ಅಶ್ವಥಿ ಯಶಸ್ಸಿನ ಸ್ಟೋರಿ ಇಲ್ಲಿದೆ

4ನೇ ಪ್ರಯತ್ನದಲ್ಲೇ UPSC ಪರೀಕ್ಷೆ ಪಾಸ್ ಆದ ಕಟ್ಟಡ ಕಾರ್ಮಿಕನ ಮಗಳು ಸಂಪೂರ್ಣ ಮಾಹಿತಿ ಇವತ್ತಿನ ಲೇಖನದಲ್ಲಿ.......👇👇




IAS ಯಶಸ್ವಿಯಾದ ಸ್ಟೋರಿ :

       UPSC ನಡೆಸುವ ಅತಿ ಕಠಿಣ ಪರೀಕ್ಷೆಯಾದ ನಾಗರೀಕ ಸೇವೆಗಳ ಪರೀಕ್ಷೆಯನ್ನು ಪಾಸ್ ಮಾಡಬೇಕು ಎಂದರೆ ಕೋಚಿಂಗ್ ಬೇಕಿಲ್ಲ. ಸಿಟಿಯಲ್ಲೇ ಇದ್ದು ಓದಬೇಕಿಲ್ಲ. ಹಾಗೆಯೆ ಪ್ರಾಥಮಿಕ ಶಿಕ್ಷಣದಿಂದಲೂ ಪದವಿ ವರೆಗೆ ಇಂಗ್ಲಿಷ್ ಮಾಧ್ಯಮದಲ್ಲೇ ಓದಲೇಬೇಕು ಎಂದೇನಿಲ್ಲ. ಅದಕ್ಕೆ ಶ್ರಮ ಬೇಕು. ಗುರಿ ಇರಬೇಕು. ಒಮ್ಮೆ ಸೋತೆನೆಂದು ಗುರಿಯನ್ನು ಕೈಬಿಡದಂತಹ ಛಲ ಇರಬೇಕು. ಇವುಗಳ ಸಾಲಿಗೆ ಮತ್ತೊಂದು ಯಶೋಗಾಥೆಯನ್ನು ಇಂದಿನ ಲೇಖನದಲ್ಲಿ ನೀಡಿದ್ದೇವೆ.

ಕಟ್ಟಡ ಕಾರ್ಮಿಕನ ಮಗಳಾದ ಎಸ್ ಅಶ್ವಥಿ ಮೂಲತಃ ತಿರುವನಂತಪುರಂನವರು. ಇವರು ತಮ್ಮ 4ನೇ ಪ್ರಯತ್ನದಲ್ಲಿ 2020 ರಲ್ಲಿ UPSC ಪರೀಕ್ಷೆ ಪಾಸ್ ಮಾಡುವ ಮೂಲಕ 481 All India Rank ಗಳಿಸಿದ್ದರು. ಇವರ ಯಶಸ್ವಿನಿ ಹಾದಿ ಹಲವರಿಗೆ ಸ್ಫೂರ್ತಿ ನೀಡದೆ ಇರದು.

ಅಶ್ವಥಿ ತಾವು ಚಿಕ್ಕಂದಿನಿಂದಲೇ, ೮ನೇ ತರಗತಿಯಲ್ಲಿ ಓದುವಾಗಲೇ ಐಎಎಸ್ ಅಧಿಕಾರಿ ಆಗುವ ಗುರಿ ಇಟ್ಟುಕೊಂಡವರು. ಆದರೂ ಸಹ ತಿರುವನಂತಪುರಂನ ಬರ್ಟನ್ ಹಿಲ್ ಇಂಜಿನಿಯರಿಂಗ್ ಕಾಲೇಜಿಗೆ ಸೇರಿ ಬಿಇ ಪದವಿ ಪಡೆದರು. ಅಂತಿಮ ವರ್ಷದಲ್ಲಿ ಓದುವಾಗಲೇ ಕೊಚ್ಚಿನ್ ನ TCS  ಕಂಪನಿಗೆ ಕ್ಯಾಂಪಸ್ ಇಂಟರ್ವ್ಯೂವ್ ನಲ್ಲಿ ಸೆಲೆಕ್ಟ್ ಆದರೂ. 2015 ರಲ್ಲಿ ಇಲ್ಲಿ ಕೆಲಸ ಆರಂಭಿಸಿದ ನಂತರ ಇವರುUPSC ಪರೀಕ್ಷೆಗೆ ತಯಾರಿ ಆರಂಭಿಸಿದ್ದು. 2017 ರಲ್ಲಿ ತಮ್ಮ TCS ಐಟಿ ಜಾಬ್ ಗೆ ವಿದಾಯ ಹೇಳುವ ಮೂಲಕ, UPSC  CSE  ಪರೀಕ್ಷೆಗೆ ಓದಲು ಪೂರ್ಣ ಸಮಯ ನೀಡಲು ಆರಂಭಿಸಿದರು. ನಂತರದ ಮೂರೂ ವರ್ಷಗಳಲ್ಲಿ ಇವರು ಯಶಸ್ಸು ಪಡೆದರು.


ಅಂದಹಾಗೆ ಅಂತಹ ಛಲದೊಂದಿಗೆ ಒಂದಲ್ಲಾ ಎರಡಲ್ಲಾ ಮೂರೂ ಬರಿ ಸೋತರು, ನಿರಂತರ ಓದಿನೊಂದಿಗೆ ನಾಲ್ಕನೇ ಬಾರಿಗೆ UPSC ಪರೀಕ್ಷೆ ಪಾಸ್ ಮಾಡಿದವರು ಇಂದು ಪರಿಚಯಿಸುತ್ತಿರುವ ಎಸ್ ಅಶ್ವಥಿ ರವರು.

ಓದಿದ್ದು ಇಂಜಿನಿಯರಿಂಗ್ ಆದರೂ, ಟಿಸಿಎಸ್ ನ ಉತ್ತಮ ಕಂಪನಿಯಲ್ಲಿ ಕೈತುಂಬಾ ಸಂಬಳ ಪಡೆಯುವ ಹುದ್ದೆಯನ್ನು ಗಿಟ್ಟಿಸಿ, ಅದನ್ನು ಬೇಡವೆಂದು ಬಿಟ್ಟು, ದೇಶದ ಆಡಳಿತ ಸೇವೆಗೆ ಸೇರಲು ನಾಲ್ಕೇ ವರ್ಷ ಶ್ರಮಪಟ್ಟ ಇವರ ಯಶಸ್ಸಿನ ಹಾದಿ ಸಾವಿರಾರು ಆಕಾಂಕ್ಷಿಗಳಿಗೆ ಸ್ಫೂರ್ತಿ ಆಗಿದೆ. ಬಹುಶಃ ಉದ್ಯೋಗಕ್ಕೆ ಸೇರದೆ ಓದಲು ಆರಂಭಿಸಿದ್ದರೇ ಇವರ ಸೇವೆ ದೇಶದ ಜತೆಗೆ ಮೂರು ವರ್ಷ ಮೊದಲೇ ಸಿಗುತ್ತಿತ್ತೇನೋ ......

ಹೌದು,,,, ತಿರುವನಂತಪುರಂ ಮೂಲದವರಾದ ಎಸ್ ಅಶ್ವಥಿ ರವರ ಯಶಸ್ಸಿನ ಹಾದಿಯೂ ಚಪ್ಪಾಳೆ ಹೊಡೆದಷ್ಟು ಸುಲಭವಾಗಿರಲಿಲ್ಲ. 
ಅವರು ನಿರಂತರ ಪ್ರಯತ್ನದೊಂದಿಗೆ ನಾಲ್ಕನೇ ಬಾರಿಗೆ UPSC CSE ಪರೀಕ್ಷೆಯಲ್ಲಿ ಪಾಸ್ ಮಾಡಿದ್ದೂ, ಅಷ್ಟೇ ಅಲ್ಲದೆ 2020 ನೇ ಬ್ಯಾಚ್ ನಲ್ಲಿ 481 ನೇ Rank ನಲ್ಲಿ UPSC ಗೆದ್ದ ಖ್ಯಾತಿ ಇವರದ್ದಾಗಿತ್ತು. ಕಟ್ಟಡ ಕಾರ್ಮಿಕರ ಮಗಳಾದ ಇವರು ತಮ್ಮ ನಿರಂತರ ಓದು ಹಾಗೂ ಪರಿಶ್ರಮದೊಂದಿಗೆ ಸೋಲಿನ ಮೆಟ್ಟಿಲುಗಳನ್ನು ಮೆಟ್ಟಿ ನಿಂತವರು. ತಮ್ಮ 27 ನೇ ವಯಸ್ಸಿಗೆ ಭಾರತದ ಐಎಎಸ್ ಅಧಿಕಾರಿ ಆದರು.



 

ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ವಾಟ್ಸಪ್ಪ್ ಗ್ರೂಪ್ ಸೇರ್ಪಡೆಗೊಳ್ಳಿ




@@@@@@@@@@@@@@@@@@@@@@@@@










ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು