ಕಾರ್ಮಿಕ ಕಾರ್ಡ್ ಹೊಂದಿರುವವರಿಗೆ ಉಚಿತ ಟ್ಯಾಬ್ ಗಾಗಿ ಅರ್ಜಿ ಪ್ರಾರಂಭ:

ಕಟ್ಟಡ ಕಾರ್ಮಿಕರ  ಮಕ್ಕಳಿಗೆ ಉಚಿತ ಟ್ಯಾಬ್ ಪಡೆಯುವ ಅವಕಾಶ, ಇಲ್ಲಿಗೆ ಸಂಪೂರ್ಣ ಮಾಹಿತಿ..........


          ಕಾರ್ಮಿಕ ಕಾರ್ಡ್ ಹೊಂದಿದ ಎಲ್ಲಾ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಈ ಅವಕಾಶವನ್ನು ಒದಗಿಸಲಾಗಿದೆ. ಈ ಟ್ಯಾಬ್ ಗಳನ್ನು ಪಡೆಯಲು ಬೇಕಾದ ಅರ್ಹತೆಗಳು ಯಾವುವು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಯಾವ ದಾಖಲೆಗಳು ಬೇಕಾಗುತ್ತವೆ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಡಿ ದರ್ಜೆ ನೌಕರರಿಗೆ ಸಿಹಿ ಸುದ್ಧಿ ಕೊಟ್ಟ ಸರ್ಕಾರ ..........

ಕಾರ್ಮಿಕ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ ೨೦೨೩:

ಕಾರ್ಮಿಕ ಕಾರ್ಡ್ ಹೊಂದಿದ ಪೋಷಕರ ಮಕ್ಕಳಿಗೆ ಅಂದರೆ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಜಿಲ್ಲೆಗಳಲ್ಲಿ ಉಚಿತ ಟ್ಯಾಬ್ ಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಮೊದಲನೆಯ ಹಂತದ ಟ್ಯಾಬ್ ವಿತರಣೆಯಲ್ಲಿ ಮೈಸೂರಿನ ವಿದ್ಯಾರ್ಥಿಗಳು ಈಗಾಗಲೇ ೪೦೦ಕ್ಕೂ ಹೆಚ್ಚಿನ ಉಚಿತ ಟ್ಯಾಬ್ ಗಳನ್ನೂ ಪಡೆದಿದ್ದಾರೆ. ಅಲ್ಲದೇ, ಬೆಳಗಾವಿ ಬಳ್ಳಾರಿ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಈಗಾಗಲೇ ಕೆಲವು ದಿನಗಳ, ಹಿಂದೆ ಎಷ್ಟೇ ಉಚಿತ ಟ್ಯಾಬ್ ಗಳನ್ನು ವಿತರಣೆ ಮಾಡಿದ್ದಾರೆ. ನೀವೇನಾದರೂ ಸರ್ಕಾರದ ಈ ಯೋಜನೆಯಡಿಯಲ್ಲಿ  ಉಚಿತ ಟ್ಯಾಬ್ ಗಳನ್ನು ಪಡೆಯುವಂತಹ ಆಸಕ್ತಿ ಇದ್ದರೆ, ಈ ಮಾಹಿತಿಯಂತೆ ಅರ್ಜಿ ಹಾಕಬೇಕಾಗುತ್ತದೆ.

ಅರ್ಜಿಯನ್ನು ಸಲ್ಲಿಸುವ ವಿಧಾನ :

ಎಲ್ಲಾ ದಾಖಲೆಯೊಂದಿಗೆ ನಿಮ್ಮ ಜಿಲ್ಲೆಯ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ. ಅಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಆನ್ಲೈನ್ ಮುಖಾಂತರ ಸಲ್ಲಿಸುವ ಆಯ್ಕೆ ಇರುವುದಿಲ್ಲ. ವಿದ್ಯಾರ್ಥಿಯ ಅವಶ್ಯಕತೆ ಹಾಗೂ ದಾಖಲೆಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಿ ಟ್ಯಾಬ್ ಗಳನ್ನು ವಿತರಣೆ ಮಾಡುತ್ತಾರೆ.

ಉಚಿತ ಟ್ಯಾಬ್ ಗಾಗಿ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:

☆  ವಿದ್ಯಾರ್ಥಿಯರ ತಂದೆ ಅಥವಾ ತಾಯಿ ಕಡ್ಡಾಯವಾಗಿ ಕಾರ್ಮಿಕ ಕಾರ್ಡನ್ನು ಹೊಂದಿರಬೇಕು 
☆  ವಿದ್ಯಾರ್ಥಿಯು ಇತರೆ ಯೋಜನೆಗಳ ಅಡಿಯಲ್ಲಿ, ಯಾವುದೇ ರೀತಿಯ ಟ್ಯಾಬ್ ಗಳನ್ನು ಈಗಾಗಲೇ ಪಡೆದಿರಬಾರದು.
☆  ಕರ್ನಾಟಕ ನಿವಾಸಿಯಾಗಿರಬೇಕು. 
☆  ವಿದ್ಯಾರ್ಥಿಯು ೯ನೇ ಹತ್ತನೇ ತರಗತಿಯಲ್ಲಿ ಓದುತ್ತಿರಬೇಕು.


ಮುಖ್ಯ ದಾಖಲೆಗಳು:

👉 ಕಾರ್ಮಿಕ ಕಾರ್ಡ್ ದಾಖಲಾತಿ 
👉 ಆಧಾರ್ ಕಾರ್ಡ್ 
👉 ವ್ಯಾಸಂಗ ಪ್ರಮಾಣ ಪಾತ್ರ 
👉 ರೇಷನ್ ಕಾರ್ಡ್ 
👉 ಹಿಂದಿನ ಯೋಜನೆಗಳಲ್ಲಿ ಟ್ಯಾಬ್ ಪಡೆಯದೇ ಇರುವುದರ ಅಫಿಡವಿಟ್ ನೀಡಬೇಕು.






ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು