಕರ್ನಾಟಕ ರಾಜ್ಯದಿಂದ ರೈತರಿಗೆ ಬಿಡುಗಡೆ ಆಗಬೇಕಾಗಿದ್ದ ಸಹಾಯಧನದಲ್ಲಿ ಒಂದು ಕಂತಿನ ಹಣವಾಗಿ ಬಿಡುಗಡೆ ಆಗಿದೆ. ಇನ್ನೂ ಒಂದು ಕಂತಿನ ಹಣ ಬಿಡುಗಡೆ ಆಗಬೇಕಾಗಿದೆ. ಅದು ಯಾವಾಗ ಬಿಡುಗಡೆ ಆಗುತ್ತದೆ ಅಥವಾ ಆ ಆಹ್ವಾನ ಈಗಾಗಲೇ ನಿಮ್ಮ್ ಅಕೌಂಟ್ಗೆ ಬಂದಿದೆಯಾ ಮತ್ತು ನಿಮ್ಮ ಅರ್ಜಿ ಪರಿಸ್ಥಿತಿ ಯಾವ ಸ್ಥಿಯಲ್ಲಿ ಇದೆ ಎನ್ನುವುದು ಈ ರೀತಿ ಚೆಕ್ ಮಾಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ.
⭐ ಮೊದಲಿಗೆ ಅಧಿಕೃತ ವೆಬ್ ಸೈಟ್ ಭೇಟಿ ಕೊಟ್ಟು ಅಲ್ಲಿ ಸ್ಥಿತಿ ಪರಿಶೀಲಿಸಿ ಎನ್ನುವುದು ಕ್ಲಿಕ್ ಮಾಡಿ.
⭐ ಆಗ ಹಲವು ಆಯ್ಕೆಗಳು ತೆಗೆದುಕೊಳ್ಳುತ್ತದೆ.
⭐ ಆ ಎಲ್ಲಾ ಯೋಜನೆಗಳ ಪೈಕಿ ಪಿ ಎಂ ಕಿಸಾನ್ ಸಮ್ಮಾನ್ ಯೋಜನೆ ಎಂದು ಇರುವ ಬಳಿ ಮಾಡಿದರೆ ಪೇಜ್ ತೆಗೆದುಕೊಳ್ಳುತ್ತದೆ.
ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ !! ರಾಷ್ಟೀಯ ಸೇವಾ ಕಾರ್ಯಕರ್ತರಾಗಿ ಅರ್ಜಿ ಆಹ್ವಾನ
⭐ ಆಗ ಅಲ್ಲಿ ಕೆಲ ವಿವರಗಳನ್ನು ಕೇಳಿರುತ್ತಾರೆ. ಅಲ್ಲಿ ಪಿಎಂ ಕೆಐಡಿ ಎಂದು ಕೇಳಿರುವಲ್ಲಿ ರಾಜ್ಯ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯ ಐಡಿ ನಂಬರ್ ಹಾಕಿದರೆ ಅದರ ಪೂರ್ತಿ ವಿವರ ತೆರೆದುಕೊಳ್ಳುತ್ತದೆ. ಈವರೆಗೆ ಎಷ್ಟು ಕಂತುಗಳ ಹಣ ಬಿಡುಗಡೆ ಆಗಿದೆ ಮುಂದಿನ ಕಂತುಗಳ ಹಣ ಯಾವಾಗ ನಿರೀಕ್ಷಿಸಬಹುದು ಎನ್ನುವ ಮಾಹಿತಿಗಳು ಸಿಗುತ್ತದೆ. ಇದೆ ರೀತಿಯ ಪ್ರೋಸೆಸ್ ಇಂದ ಕೇಂದ್ರ ಸರ್ಕಾರದ ಕಂತುಗಳ ಬಗ್ಗೆ ವಿವರ ಕೂಡ ತಿಳಿದುಕೊಳ್ಳಬಹುದು.
⭐ ಅದರಲ್ಲೇ ಇರುವ ಫಲಾನುಭವಿಗಳ ಆಯ್ಕೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ ತಾಲೂಕು ಮತ್ತು ಗ್ರಾಮದ ವಿವರಗಳನ್ನು ತುಂಬಿದರೆ, ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಫಲಾನುಭವಿಗಳ ಹೆಸರು ತೋರುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಖಚಿತಪಡಿಸಿಕೊಂಡು ನೀವು ಇದರ ಸಹಾಯಧನ ಪಡೆಯಲಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಬಹುದು.